🔥 TRENDING Meghalaya UDP Signals Openness to Lead... અમરેલીના ધારી તાલુકા ખીચા ગામમાં સિંહણ... Arunachal Congress rejects UN map, dec... Arunachal Pradesh CM says government i... Jammu & Kashmir Secretariat Tightens V... Supreme Court Collegium Recommends New...
11 Sep 2026
ગુજરાતી मराठी ਪੰਜਾਬੀ বাংলা

ಸೆ 12 13 ರಂದು ರಾಯಚೂರಿನಲ್ಲಿ ಮಕ್ಕಳ ಮೈತ್ರಿ ಕಾರ್ಯಕ್ರಮ ಮಲ್ಲೇಶಪ್ಪ ಹುನುಗುಂದಬಾಡ

✍️ Reporter: MAHAMAD WALI QURESHI 🗓 10 Sep 2026, 11:07 PM 👁 46
Share: 💬 WhatsApp 📘 Facebook 𝕏 Post
ಸೆ.12, 13ರಂದು ರಾಯಚೂರಿನಲ್ಲಿ ಮಕ್ಕಳ ಮೈತ್ರಿ ಕಾರ್ಯಕ್ರಮ-ಮಲ್ಲೇಶಪ್ಪ ಹುನುಗುಂದಬಾಡಾ

ನೀಡ್ 24 ನ್ಯೂಸ್

ದೇವದುರ್ಗ, ಸೆ.10-ಮಕ್ಕಳಲ್ಲಿ ದಾರ್ಶನಿಕರ, ಚಿಂತಕರ, ಮಹನೀಯರ ಸಂದೇಶಗಳ ಸ್ಮರಣೆ, ಅವರ ನಡೆ-ನುಡಿಗಳ ಚಿತ್ರಣದಿಂದ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಉದ್ದೇಶದಿಂದ ರಾಯಚೂರಿನಲ್ಲಿ ಸೆ.12 ಮತ್ತು 13ರಂದು ಮಕ್ಕಳ ಮೈತ್ರಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿರಿಯ ಧಮಾಚಾರಿ ಮಲ್ಲೇಶಪ್ಪ ಹುನುಗುಂದಬಾಡಾ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇತಿಹಾಸವನ್ನು ತಿರುಚುವ ಹುನ್ನಾರ ನಡೆಯುತ್ತಿದೆ.ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ದ್ವಂದ ನಿಲುವಿನಿಂದ ಗೊಂದಲ ವಾತಾವರಣ ನಿರ್ಮಾಣ ಗೊಳ್ಳುತ್ತಿರುವದರಿಂದ ಜಾಗೃತಿ ಅನಿವಾರ್ಯವಾಗಿದೆ.

ಮಕ್ಕಳ ಹಂತದಲ್ಲಿಯೇ ಈ ಜಾಗೃತಿ ಮೂಡಿಸು ವದು ಮತ್ತು ಡಾ.ಬಿ.ಆ‌ರ್.ಅಂಬೇಡ್ಕ‌ರವರು ಧಮ್ಮ ದೀಕ್ಷೆ ಪಡೆದು 75ವರ್ಷ ಕಳೆಯುತ್ತಿರುವ ಅ.14-2030ಕ್ಕೆ 75ಸಾವಿರ ಮಕ್ಕಳಿಂದ ಏಕಕಾಲಕ್ಕೆ ಬುದ್ಧವಂದನೆ ಕಾರ್ಯಕ್ರಮ ರೂಪಿಸುವ ಉದ್ದೇಶ

ದಿಂದ ಮಕ್ಕಳನ್ನು ಸಿದ್ಧತೆ ಮಾಡುವ ಸಂಕಲ್ಪ ಹೊಂದಲಾಗಿದೆ.ರಾಯಚೂರಿನ ಜಂಬಲದಿನ್ನಿ ರಂಗಮಂದಿರ ಸೇರಿದಂತೆ 7 ವೇದಿಕೆಗಳಲ್ಲಿ ಮಕ್ಕಳ ಕಾರ್ಯಕ್ರಮ ಗಳು ಜರುಗಲಿವೆ. ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾಪುಲೆ, ಸಾವಿತ್ರಿಬಾಯಿ ಪುಲೆ, ಕಬೀರ ಸೇರಿದಂತೆ ಅನೇಕ ಮಹನೀಯರ ವೇಷ-ಭೂಷಣಗಳನ್ನು ಹಾಕಿಕೊಂಡು ಮಕ್ಕಳು ಗಮನ ಸೆಳೆಯಲಿದ್ದಾರೆ.

ಅವರ ಸಂದೇಶ, ಚಿಂತನೆಗಳನ್ನು ಮಕ್ಕಳು ತಮ್ಮ

ತೊದಲು ನುಡಿಗಳಲ್ಲಿ ಸ್ಮರಿಸಲಿದ್ದಾರೆ. ಇಂತಹ

ಕಾರ್ಯಚಟುವಟಿಕೆಗಳಿಂದ ಪ್ರಭುದ್ಧ ಭಾರತ

ನಿರ್ಮಾಣ ಮಾಡುವ ಸದುದ್ದೇಶ ಹೊಂದಲಾಗಿದೆ.

ಪ್ರಮುಖ ವೇದಿಕೆಗೆ ಹಿರಿಯ ಹೋರಾಟಗಾರ,

ಚಿಂತಕ ಡಾ.ದೇವಿಂದ್ರ ಹೆಗ್ಗಡೆರವರ ಹೆಸರಿಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 1000 ಮಕ್ಕಳ ನೊಂದಣಿ ಮಾಡಲು ಗುರಿಹೊಂದಲಾಗಿದ್ದು, ಉತ್ತಮ ಸ್ಪಂದನೆ ದೊರಕಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಮಕ್ಕಳಿಗೂ ಅವಕಾಶ ನೀಡಲಾಗುವದು.

ಕಾರಣ ಜಿಲ್ಲೆ ಎಲ್ಲಾ ಸಮುದಾಯ ಬಂಧುಗಳು ತಮ್ಮ ಮಕ್ಕಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇರಣೆ ಮತ್ತು ಸಹಕಾರ ನೀಡಬೇಕೆಂದು ಹಿರಿಯ ಧಮಾಚಾರಿ ಮಲ್ಲೇಶಪ್ಪ ಹುನುಗುಂದಬಾಡಾ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಮಹಾಂತೇಶ ಭವಾನಿ, ಮಲ್ಲಿಕಾ ರ್ಜುನ ಮಾಸ್ತರ, ಮುಖಂಡರಾದ ಮಲ್ಲಿಕಾರ್ಜುನ ಬೊಮ್ಮನಾಳ,ರಾಹುಲ್‌ ಇದ್ದರು.ವರದಿ ವಲಿ ಖುರೇಷಿ
📲Get App