🔥 TRENDING જામનગરમાં દિવાળી ટાણે ફૂડ વિભાગની લાલ... વડાલી પોલીસ સ્ટેશન દ્વારા દિવાળી પર ના... भोपाल के ग्राम तारा सेवनिया में शराब क... Three pistols, 50 rounds seized ahead... Drug dealer ‘Mausi’ arrested in Shahdo... Accused in Ex-IAS Officer’s Murder Giv...
04 Nov 2026•
ગુજરાતી मराठी ਪੰਜਾਬੀ বাংলা

ವಿದ್ಯಾರ್ಥಿಗಳು ಜೀವನದಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಿ: ನರೇಂದ್ರ

✍️ Reporter: KALLAPPA MIRJI 🗓 04 Nov 2026, 10:07 PM 👁 13
Share: 💬 WhatsApp 📘 Facebook 𝕏 Post

ಕಲಘಟಗಿ ಪಟ್ಟಣದ ಹೊರವಲಯದ ಗುಡ್ ನ್ಯೂಸ್ ಕಾಲೇಜಿನಲ್ಲಿ ಹಚ್ಚೇವು ಕನ್ನಡದ ದೀಪ' ಅಭಿಯಾನದ ಕಾರ್ಯಕ್ರಮದಲ್ಲಿ ಶಶಿಧರ ನರೇಂದ್ರ ಮಾತನಾಡಿದರು.

ಕಲಘಟಗಿ : ಕನ್ನಡ ಭಾಷೆ,ಸಾಹಿತ್ಯ,ಸಂಸ್ಕೃತಿ, ಮತ್ತು ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಆಕಾಶವಾಣಿಯ ವಿಶ್ರಾಂತ ಉದ್ಘೋಷಕರಾದ ಶಶಿಧರ ನರೇಂದ್ರ ಹೇಳಿದರು.
ಪಟ್ಟಣದ ಹೊರವಲಯದ ಗುಡ್ ನ್ಯೂಸ್ ಕಾಲೇಜಿನ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಧಾರವಾಡ ವಿದ್ಯಾವರ್ಧಕ ಸಂಘದ ಸಾಹಿತ್ಯ ಮತ್ತು ಅನುಭಾವ ಮಂಟಪ ಹಾಗೂ ಕರ್ನಾಟಕ ಸಂಘದ ಆಶ್ರಯದಲ್ಲಿ 71 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 'ಹಚ್ಚೇವು ಕನ್ನಡದ ದೀಪ' ಅಭಿಯಾನದಡಿ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರಜ್ಞೆ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಡ್ ನ್ಯೂಸ್ ಮಹಾವಿದ್ಯಾಲಯದ ಪ್ರಾಚಾರ್ಯ ಮಹೇಶ ಹೊರಕೇರಿ ಮಾತನಾಡಿ ಕನ್ನಡ, ನಾಡು, ನುಡಿ ಮತ್ತು ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವ ಹಾಗೂ ಅಭಿಮಾನ ಮೂಡಿಸುವ ಉಪಯುಕ್ತವಾಗಿವೆ ಎಂದರು.
ಎಂ.ಎನ್. ನಿಂಬಣ್ಣವರ ನಾಡಗೀತೆ ಹಾಗೂ ಅನ್ನಪೂರ್ಣ ಮತ್ತು ಸಂಗಡಿಗರು ನಿತ್ಯೋತ್ಸವ ಗೀತೆ ಹಾಡಿದರು.
ಕಾಲೇಜಿನ ಖಜಾಂಚಿ ಪ್ರವೀಣ್. ಎ, ಜಿನದತ್ತ ಹಡಗಲಿ, ರಜಿಯಾ ನಂದಿಗಟ್ಟಿ,ಅಕ್ಷತಾ ಕುಬ್ಯಾಳ,ಮಹಿಮಾ ಧೂಪದ ಇದ್ದರು.
📲Get App