ಅಂಬಾ ಮಠದ ಬಗ್ಗೆ ಹೊರಗಿನವರು ತಪ್ಪು ಮಾಹಿತಿ ಹರಡಬಾರದು: ಚಿನ್ನಪ್ಪ ದೊಡ್ಡಮನಿ
**ಮದರ್ ಕಲ್ | ಅಂಬಾ ಮಠದ ಕುರಿತು ಸ್ಪಷ್ಟನೆ**
# ಅಂಬಾ ಮಠದ ಬಗ್ಗೆ ಹೊರಗಿನವರು ತಪ್ಪು ಮಾಹಿತಿ ಹರಡಬಾರದು: ಚಿನ್ನಪ್ಪ ದೊಡ್ಡಮನಿ
### ಗ್ರಾಮದ ಭಕ್ತರ ಒಗ್ಗಟ್ಟಿನಿಂದ ಮಠ ಸ್ಥಾಪನೆ; ನಾಮದೇವ ಗೌಡ ಶರಣರ ಬಗ್ಗೆ ಆರೋಪ ಮಾಡುವ ಮುನ್ನ ವಾಸ್ತವ ತಿಳಿದುಕೊಳ್ಳಲಿ ಎಂದು ಗ್ರಾಮಸ್ಥರ ಮನವಿ
**ಮದರ್ಕಲ್, ನ. 8:** ಮದರ್ಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದೈವದ ಭಕ್ತರ ಒಗ್ಗಟ್ಟಿನಿಂದ ಅಂಬಾ ಮಠದಲ್ಲಿ ಅಂಬಾ ದೇವಿಯ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಠದ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳದೆ ಹೊರಗಿನ ಕೆಲವು ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಮದರ್ಕಲ್ ಗ್ರಾಮದ ಹಿರಿಯ ಮುಖಂಡ ಚಿನ್ನಪ್ಪ ದೊಡ್ಡಮನಿ ಹೇಳಿದರು.
ನ. 7ರಂದು ಅಂಬಾ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮದ ದೈವದ ಭಕ್ತರೆಲ್ಲರೂ ಒಗ್ಗೂಡಿ ಅಂಬಾ ದೇವಿಯ ಪ್ರತಿಷ್ಠಾಪನೆ ಮಾಡಿದ್ದಾರೆ. ಭಕ್ತರು ನೀಡಿದ ದೇಣಿಗೆ ಹಾಗೂ ಸಹಕಾರದಿಂದ ಹೊಸ ತೇರು ನಿರ್ಮಿಸಲಾಗಿದ್ದು, ಮಹಿಳೆಯರು ರಥೋತ್ಸವ ಎಳೆಯುವ ಧಾರ್ಮಿಕ ಕಾರ್ಯಕ್ರಮವೂ ನಡೆಯುತ್ತಿದೆ. ಸಾಮೂಹಿಕ ವಿವಾಹ, ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ, ಪ್ರತಿ ಹುಣ್ಣಿಮೆಯಂದು ಅನುಭಾವ ಕಾರ್ಯಕ್ರಮ ಹಾಗೂ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವಂತಹ ಕಾರ್ಯಗಳನ್ನು ಮಠದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಮಠದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳು ಭಕ್ತರ ಸಹಕಾರದಿಂದ ನಡೆಯುತ್ತಿವೆ ಎಂದು ತಿಳಿಸಿದರು.
ಅಂಬಾ ಮಠದ ತಾತನವರಾದ ನಾಮದೇವ ಗೌಡ ಶರಣರನ್ನು ಮದರ್ಕಲ್ ಗ್ರಾಮದ ಭಕ್ತರೇ ಗೌರವದಿಂದ ಕರೆತಂದು ಮಠದಲ್ಲಿ ಇರಿಸಿದ್ದಾರೆ. ಶರಣರ ವಚನಗಳು ಹಾಗೂ ಧಾರ್ಮಿಕ ಸಂದೇಶಗಳನ್ನು ಸಾರುವ ಉದ್ದೇಶದಿಂದ ಅವರು ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಲ್ಲಿ ಯಾವುದೇ ತಪ್ಪು ಕಂಡುಬಂದರೆ ಅವರನ್ನು ಕರೆತಂದ ಗ್ರಾಮದ ದೈವದ ಭಕ್ತರೇ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಹೀಗಿರುವಾಗ ಹೊರಗಿನವರು ಯಾವುದೇ ಮಾಹಿತಿ ಇಲ್ಲದೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಮಠ ಸ್ಥಾಪನೆಯಾಗಿರುವ ಸ್ಥಳದಲ್ಲಿ ಒಟ್ಟು 12 ಎಕರೆ ಸರ್ಕಾರಿ ಜಮೀನಿದೆ. ಈ ಪೈಕಿ ಎರಡು ಎಕರೆ ಜಮೀನನ್ನು ಮಠದ ಟ್ರಸ್ಟ್ಗೆ ಮಂಜೂರು ಮಾಡುವಂತೆ ಪಲಕನಮರಡಿ ಗ್ರಾಮ ಪಂಚಾಯಿತಿಯ ಸರ್ವಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಠರಾವು ಅಂಗೀಕರಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಮಾನಯ್ಯ ನಾಯಕ ಹಾಗೂ ಅಲಿಸಾಬು ಮದರ್ಕಲ್ ತಿಳಿಸಿದರು. ಮಠದ ಹೆಸರಿನಲ್ಲಿ ಮಾಡಲಾಗುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದರು.
