🔥 TRENDING ಬ್ರಿಮ್ಸ್ ಆಸ್ಪತ್ರೆಯಲ್ಲಿ ಔಷಧ ಕೊರತೆ: ಒಂದು... India and New Zealand End Hockey Match... Panchayat Season 5 Trailer to Debut To... Film 'King' to Debut on 24 December; T... UP Man Attempts Scheme Marriage, Wife... India Today Teases Upcoming In‑Depth N...
22 Nov 2026•
ગુજરાતી मराठी ਪੰਜਾਬੀ বাংলা

ಜನಪರ, ಜೀವಪರ ಹಾಗೂ ಅಹಿಂಸೆಯ ಸಂದೇಶ ಸಾರುವಂತಿರಲಿ ಕವಿತೆಗಳು: ಗುರುನಾಥ ಅಕ್ಕಣ್ಣ

✍️ Reporter: Basavaraj pujari 🗓 22 Nov 2026, 09:12 PM 👁 13
Share: 💬 WhatsApp 📘 Facebook 𝕏 Post

ಬೀದರ್: ಕವಿತೆಗಳು ಜನಪರ, ಜೀವಪರ ಹಾಗೂ ಅಹಿಂಸೆಯ ಸಂದೇಶವನ್ನು ಸಾರುವಂತಿರಬೇಕು ಎಂದು ಕಥೆಗಾರ ಗುರುನಾಥ ಅಕ್ಕಣ್ಣ ಅಭಿಪ್ರಾಯಪಟ್ಟರು. 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಜನಪರ, ಜೀವಪರ ಹಾಗೂ ಅಹಿಂಸೆಯ ಸಂದೇಶ ಸಾರುವಂತಿರಲಿ ಕವಿತೆಗಳು: ಗುರುನಾಥ ಅಕ್ಕಣ್ಣ
ಬೀದರ್: ಕವಿತೆಗಳು ಜನಪರ, ಜೀವಪರ ಹಾಗೂ ಅಹಿಂಸೆಯ ಸಂದೇಶವನ್ನು ಸಾರುವಂತಿರಬೇಕು ಎಂದು ಕಥೆಗಾರ ಗುರುನಾಥ ಅಕ್ಕಣ್ಣ ಅಭಿಪ್ರಾಯಪಟ್ಟರು.

22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಯುದ್ಧ, ಹಿಂಸೆ, ರಕ್ತಪಾತ, ಕೊಲೆ ಸೇರಿದಂತೆ ಅಮಾನವೀಯ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಕಳೆದ ಒಂದೂವರೆ ದಶಕದಿಂದ ದೇಶದ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆಂತರಿಕ ಸಂಘರ್ಷಗಳು ದಿನೇದಿನೇ ಹೆಚ್ಚುತ್ತಿದ್ದು, ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಗಾಂಧಿ ಮತ್ತು ಯೇಸುವಿನ ಮಾರ್ಗವನ್ನು ಅನುಸರಿಸುವವರು ಕಡಿಮೆಯಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ದಿನ ಬೆಳಗಾದರೆ ಸಂವಿಧಾನದ ಬದಲಾವಣೆ, ವೋಟ್ ಚೋರಿ, ಚುನಾವಣಾ ವೈಫಲ್ಯದಂತಹ ಸಮಸ್ಯೆಗಳು ಚರ್ಚೆಗೆ ಬರುತ್ತಿವೆ. ಇಂದಿನ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಕವಿಗಳು ಚಿಂತನೆ ನಡೆಸಿ, ತಮ್ಮ ಕವಿತೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಡಾ. ಹೇಮಲತಾ ವಡ್ಡೆ ಆಶಯ ನುಡಿಗಳನ್ನಾಡಿ, ಕನ್ನಡ ಭಾಷೆಯ ಅಳಿವು-ಉಳಿವು ಹಾಗೂ ಸಾಹಿತ್ಯ ಚರಿತ್ರೆಯ ಕುರಿತು ವಿವರವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಓಂಪ್ರಕಾಶ ದಡ್ಡೆ, ಶಿವಾಜಿ ಕಾಂಬಳೆ, ವೀರಶೆಟ್ಟಿ ಚೌಕನಪಳ್ಳಿ, ಬಿ.ಕೆ. ಸುಂದರರಾಜ, ನೀಲಕಂಠರಾವ ಇಸ್ಲಾಂಪುರ, ಅನೀಲಕುಮಾರ ಅಣದೂರೆ, ಜಗದೇವಿ ದುಬಲಗುಂಡೆ, ಮಹಾನಂದಾ ಮಡಕಿ, ಮೇರಿ ಮಾರ್ಗರೇಟ್ ಉಪಸ್ಥಿತರಿದ್ದರು.

ಎಂ.ಎಸ್. ಮನೋಹರ ಸ್ವಾಗತಿಸಿದರು. ಪರಮೇಶ್ವರ ಬಿರಾದಾರ ನಿರೂಪಿಸಿದರು. ರೂಪಾ ಪಾಟೀಲ್ ವಂದಿಸಿದರು.

ಕವಿಗೋಷ್ಠಿಯಲ್ಲಿ ಭಾಗವಹಿಸಿದವರು: ಎಂ.ಎ. ಪಾಟೀಲ್, ಗೀತಾಂಜಲಿ ಪಾಟೀಲ್, ನೀಲಾಂಬಿಕಾ ಸ್ವಾಮಿ, ನಾಗೇಂದ್ರ ಚಿಟಗೀರೆ, ಉಮಾದೇವಿ ಬಾಪೂರೆ, ವೀರಣ್ಣ ಮಂಠಾಳಕರ್, ವೀರಶೆಟ್ಟಿ ಪಾಟೀಲ್, ಚೆನ್ನಬಸಪ್ಪ ಕೋಹಿನೂರ್, ಪುಷ್ಪಾ ಚಿಕೋರ್ತೆ, ಮಾಧುರಿ ಕುಲಕರ್ಣಿ, ಮಾಣಿಕೇಶ್ವರಿ ಪಾಟೀಲ್, ಚೆನ್ನಮ್ಮ ವಲ್ಲೆಪೂರ್ ಸೇರಿದಂತೆ 40ಕ್ಕೂ ಅಧಿಕ ಕವಿ ಹಾಗೂ ಕವಯಿತ್ರಿಯರು ಭಾಗವಹಿಸಿದ್ದರು.
📲Get App