🔥 ट्रेंडिंग कलेक्टर राहुल धोटे ने मंडला के आमानाला... मंडला में गौ-आधारित उत्पाद और जैविक खे... અલ્પેશ ઠાકોરનો દારૂ બંધી મુદે મોટો ખુલ... સાવરકુંડલામાં મહુવા રોડ પર અંધારાને કા... मुंबई पुलिस ने बॉलीवुड स्टारों को फैन... जिम कैविएज़ेल ने कहा, दर्शकों में अभी...
11 नव. 2026•
ગુજરાતી मराठी ਪੰਜਾਬੀ বাংলা

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಡಾ. ರಜಾಕ್ ಉಸ್ತಾದ್ ನಾಮನಿರ್ದೇಶನ

✍️ रिपोर्टर: Ningappa 🗓 11 नव. 2026, 08:01 AM 👁 20
शेयर करें: 💬 WhatsApp 📘 Facebook 𝕏 Post
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಡಾ. ರಜಾಕ್ ಉಸ್ತಾದ್ ನಾಮನಿರ್ದೇಶನ

ರಾಯಚೂರು: ಕರ್ನಾಟಕ ಸರ್ಕಾರವು ಡಾ. ರಜಾಕ್ ಉಸ್ತಾದ್ ಅವರನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ ED/581/URC/2026, ದಿನಾಂಕ 09.11.2026 ರಂದು ಈ ಕುರಿತು ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಧಿನಿಯಮ-2010 ಪ್ರಕರಣ 3(1) ಜೊತೆಯಲ್ಲಿ ಓದಲಾದ ಪ್ರಕರಣ 7(3) ರಡಿ, ಈ ಹಿಂದೆ ಸದಸ್ಯರಾಗಿದ್ದ ಪ್ರೊ. ಹೆಚ್.ಸಿ.ಬೋರಲಿಂಗಯ್ಯ ಹಾಗೂ ಪ್ರೊ. ಎಸ್.ಎ.ಪಾಟೀಲ್ ಅವರಿಗೆ ವಯೋಮಿತಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ 02 ಸದಸ್ಯರ ಹುದ್ದೆಗೆ ಡಾ. ರಜಾಕ್ ಉಸ್ತಾದ್ ಹಾಗೂ ಡಾ. ಹೆಚ್.ಜೆ.ಜಯಕುಮಾರ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.

ರಾಜ್ಯದ ಉನ್ನತ ಶಿಕ್ಷಣ ನೀತಿ, ಶೈಕ್ಷಣಿಕ ಗುಣಮಟ್ಟ ಹಾಗೂ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡುವ ರಾಜ್ಯದ ಅತ್ಯುನ್ನತ ಸಂಸ್ಥೆಯಾಗಿದೆ ಈ ಪರಿಷತ್ತು.

ಡಾ. ರಜಾಕ್ ಉಸ್ತಾದ್ ಅವರ ಸದಸ್ಯತ್ವದ ಅವಧಿಯು 09.06.2029 ರವರೆಗೆ ಇರುತ್ತದೆ.

ಈ ಸಂದರ್ಭದಲ್ಲಿ ತಮ್ಮೆಲ್ಲರ ಶುಭಾಶಯಗಳು, ಹಾರೈಕೆಗಳು ಹಾಗೂ ಮಾರ್ಗದರ್ಶನವನ್ನು ಸದಾ ಗೌರವದಿಂದ ಸ್ವೀಕರಿಸುತ್ತೇನೆ ಎಂದು ಡಾ. ರಜಾಕ್ ಉಸ್ತಾದ್ ತಿಳಿಸಿದ್ದಾರೆ.
📲Get App