🔥 TRENDING Bombay High Court asks Maharashtra why... Deputy CM Keshav Maurya says BJP plans... Brijesh Pathak outlines BJP's plan to... અખબારી યાદી अयोध्या में सेक्टर बूथ कार्यकर्ता सम्म... ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ TUCI ಸಂಪೂರ್...
25 Nov 2026•
ગુજરાતી मराठी ਪੰਜਾਬੀ বাংলা

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ TUCI ಸಂಪೂರ್ಣ ಬೆಂಬಲ - 15,000 ರೂ. ನಿಗದಿತ ಮಾಸಿಕ ಗೌರವಧನ ಕೂಡಲೇ ಜಾರಿಗೊಳಿಸಿ - ರಾಜ್ಯ ಸರ್ಕಾರಕ್ಕೆ ಆಗ್ರಹ

✍️ Reporter: Ningappa 🗓 25 Nov 2026, 11:32 PM 👁 9
Share: 💬 WhatsApp 📘 Facebook 𝕏 Post

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ TUCI ಸಂಪೂರ್ಣ ಬೆಂಬಲ - 15,000 ರೂ. ನಿಗದಿತ ಮಾಸಿಕ ಗೌರವಧನ ಕೂಡಲೇ ಜಾರಿಗೊಳಿಸಿ - ರಾಜ್ಯ ಸರ್ಕಾರಕ್ಕೆ ಆಗ್ರಹ - ಬಾಕಿ ಪ್ರೋತ್ಸಾಹಧನ ಪಾವತಿ, ಇಪಿಎಫ್, ಇಎಸ್ ಐ, ಪಿಂಚಣಿ ಸೌಲಭ್ಯಕ್ಕೆ ಒತ್ತಾಯ - ಫ್ರೀಡಂ ಪಾರ್ಕ್ ನಲ್ಲಿ 9-10 ದಿನಗಳಿಂದ ಹೋರಾಟ

ಬೆಂಗಳೂರು:
ಫ್ರೀಡಂ ಪಾರ್ಕ್ ನಲ್ಲಿ ಕಳೆದ 9-10 ದಿನಗಳಿಂದ ಚಳಿ, ಮಳೆ ಎನ್ನದೆ ಹಗಲು-ರಾತ್ರಿ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ನ್ಯಾಯಯುತ ಹೋರಾಟವನ್ನು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI) ಕರ್ನಾಟಕ ರಾಜ್ಯ ಸಮಿತಿ ಸಂಪೂರ್ಣವಾಗಿ ಬೆಂಬಲಿಸುತ್ತದೆ.

ಹಳ್ಳಿ ಹಳ್ಳಿಗೆ ಹೋಗಿ, ಮನೆ ಮನೆಗೆ ತಿರುಗಿ, ತಾಯಿ-ಮಕ್ಕಳ ಆರೋಗ್ಯ ಕಾಪಾಡಿ, ಜನರ ಜೀವ ಉಳಿಸುವ ಆಶಾ ಕಾರ್ಯಕರ್ತೆಯರಿಗೆ ಮಾತ್ರ ಬದುಕಲು ಬೇಕಾದಷ್ಟು ವೇತನ ಕೊಡಲು ಸರ್ಕಾರಕ್ಕೆ ಮನಸ್ಸಿಲ್ಲವೇ? ಜನರ ಆರೋಗ್ಯ ಕಾಪಾಡುವ ಕೈಗಳಿಗೆ ನ್ಯಾಯಯುತ ವೇತನ ಕೊಡದಿರುವುದು ಯಾವ ನ್ಯಾಯ? ಎಂದು TUCI ಪ್ರಶ್ನಿಸಿದೆ.

ಕೇರಳ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ನಿಗದಿತ ಗೌರವಧನ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಆಶಾ ಕಾರ್ಯಕರ್ತೆಯರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವೇತನ ಸಂಹಿತೆ-2019 ಮತ್ತು ಸಾಮಾಜಿಕ ಭದ್ರತಾ ಸಂಹಿತೆ-2020ರ ಆಶಯಕ್ಕೆ ಅನುಗುಣವಾಗಿ ಕಾರ್ಮಿಕರ ಹಕ್ಕು ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಬೇಕು ಎಂದು TUCI ತಿಳಿಸಿದೆ.

TUCI ಪ್ರಮುಖ ಒತ್ತಾಯಗಳು:

1. ಆಶಾ ಕಾರ್ಯಕರ್ತೆಯರಿಗೆ 15,000 ರೂ. ನಿಗದಿತ ಮಾಸಿಕ ಗೌರವಧನ ನೀಡಬೇಕು.
2. ಎಲ್ಲಾ ಬಾಕಿ ಪ್ರೋತ್ಸಾಹಧನವನ್ನು ಕೂಡಲೇ ಪಾವತಿಸಬೇಕು.
3. ಕಾರ್ಮಿಕರ ಸ್ಥಾನಮಾನ ನೀಡಿ, ಇಪಿಎಫ್, ಇಎಸ್ ಐ, ಪಿಂಚಣಿ ಹಾಗೂ ಹೆರಿಗೆ ಸೌಲಭ್ಯ ಕಲ್ಪಿಸಬೇಕು.
4. ಕೆಲಸದ ಭದ್ರತೆ ಮತ್ತು ನಿವೃತ್ತಿ ಪರಿಹಾರ ಒದಗಿಸಬೇಕು.

ದುಡಿಸುವ ಸರ್ಕಾರಕ್ಕೆ ವೇತನ ಕೊಡುವ ಜವಾಬ್ದಾರಿ ಬೇಡವೇ? ದುಡಿಮೆಗೆ ತಕ್ಕ ಕೂಲಿ ಕೊಡುವುದು ಸರ್ಕಾರದ ಕರ್ತವ್ಯವಲ್ಲವೇ? ಎಂದು TUCI ಪ್ರಶ್ನಿಸಿದೆ.

ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ತಕ್ಷಣ ಈಡೇರಿಸಿ, ಹೋರಾಟ ನಿರತ ಮಹಿಳೆಯರೊಂದಿಗೆ ಸರ್ಕಾರ ಕೂಡಲೇ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಈ ಹೋರಾಟಕ್ಕೆ ರಾಜ್ಯದ ಕಾರ್ಮಿಕ ಸಂಘಟನೆಗಳ ಬೆಂಬಲ ಇನ್ನಷ್ಟು ಗಟ್ಟಿಯಾಗಲಿದೆ ಎಂದು TUCI ಎಚ್ಚರಿಸಿದೆ.

ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI) ಕರ್ನಾಟಕ ರಾಜ್ಯ ಸಮಿತಿ, ರಾಜ್ಯಾಧ್ಯಕ್ಷರು ಎಂ.ಡಿ. ಅಮೀರ್ ಅಲಿ, TUCI ರಾಜ್ಯ ಉಪಾಧ್ಯಕ್ಷರು ಬಿ.ಕೆ. ಗೋಪಾಲ, ರಾಜ್ಯ ಕಾರ್ಯದರ್ಶಿ ಕೃಷ್ಣಪ್ಪ ಕೆ.ಕೆ. ಅವರು ಈ ಹೇಳಿಕೆ ನೀಡಿದ್ದಾರೆ.
📲Get App