🔥 TRENDING झारखण्ड के 26वें स्थापना दिवस पर 'रन फ... Brother doubts police claim in ASI Cha... Chief Minister of Manipur Shri Yumnam... President Murmu, PM Modi Praise India... BJP accuses Rahul Gandhi of seeking fo... Aaryavir Sehwag Receives Special Two-W...
15 Nov 2026•
ગુજરાતી मराठी ਪੰਜਾਬੀ বাংলা

ನಾಳೆ ದೇವದುರ್ಗ ಸಿರವಾರ ಕ್ರಾಸ್‌ನಲ್ಲಿ ಬೃಹತ್ ರಸ್ತೆ ತಡೆ ಹೋರಾಟ - ರೈತರೊಂದಿಗೆ ನಾನು ಇದ್ದೇನೆ ಎಂದ ಶಾಸಕಿ ಕರೆಮ್ಮ ಜಿ. ನಾಯಕ - ಜನವರಿ ಅಂತ್ಯದವರೆಗೆ ನಿರಂತರ ನೀರು ಹರಿಸಲು ಒತ್ತಾಯ - ರೈತ ಉಳಿದರೆ ನಾಡು ಉಳಿಯುತ್ತದೆ

✍️ Reporter: Ningappa 🗓 15 Nov 2026, 02:42 PM 👁 22
Share: 💬 WhatsApp 📘 Facebook 𝕏 Post

ನಾಳೆ ಸಿರವಾರ ಕ್ರಾಸ್‌ನಲ್ಲಿ ಬೃಹತ್ ರಸ್ತೆ ತಡೆ ಹೋರಾಟ - ರೈತರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಹೋರಾಟದಲ್ಲಿ ಭಾಗವಹಿಸಲಿರುವ ಶಾಸಕಿ ಕರೆಮ್ಮ ಜಿ. ನಾಯಕ - ಜನವರಿ ಅಂತ್ಯದವರೆಗೆ ನೀರು ಹರಿಸಲು ಒತ್ತಾಯ - ರೈತ ಬಾಂಧವರು, ಯುವಕರು, ಸಾರ್ವಜನಿಕರು ಭಾಗವಹಿಸಲು ಮನವಿ

ನಾಳೆ ದೇವದುರ್ಗ ಸಿರವಾರ ಕ್ರಾಸ್‌ನಲ್ಲಿ ಬೃಹತ್ ರಸ್ತೆ ತಡೆ ಹೋರಾಟ - ರೈತರೊಂದಿಗೆ ನಾನು ಇದ್ದೇನೆ ಎಂದ ಶಾಸಕಿ ಕರೆಮ್ಮ ಜಿ. ನಾಯಕ

ದೇವದುರ್ಗ: ಅನ್ನದಾತನ ಬೆಳೆ ಒಣಗದಿರಲಿ, ರೈತನ ಬದುಕು ಬಾಡದಿರಲಿ ಎಂದು ನಾಳೆ (ದಿನಾಂಕ 16-11-2026) ಸೋಮವಾರ ರಂದು ದೇವದುರ್ಗದ ಸಿರವಾರ ಕ್ರಾಸ್‌ನಲ್ಲಿ ರೈತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಡೆಯಲಿರುವ ಬೃಹತ್ ರಸ್ತೆ ತಡೆ ಹೋರಾಟದಲ್ಲಿ ನಾನು ಕೂಡ ಭಾಗವಹಿಸುತ್ತಿದ್ದೇನೆ ಎಂದು ದೇವದುರ್ಗ ಶಾಸಕಿ ಶ್ರೀಮತಿ ಕರೆಮ್ಮ ಜಿ. ನಾಯಕ ತಿಳಿಸಿದ್ದಾರೆ.

ನಮ್ಮ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಜನವರಿ ಅಂತ್ಯದವರೆಗೆ ನಿರಂತರವಾಗಿ ನೀರು ಹರಿಸುವುದು ಅತ್ಯಗತ್ಯ. ರೈತರ ಬೆಳೆಗಳನ್ನು ಉಳಿಸುವುದು, ಅವರ ಬದುಕನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ.

ಇದು ಕೇವಲ ರೈತರ ಹೋರಾಟವಲ್ಲ, ಅನ್ನದಾತನನ್ನು ನಂಬಿ ಬದುಕುತ್ತಿರುವ ನಮ್ಮೆಲ್ಲರ ಹೋರಾಟ.

ರೈತರ ಸಂಕಷ್ಟದಲ್ಲಿ ಅವರೊಂದಿಗೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಕ್ಷೇತ್ರದ ರೈತ ಬಾಂಧವರು, ಯುವಕರು, ಹಿರಿಯರು ಹಾಗೂ ಸಮಸ್ತ ಸಾರ್ವಜನಿಕರು ಈ ಹೋರಾಟದಲ್ಲಿ ಭಾಗವಹಿಸಿ ರೈತರ ಪರವಾಗಿ ಧ್ವನಿಯಾಗಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ನಾನು ರೈತರೊಂದಿಗೆ ಇದ್ದೇನೆ, ರೈತರ ಹಿತಕ್ಕಾಗಿ ನನ್ನ ಹೋರಾಟ ನಿರಂತರ. ರೈತ ಉಳಿದರೆ ನಾಡು ಉಳಿಯುತ್ತದೆ ಎಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದ್ದಾರೆ.
📲Get App