🔥 TRENDING नीड 24 न्यूज़ ने सभी रिपोर्टरों को दीप... દિવાળી પર દ્વારકાધીશ જગતમંદિરમાં રંગબે... ગાંધીનગરના ડભોડિયા હનુમાનજી મંદિરે વિશ... આ દિવાળી પર અતિશય જોખમી કે વધુ અવાજ કર... ભારત પર્વ 2026'; ‘અતુલ્ય ભારત’ અંતર્ગત... Indian Police Detain Two More Kashmiri...
08 Nov 2026•
ગુજરાતી मराठी ਪੰਜਾਬੀ বাংলা

ಲಿಂಗಸಗೂರು: ಪೈದೊಡ್ಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ - ಶಾಲಾ ಕೊಠಡಿ, ಸಿ.ಸಿ. ರಸ್ತೆ, ಹೈಮಾಸ್ಟ್ ದೀಪ, ಸಮುದಾಯ ಭವನಕ್ಕೆ ಶಾಸಕ ಮಾನಪ್ಪ ವಜ್ಜಲ್ ಭೂಮಿಪೂಜೆ

✍️ Reporter: Ningappa 🗓 08 Nov 2026, 08:52 AM 👁 20
Share: 💬 WhatsApp 📘 Facebook 𝕏 Post

ಲಿಂಗಸಗೂರು ತಾಲೂಕು ಪೈದೊಡ್ಡಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಾನಪ್ಪ ಡಿ. ವಜ್ಜಲ್ ಭೂಮಿಪೂಜೆ - ಟಣಮಕಲ್‌ನಲ್ಲಿ 2 ಶಾಲಾ ಕೊಠಡಿ + ಬಿಸಿ ಊಟದ ಕೊಠಡಿ, ಯರಜಂತಿಯಲ್ಲಿ ಸಿ.ಸಿ. ರಸ್ತೆ, 2 ಹೈಮಾಸ್ಟ್ ದೀಪ, ತಿಮ್ಮಪ್ಪನ ದೇವಸ್ಥಾನ ಹತ್ತಿರ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ

ಲಿಂಗಸಗೂರು: ತಾಲೂಕಿನ ಗುರುಗುಂಟಾ ಹೋಬಳಿ ವ್ಯಾಪ್ತಿಯ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, ಲಿಂಗಸಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ಡಿ. ವಜ್ಜಲ್ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.

ಟಣಮಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ನೂತನ ಕೊಠಡಿಗಳು ಹಾಗೂ 1 ಬಿಸಿ ಊಟದ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ನಿರ್ಮಿತಿ ಕೇಂದ್ರ ಹಾಗೂ ಕೆ.ಕೆ.ಆರ್.ಡಿ.ಬಿ. 2023-24 ಎಸ್.ಟಿ.ಪಿ. (STP) ಯೋಜನೆಯಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಯರಜಂತಿ ಗ್ರಾಮದ ವಿವಿಧ ದೊಡ್ಡಿಗಳಲ್ಲಿ ಸಾರ್ವಜನಿಕರ ಸಂಚಾರವನ್ನು ಸುಗಮಗೊಳಿಸಲು ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ರಾತ್ರಿ ವೇಳೆ ಗ್ರಾಮದ ಪ್ರಮುಖ ವೃತ್ತಗಳಲ್ಲಿ ಬೆಳಕಿನ ವ್ಯವಸ್ಥೆಗಾಗಿ 2 ಹೈಮಾಸ್ಟ್ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಪಿ.ಡಬ್ಲ್ಯೂ.ಡಿ 80 ಹಾಗೂ ಕೆ.ಕೆ.ಆರ್.ಡಿ.ಬಿ ಮೈಕ್ರೋ 2025-26 ಅನುದಾನದಡಿ.

ಯರಜಂತಿ ಗ್ರಾಮದಲ್ಲಿ ನೂತನ ಸಮುದಾಯ ಭವನ:
ಯರಜಂತಿ ಗ್ರಾಮದ ತಿಮ್ಮಪ್ಪನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸಮಾರಂಭಗಳು, ಶುಭಕಾರ್ಯಗಳು ಹಾಗೂ ಗ್ರಾಮಸ್ಥರ ಸಭೆಗಳಿಗೆ ಅನುಕೂಲವಾಗುವಂತೆ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಕೆ.ಕೆ.ಆರ್.ಡಿ.ಬಿ 2025-26 ಅನುದಾನ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಗುರುಗುಂಟಾದ ರಾಜಾ ಸೋಮನಾಥ ನಾಯಕ, ಸೀತಾರಾಮ ನಾಯಕ, ಮುಂಡರಗಿ ಪೂಜಾರಿ ಶಿವರಾಯ (ಶಿವಣ್ಣ ತಾತನವರು), ಪೂಜಾರಿ ಕಕ್ಕೇರಿ ಸೋಮನಾಥ (ನಂದಣ್ಣ ತಾತನವರು), ವರದಾನೇಶ್ವರ ವಾಲ್ಮೀಕಿ ಗುರುಪೀಠದ ಅಧ್ಯಕ್ಷರಾದ ಶ್ರೀ ಗೋಲಪಲ್ಲಿ ಮಹಾಸ್ವಾಮಿಗಳು, ಪರಮೇಶ್ ಯಾದವ್, ಬಿಜೆಪಿ ಮಂಡಲ ಅಧ್ಯಕ್ಷರಾದ ಭೂಷಣ್, ತಿಮ್ಮಯ್ಯ ಪೂಜಾರಿ ಸೇರಿದಂತೆ ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಮದ ನೂರಾರು ಹಿರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
📲Get App