🔥 TRENDING प्रधानमंत्री नरेंद्र मोदी ने दीपावली प... China’s 27,000 cloud‑seeding operation... Delhi to Prohibit Out-of-State BS-IV a... Delhi mandates hybrid learning for Cla... ਹੁਸ਼ਿਆਰਪੁਰ ਵਿੱਚ ਆਮ ਆਦਮੀ ਪਾਰਟੀ ਦੀ ਰੈਲੀ,... India's Last Mughal Emperor Marks 164t...
07 Nov 2026•
ગુજરાતી मराठी ਪੰਜਾਬੀ বাংলা

ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಪೂರ್ವ ಸಿದ್ಧತಾ ತರಬೇತಿ - ಜಿಲ್ಲೆಯ ಅಭಿವೃದ್ಧಿಗೆ ಯುವ ಪ್ರತಿಭೆಗಳ ಕೊಡುಗೆ ಅಗತ್ಯ ಎಂದ ಜಿಲ್ಲಾಧಿಕಾರಿ ಪೂವಿತಾ ಎಸ್ - ಸ್ವಂತ ತಂತ್ರ, ಸ್ವಪ್ರೇರಣೆಯಿಂದ ಮುನ್ನಡೆಯಿರಿ ಎಂದ ಆಯುಕ್ತ ಜುಬಿನ್ ಮೋಹಾಪಾತ್ರ

✍️ Reporter: Ningappa 🗓 07 Nov 2026, 11:29 PM 👁 14
Share: 💬 WhatsApp 📘 Facebook 𝕏 Post

ಕೇಂದ್ರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ತರಬೇತಿ - ಜಿಲ್ಲಾಧಿಕಾರಿ ಪೂವಿತಾ ಎಸ್ ಅವರಿಂದ ಉದ್ಘಾಟನೆ - ಜಿಲ್ಲೆಯ ಅಭಿವೃದ್ಧಿಗೆ ಯುವ ಪ್ರತಿಭೆಗಳ ಅತ್ಯುನ್ನತ ಪದವಿ, ಕೊಡುಗೆ ಅಗತ್ಯ ಎಂದ ಜಿಲ್ಲಾಧಿಕಾರಿ - ಕಠಿಣ ಅಭ್ಯಾಸ, ತ್ಯಾಗ, ಸ್ವಂತ ತಂತ್ರದಿಂದ ಮುನ್ನಡೆಯಿರಿ ಎಂದ ಆಯುಕ್ತ ಜುಬಿನ್ ಮೋಹಾಪಾತ್ರ

ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಪೂರ್ವ ಸಿದ್ಧತಾ ತರಬೇತಿ

ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಇಂದು ನಗರದ ಕೇಂದ್ರ ಗ್ರಂಥಾಲಯದಲ್ಲಿ ಜಿಲ್ಲಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿಗಳಾದ ಶ್ರೀಮತಿ ಪೂವಿತಾ ಎಸ್ ಅವರು, ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಇಡಲು ಕೇವಲ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುದಾನಗಳಿಂದ ಸಾಧ್ಯವಿಲ್ಲ, ಜಿಲ್ಲೆಯ ಪ್ರತಿಭಾವಂತ ಯುವಕ ಯುವತಿಯರು ಅತ್ಯುನ್ನತ ಪದವಿಯನ್ನು ಅಲಂಕರಿಸಿ ತಮ್ಮದೇ ಕೊಡುಗೆಯನ್ನು ಕೊಟ್ಟಲ್ಲಿ ಮಾತ್ರ ಜಿಲ್ಲೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಮಾನ್ಯ ಆಯುಕ್ತರಾದ ಶ್ರೀ ಜುಬಿನ್ ಮೋಹಾಪಾತ್ರ ಅವರು ಮಾತನಾಡಿ, ತರಬೇತಿ ಕಾರ್ಯಗಾರದಿಂದ ವಿದ್ಯಾರ್ಥಿಗಳು ಹೆಚ್ಚಿನ ಲಾಭವನ್ನು ಪಡೆದು ಕಠಿಣ ವಿದ್ಯಾಭ್ಯಾಸ ಮತ್ತು ತ್ಯಾಗದ ಮನೋಭಾವದಿಂದ ಅಭ್ಯಾಸದ ಕ್ರಮಗಳನ್ನು ರೂಪಿಸಿಕೊಳ್ಳಿ, ಅಭ್ಯಾಸಕ್ಕಾಗಿ ಕೇವಲ ಇಂತಿಷ್ಟು ಗಂಟೆಗಳನ್ನು ಮೀಸಲಿಡಬೇಡಿ, ಅಭ್ಯಾಸದಲ್ಲಿ ನಿಮ್ಮದೇ ಆದ ತಂತ್ರಗಳನ್ನು ರೂಪಿಸಿಕೊಂಡು ಸ್ವಂತ ಪ್ರೇರಣೆಯಿಂದ ಮಾರ್ಗದರ್ಶನ ಪಡೆದು ಮುನ್ನಡೆಯಿರಿ ಎಂದು ಸ್ಪರ್ಧಾರ್ಥಿಗಳಿಗೆ ಹುರಿದುಂಬಿಸಿದರು.

ಸಹಾಯಕ ಆಯುಕ್ತರಾದ ಹಂಪಣ್ಣ ಸಜ್ಜನ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ವರ್ಮಾ, ವಿಷಯ ತಜ್ಞರಾದ ನಂಜುಂಡಪ್ಪ ನಾಯಕ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
📲Get App