🔥 TRENDING बाढ़ अनुमंडल के मोकामा और घोसवरी में स... प्रगराज में शिक्षा के नाम पर जुल्म की... इकौना में कल से शुरू होगा सीतादार मेला... Assam CM Justifies Rs 600 Crore Invest... Assam CM Dr. Sarma Inaugurates New Ass... Assam CM Unveils Third Assam House in...
23 Nov 2026•
ગુજરાતી मराठी ਪੰਜਾਬੀ বাংলা

ಶಿಕ್ಷಕರ ದೈನಂದಿನ ಬೋಧನಾ ಒತ್ತಡವನ್ನು ನಿವಾರಿಸಿ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳ್ಳಬೇಕು - ಶ್ರೀ ಎಮ್ ವ್ಹಿ ಹಿರೇಮಠ

✍️ Reporter: Mallikarjun Gabbur 🗓 23 Nov 2026, 06:32 PM 👁 17
Share: 💬 WhatsApp 📘 Facebook 𝕏 Post

ಶಿಕ್ಷಕರಿಗಾಗಿ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಸಂಬಂಧಿತ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು ಈ ಸ್ಪರ್ಧೆಗಳ ಮುಖ್ಯ ಉದ್ದೇಶ ಶಿಕ್ಷಕರ ದೈನಂದಿನ ಬೋಧನಾ ಒತ್ತಡವನ್ನು ನಿವಾರಿಸುವುದು ಮತ್ತು ಅವರ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವುದಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರದ ಉಪನ್ಯಾಸಕರಾದ ಶ್ರೀ ಎಮ್ ವ್ಹಿ ಹಿರೇಮಠ ಮಾತನಾಡಿದರು.

ಬಸವನ ಬಾಗೇವಾಡಿ ಪಟ್ಟಣದ ಟಿ ಎಲ್ ಸಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 2026-27 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಭೆ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಿಗಾಗಿ ತಾಲೂಕು ಮಟ್ಟದ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ಸಂಬಂಧಿತ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವಾಗಿದ್ದು ಈ ಸ್ಪರ್ಧೆಗಳ ಮುಖ್ಯ ಉದ್ದೇಶ ಶಿಕ್ಷಕರ ದೈನಂದಿನ ಬೋಧನಾ ಒತ್ತಡವನ್ನು ನಿವಾರಿಸುವುದು ಮತ್ತು ಅವರ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವುದಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರದ ಉಪನ್ಯಾಸಕರಾದ ಶ್ರೀ ಎಮ್ ವ್ಹಿ ಹಿರೇಮಠ ಮಾತನಾಡಿದರು.
ಶಿಕ್ಷಕರು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ, ತಮ್ಮಲ್ಲಿರುವ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸೃಜನಶೀಲ ಪ್ರತಿಭೆಗಳನ್ನು ಅಭಿವ್ಯಕ್ತಿಸಲು ಹಾಗೂ ವೃತ್ತಿಪರ ಒತ್ತಡದಿಂದ ಹೊರಬಂದು ಉಲ್ಲಾಸದಿಂದಿರಲು ಈ ಸ್ಪರ್ಧೆಗಳು ವೇದಿಕೆಯಾಗಿವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ರೇಣುಕ ಕಲಬುರ್ಗಿ ಮಾತನಾಡಿದರು.
ಈ ಒಂದು ಸಹಪಠ್ಯ ಚಟುವಟಿಕೆ ಸ್ಪರ್ಧೆಗಳಲ್ಲಿ ಎಲ್ಲ ಸರ್ಕಾರಿ ಅನುದಾನಿತ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಭಾಗವಹಿಸಲು ಅವಕಾಶವಿದ್ದು ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳಿಗೆ ಪ್ರತ್ಯೇಕವಾದ ಸ್ಪರ್ಧೆಗಳು ನಡೆಯುತ್ತವೆ ಎಂದು ಸಹಪಠ್ಯ ಚಟುವಟಿಕೆಗಳ ಜಿಲ್ಲಾ ನೋಡಲು ಅಧಿಕಾರಿಗಳಾದ ಶ್ರೀ ಎಸ್ ಎಮ್ ಬ್ಯಾಹಟ್ಟಿ ಮಾತನಾಡಿದರು.
ಇಂದು ನಡೆದ ಸ್ಪರ್ಧೆಗಳಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ 116 ಶಿಕ್ಷಕರು ಭಾಗವಹಿಸಿದರು ಹಾಗೂ ವಿಜಯದ ಶಿಕ್ಷಕರಿಗೆ ಪ್ರಶಸ್ತಿ ಪುತ್ರ ಹಾಗೂ ನಗದು ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕ ನೋಡಲ್ ಅಧಿಕಾರದ ಶ್ರೀ ಎಸ್ ಎಸ್ ಅಂಬಲಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳ ಶ್ರೀ ಬಿ ಎಸ್ ಅವಟಿ, ಶ್ರೀ ರಮೇಶ ಪವಾರ ಉಪಸ್ಥಿತರಿದ್ದರು. ಶ್ರೀ ಎಮ್ ವಿ ಗಬ್ಬೂರ ಬಿ ಆರ್ ಪಿ ಸ್ವಾಗತಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಭಾರತಿ ಪಾಟೀಲ ವಂದಿಸಿದರು.
📲Get App