🔥 ट्रेंडिंग વિરમગામ ટાઉન પોલીસની ટ્રાફિક ડ્રાઇવ આડ... ओढ़नपुर ओवरब्रिज पर पति-पत्नी की मृत्य... IFFI 2026: 'Aquí' को सर्वश्रेष्ठ फिल्म... डॉ. हसन: नवाज़ुद्दीन सिद्दीकी और दया म... હારીજ પોલીસએ હાઈવે ચાર રસ્તા પર વાહન ચ... మృతుల కుటుంబాలను పరామర్శించిన కాబోయే...
29 नव. 2026•
ગુજરાતી मराठी ਪੰਜਾਬੀ বাংলা
देश

ನ. 30ರಂದು ಬೀದರ್ ಬಸ್ ನಿಲ್ದಾಣ ಬಂದ್

✍️ रिपोर्टर: Basavaraj pujari 🗓 29 नव. 2026, 05:20 PM 👁 26
शेयर करें: 💬 WhatsApp 📘 Facebook 𝕏 Post

ಕಾರಂಜ ಸಂತ್ರಸ್ತರ ‘ಹೋರಾಟ 2.0’ ಆರಂಭ; ಸಾರ್ವಜನಿಕರು, ಸಂಘಟನೆಗಳಿಗೆ ಬೆಂಬಲದ ಮನವಿ ಬೀದರ್: ಕಾರಂಜ ಯೋಜನೆಗೆ ಭೂಮಿ ನೀಡಿದ 28 ಹಳ್ಳಿಗಳ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಆಗ್ರಹಿಸಿ ಕಾರಂಜ ಮುಳುಗಡೆ ಸ

ನ. 30ರಂದು ಬೀದರ್ ಬಸ್ ನಿಲ್ದಾಣ ಬಂದ್
ಕಾರಂಜ ಸಂತ್ರಸ್ತರ ‘ಹೋರಾಟ 2.0’ ಆರಂಭ; ಸಾರ್ವಜನಿಕರು, ಸಂಘಟನೆಗಳಿಗೆ ಬೆಂಬಲದ ಮನವಿ

ಬೀದರ್: ಕಾರಂಜ ಯೋಜನೆಗೆ ಭೂಮಿ ನೀಡಿದ 28 ಹಳ್ಳಿಗಳ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಆಗ್ರಹಿಸಿ ಕಾರಂಜ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ‘ಹೋರಾಟ 2.0’ ಆರಂಭಿಸಿದೆ. ಹೋರಾಟದ ಮೊದಲ ಹಂತವಾಗಿ ನ. 30ರಂದು ಬೆಳಿಗ್ಗೆ 9.30ಕ್ಕೆ ಬೀದರ್ ಜಿಲ್ಲಾ ಕೇಂದ್ರ ಬಸ್ ನಿಲ್ದಾಣ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಸಮಿತಿ ತಿಳಿಸಿದೆ.

ಅಂದು ಬರೀದ್ ಶಾಹಿ ಉದ್ಯಾನ ಗೇಟ್ ಬಳಿ ಸಂತ್ರಸ್ತ ರೈತರು ಜಮಾಯಿಸಿ, ಬಸ್ ನಿಲ್ದಾಣ ಬಂದ್ ಚಳವಳಿ ನಡೆಸಲಿದ್ದಾರೆ. ರೈತರ ನ್ಯಾಯಯುತ ಬೇಡಿಕೆ ಈಡೇರಿಸದೆ ವಿಳಂಬ ಮಾಡುತ್ತಿರುವ ಸರ್ಕಾರಕ್ಕೆ ಎಚ್ಚರಿಕೆ ನೀಡುವುದು ಹೋರಾಟದ ಉದ್ದೇಶವಾಗಿದೆ.

ಚಳವಳಿ ಶಾಂತಿಯುತ, ಸಂವಿಧಾನಬದ್ಧ ಹಾಗೂ ಅಹಿಂಸಾತ್ಮಕವಾಗಿ ನಡೆಯಲಿದ್ದು, ಪೊಲೀಸ್ ಇಲಾಖೆ ಮತ್ತು ಸಾರಿಗೆ ನಿಗಮದ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿದೆ. ಬಂದ್‌ನಿಂದ ಪ್ರಯಾಣಿಕರಿಗೆ ಆಗುವ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿರುವ ಸಮಿತಿ, ಸಾರ್ವಜನಿಕರು ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು ಸಹಕರಿಸುವಂತೆ ಮನವಿ ಮಾಡಿದೆ.

28 ಹಳ್ಳಿಗಳ ಸಂತ್ರಸ್ತ ರೈತರು, ಬೀದರ್ ಜನತೆ, ರೈತ, ಕನ್ನಡಪರ, ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ, ಯುವ ಸಂಘಟನೆಗಳು ಹಾಗೂ ವ್ಯಾಪಾರಿ ಸಂಘಗಳು ಹೋರಾಟಕ್ಕೆ ಬೆಂಬಲ ನೀಡಿ ಬೆಳಿಗ್ಗೆ 9.30ಕ್ಕೆ ಬರೀದ್ ಶಾಹಿ ಉದ್ಯಾನ ಗೇಟ್ ಬಳಿ ಸೇರಬೇಕು. ಮಾಧ್ಯಮಗಳು ರೈತರ ಹೋರಾಟದ ಧ್ವನಿಯನ್ನು ಸರ್ಕಾರದ ಗಮನಕ್ಕೆ ತರುವಂತೆ ಸಮಿತಿ ಮನವಿ ಮಾಡಿದೆ.
📲Get App