ಬಾಕ್ಸ್ ನಲ್ಲಿ
**ದೈವದ ಇಚ್ಛೆಯಂತೆ ಮಠದ ಕಾರ್ಯಗಳು**
ಈ ಸಂದರ್ಭದಲ್ಲಿ ಮದರ್ಕಲ್ ಗ್ರಾಮದ ದೇವಣ್ಣ ಮಾಲಿ ಪಾಟೀಲ್ ಮಾತನಾಡಿ, ಅಂಬಾ ಮಠವು ಮದರ್ಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದೈವದ ಭಕ್ತರಿಗೆ ಸೇರಿದ ಮಠವಾಗಿದೆ. ಇಲ್ಲಿ ಯಾವುದೇ ವ್ಯಕ್ತಿಯ ವೈಯಕ್ತಿಕ ಇಚ್ಛೆಯಂತೆ ಕಾರ್ಯಗಳು ನಡೆಯುವುದಿಲ್ಲ. ಜನರ ಕಲ್ಯಾಣವೇ ಮಠದ ಮುಖ್ಯ ಉದ್ದೇಶವಾಗಿದೆ ಎಂದರು.
ನಾಮದೇವ ಗೌಡ ಶರಣರು ಮಠಕ್ಕೆ ಬಂದ ನಂತರ ಜಾತಿ-ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಗ್ರಾಮದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳದೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಹರಡುವುದು ಸರಿಯಲ್ಲ ಎಂದು ಹೇಳಿದರು.
ಹುಸೇನಸಾಬು ಟೆಂಟ್ಹೌಸ್ ಮಾತನಾಡಿ, ಇದು ಗ್ರಾಮದ ದೈವದ ಭಕ್ತರು ಒಗ್ಗೂಡಿ ಸ್ಥಾಪಿಸಿರುವ ಮಠವಾಗಿದೆ. ನಾಮದೇವ ಗೌಡ ಶರಣರ ಬಗ್ಗೆ ಗ್ರಾಮಸ್ಥರಲ್ಲಿ ಉತ್ತಮ ಅಭಿಪ್ರಾಯವಿದೆ. ಅವರ ಕುರಿತು ವಾಸ್ತವಾಂಶ ತಿಳಿಯದೆ ಹೊರಗಿನವರು ತಪ್ಪು ಸಂದೇಶ ನೀಡುತ್ತಿರುವುದು ಸರಿಯಲ್ಲ ಎಂದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ಹೊಸೂರು ಮಾತನಾಡಿ, ಅಂಬಾ ಮಠದಲ್ಲಿ ನಾಮದೇವ ಗೌಡ ಶರಣರ ನೇತೃತ್ವದಲ್ಲಿ ಉತ್ತಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ಹಿರಿಯರಾದ ದುರ್ಗಪ್ಪ ಮಾತನಾಡಿ, ನಾಮದೇವ ಗೌಡ ಶರಣರನ್ನು ಗ್ರಾಮದವರು ಗೌರವದಿಂದ ಮಠಕ್ಕೆ ಕರೆತಂದು ಶರಣರ ಸ್ಥಾನದಲ್ಲಿ ಕೂರಿಸಿದ್ದಾರೆ. ಅವರು ಉತ್ತಮ ಸಂದೇಶಗಳನ್ನು ನೀಡುತ್ತಿದ್ದು, ಅವರ ಬಗ್ಗೆ ಗ್ರಾಮಸ್ಥರು ಅಭಿಮಾನ ಹೊಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮದರ್ಕಲ್ ಹಾಗೂ ಸುತ್ತಮುತ್ತಲಿನ ವಿವಿಧ ಸಮಾಜಗಳ ಹಿರಿಯರು, ಮುಖಂಡರು ಮತ್ತು ಅಂಬಾ ಮಠದ ಭಕ್ತರು ಉಪಸ್ಥಿತರಿದ್ದರು.
**ಉಪಸ್ಥಿತರಿದ್ದವರು:** ಚಿನ್ನಪ್ಪ ದೊಡ್ಡಮನಿ, ದೇವಣ್ಣ ಮಾಲಿ ಪಾಟೀಲ್, ಸಾಹೇಬ್ ಗೌಡ ಪೊಲೀಸ್ ಪಾಟೀಲ್, ಶರಣಪ್ಪ ಮಾಲಿ ಪಾಟೀಲ್, ಮಾನಯ್ಯ, ಅಲ್ಲಿಸಾಬ್, ರಾಮಣ್ಣ ಉಪ್ಪಾರ್, ಬಸವರಾಜ್ ಹೊಸೂರು, ಹನುಮಂತ ಬಡಿಗೇರ್, ಮುದ್ದಣ್ಣ, ತಿಪ್ಪಣ್ಣ, ರವಿ, ಶಿವಗೇನಿ, ಶರಣಪ್ಪ ಹೊಸಮನಿ, ಚನ್ನಬಸವ ದೊಡ್ಡಮನಿ, ರಂಗಪ್ಪ ಮಲ್ಲಪ್ಪ ಅಸರತಿ, ನಿಂಗಪ್ಪ ಬಾಗೂರು, ದಾವಲ್ಸಾಬ್, ಬಸವರಾಜ್ ಮಾತ್ಪಳ್ಳಿ, ಶಿವಣ್ಣ ಉಪ್ಪಾರ್, ಗಣೇಶ್ ಬಾಂಬೆ, ಹುಸೇನ್ ಬಾಷಾ ಸೇರಿದಂತೆ ಮಠದ ಭಕ್ತರು ಭಾಗವಹಿಸಿದ್ದರು.
**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**