🔥 TRENDING Kailash Vijayvargiya Keeps Media at Ar... અમદાવાદ: ગાડી ટકરાવવાની બાબતે સગીર પર... Veteran Actress Malashree Celebrates M... અમદાવાદ: ટ્રાફિક બાબતે થયેલી બબાલમાં સ... ଭୁବନେଶ୍ୱର ବିମାନବନ୍ଦରକୁ ବଡ଼ ଝଟକା; ବନ୍ଦ... ઈડરમાં આશિષ વિદ્યાલયના વિદ્યાર્થીને મા...
25 Sep 2026•
ગુજરાતી मराठी ਪੰਜਾਬੀ বাংলা

ಶಿವಪ್ಪ ಪಲಕನಮರಡಿ ರಾಜ್ಯ ಸಂಘಟನಾ ಸಂಚಾಲಕರಾಗಿ ನೇಮಕ ಅರಕೇರಾ, ಸೆ.23: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕರಾಗಿ ದೇವದುರ್ಗ ತಾಲ್ಲೂಕಿನ ಪಲಕನಮರಡಿ ಗ್ರಾಮದ ಶಿವಪ್ಪ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಗಿದೆ.

✍️ Reporter: Khajahussain baba Jalahalli 🗓 25 Sep 2026, 11:30 AM 👁 16
Share: 💬 WhatsApp 📘 Facebook 𝕏 Post
📰 ದೇವದುರ್ಗ–ಅರಕೇರಾ | ಬ್ರೇಕಿಂಗ್ ನ್ಯೂಸ್

ಶಿವಪ್ಪ ಪಲಕನಮರಡಿ ರಾಜ್ಯ ಸಂಘಟನಾ ಸಂಚಾಲಕರಾಗಿ ನೇಮಕ

ಅರಕೇರಾ, ಸೆ.23: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕರಾಗಿ ದೇವದುರ್ಗ ತಾಲ್ಲೂಕಿನ ಪಲಕನಮರಡಿ ಗ್ರಾಮದ ಶಿವಪ್ಪ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಗಿದೆ.

ಚಿತ್ರದುರ್ಗದಲ್ಲಿ ಸೆ.23ರಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಶಿವಪ್ಪ ಅವರನ್ನು ರಾಜ್ಯ ಸಂಘಟನಾ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು.

ಸಂಘಟನೆಯ ತತ್ವ, ಸಿದ್ಧಾಂತ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನಾ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ರಾಜ್ಯ ಸಮಿತಿ ಸೂಚಿಸಿದೆ.

ಈ ಕುರಿತು ನೈಜ ದೇಸೆ ಕನ್ನಡ ದಿನಪತ್ರಿಕೆಯೊಂದಿಗೆ ಮಾತನಾಡಿದ ಶಿವಪ್ಪ ಅವರು, ಸಂಘಟನೆಯ ತತ್ವ, ಸಿದ್ಧಾಂತ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ತಮಗೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು.

ಅಲ್ಲದೆ, ಬಡವರು, ದೀನದಲಿತರು ಹಾಗೂ ಶೋಷಿತ ವರ್ಗಗಳ ಪರವಾಗಿ ಹಗಲಿರುಳು ಶ್ರಮಿಸುವುದಾಗಿ ಅವರು ಹೇಳಿದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App