🔥 ट्रेंडिंग पुणे-सतारा महामार्गावर शालेय सुट्ट्यां... નૂતન વર્ષના શુભ સંદેશ અને સ્નેહમિલન સમ... सिक्किम अंडर‑15 महिला टीम बनाम नागालैं... एटा में दलित युवक को विवादित जमीन पर क... छठ पूजा के तीसरे दिन बिहार में भक्तों... 28 वर्षीय यूपी पुलिस अधिकारी पर ब्लैकम...
15 नव. 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ - ಪ್ರಬಲ ಕಿಶೋರಿ ತಂಡದ ಶಾಲಾ ಬಾಲಕಿಯರಿಗೆ ಪೊಲೀಸ್ ಇಲಾಖೆ, ಠಾಣೆಯ ಕಾರ್ಯವೈಖರಿ ಬಗ್ಗೆ ಮಾಹಿತಿ - ಮಹಿಳಾ ಸುರಕ್ಷತೆ, ಮಕ್ಕಳ ರಕ್ಷಣೆ ಬಗ್ಗೆ ಜಾಗೃತಿ

✍️ रिपोर्टर: Ningappa 🗓 15 नव. 2026, 05:08 PM 👁 26
शेयर करें: 💬 WhatsApp 📘 Facebook 𝕏 Post

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ - ಪ್ರಬಲ ಕಿಶೋರಿ ತಂಡದ ಶಾಲಾ ಬಾಲಕಿಯರಿಗೆ ಆತ್ಮೀಯ ಬರಮಾಡು - ಪೊಲೀಸ್ ಇಲಾಖೆ, ಠಾಣೆಯ ಕಾರ್ಯ, ಮಹಿಳಾ ಸುರಕ್ಷತೆ ಬಗ್ಗೆ ಮಾಹಿತಿ - ಅಧಿಕಾರಿಗಳೊಂದಿಗೆ ಸಂವಾದ

ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ - ಪ್ರಬಲ ಕಿಶೋರಿ ತಂಡದ ಬಾಲಕಿಯರಿಗೆ ಪೊಲೀಸ್ ಮಾಹಿತಿ

ದೇವದುರ್ಗ:ತಾಲುಕಿನ ಜಾಲಹಳ್ಳಿ ಪೊಲೀಸ್ ಠಾಣೆಗೆ ಪ್ರಬಲ ಕಿಶೋರಿ ತಂಡದ ಶಾಲಾ ಬಾಲಕಿಯರನ್ನು ಬರಮಾಡಿಕೊಂಡು ತೆರೆದ ಮನೆ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಮತ್ತು ಠಾಣೆಯ ಕುರಿತು ಬಾಲಕಿಯರಿಗೆ ಮಾಹಿತಿ ನೀಡಲಾಯಿತು. ಪೊಲೀಸ್ ಠಾಣೆಯ ಕಾರ್ಯವೈಖರಿ, ಪೊಲೀಸರ ಕರ್ತವ್ಯಗಳು, ದೂರು ನೀಡುವ ವಿಧಾನ, ಮಹಿಳಾ ಸುರಕ್ಷತೆ, ಮಕ್ಕಳ ರಕ್ಷಣೆ ಹಾಗೂ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ವಿಧಾನಗಳ ಬಗ್ಗೆ ತಿಳಿಸಿಕೊಡಲಾಯಿತು.

ಬಾಲಕಿಯರು ಠಾಣೆಯ ವಿವಿಧ ವಿಭಾಗಗಳನ್ನು ವೀಕ್ಷಿಸಿ, ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು. ಪೊಲೀಸರು ಸ್ನೇಹಿತರಂತೆ ಇರುತ್ತಾರೆ, ಭಯಪಡದೆ ಸಹಾಯ ಕೇಳಬಹುದು ಎಂಬ ಸಂದೇಶವನ್ನು ನೀಡಲಾಯಿತು.
📲Get App