🔥 TRENDING हाथीडोल और बुढ़ार में सड़क पर रखे बड़े... दीपावली का त्यौहार मनाने के लिए हर कोई... Delhi steps up road‑cleaning drive as... शहडोल पुलिस का बड़ा खुलासा: 8 लाख 71 ह... Nirbhai Singh का निधन बिहार विधान परिषद भर्ती: 43 अभ्यर्थियो...
07 Nov 2026•
ગુજરાતી मराठी ਪੰਜਾਬੀ বাংলা

ಬೆಟ್ಟದೂರಿನಲ್ಲಿ ನಕಲಿ ವೈದ್ಯರ ಹಾವಳಿ ಆರೋಪ: ಆರೋಗ್ಯ ಇಲಾಖೆ ಸಂಪೂರ್ಣ ಕಾರ್ಯಾಚರಣೆಗೆ ಮುಂದಾಗಲಿ - ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ, ಸೀಲ್‌ಗೆ ಸಾರ್ವಜನಿಕರ ಆಗ್ರಹ - ಕೆಲ THO ವಿರುದ್ಧ ಲಂಚದ ಗಂಭೀರ ಆರೋಪ

✍️ Reporter: Ningappa 🗓 07 Nov 2026, 04:12 PM 👁 7
Share: 💬 WhatsApp 📘 Facebook 𝕏 Post

ಮಾನ್ವಿ ತಾಲೂಕಿನ ಬೆಟ್ಟದೂರಿನಲ್ಲಿ ನಕಲಿ ವೈದ್ಯನ ವಿಡಿಯೋ ವೈರಲ್ - ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ಧ ಸಂಪೂರ್ಣ ಕಾರ್ಯಾಚರಣೆಗೆ ಆಗ್ರಹ - ಕೆಲ ತಾಲೂಕು ಆರೋಗ್ಯಾಧಿಕಾರಿಗಳು ನಕಲಿ ವೈದ್ಯರೊಂದಿಗೆ ಶಾಮೀಲು ಎಂಬ ಸಾರ್ವಜನಿಕ ಆರೋಪ - ಅನಧಿಕೃತ ಕ್ಲಿನಿಕ್ ಸೀಲ್ ಮಾಡಿ, ನಿಷ್ಪಕ್ಷಪಾತ ತನಿಖೆಗೆ ಒತ್ತಾಯ

ರಾಯಚೂರು: ಜಿಲ್ಲಾ ಆರೋಗ್ಯಾಧಿಕಾರಿ ಮೇಡಂ ಅವರು ರಾಯಚೂರು ಜಿಲ್ಲೆಗೆ ಬಂದ ನಂತರ ನಕಲಿ ವೈದ್ಯರ ವಿರುದ್ಧ ಒಂದಷ್ಟು ಕ್ರಮಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ ಜಿಲ್ಲೆಯಲ್ಲಿ ಸಂಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಸಿ ಅನಧಿಕೃತ ವೈದ್ಯಕೀಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೆಟ್ಟದೂರಿನಲ್ಲಿ ನಕಲಿ ವೈದ್ಯನ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಈ ಆಗ್ರಹ ಮತ್ತಷ್ಟು ಮುನ್ನೆಲೆಗೆ ಬಂದಿದೆ.

ಕೆಲವು ತಾಲೂಕು ಆರೋಗ್ಯಾಧಿಕಾರಿಗಳು ನಕಲಿ ವೈದ್ಯರೊಂದಿಗೆ ಶಾಮೀಲಾಗಿ ಲಂಚ ಪಡೆದು ಅವರಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ದಾಳಿ ನಡೆಸುವುದು, ನೋಟಿಸ್ ನೀಡುವುದು, ನಂತರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ ಎಂಬ ಆರೋಪವೂ ಇದೆ.

ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಬೆಟ್ಟದೂರು ಸೇರಿದಂತೆ ಜಿಲ್ಲೆಯಾದ್ಯಂತ ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಬೇಕು. ಆರೋಪಿತ ಅಧಿಕಾರಿಗಳ ವಿರುದ್ಧವೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳನ್ನು ಕಾನೂನುಬದ್ಧವಾಗಿ ಸೀಲ್ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಅಮಾಯಕ ರೋಗಿಗಳ ಜೀವದ ಜೊತೆ ಆಟವಾಡಲು ಯಾರಿಗೂ ಅವಕಾಶ ನೀಡಬಾರದು. ಆರೋಗ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿಯುತ ಕಾರ್ಯಾಚರಣೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
📲Get App