🔥 ट्रेंडिंग ಅಂಕುಶದೊಡ್ಡಿ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ... આડેસર ચેકપોસ્ટ પર વિદેશી દારૂ ભરેલી બો... बिस ने ओडिशा में उत्पाद गुणवत्ता बढ़ान... अंध्र प्रदेश से ओडिशा में बाघों का प्र... સુરતના પલસાણા તાલુકાના વણેસા ગામમાં નો... 1999 के ओडिशा सुपर साइक्लोन के बाद भार...
06 नव. 2026•
ગુજરાતી मराठी ਪੰਜਾਬੀ বাংলা

ಲಿಂಗಸುಗೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಈಶ್ವರಕುಮಾರ ಕಾಂದುರು ಭೇಟಿ

✍️ रिपोर्टर: Ningappa 🗓 06 नव. 2026, 10:43 PM 👁 15
शेयर करें: 💬 WhatsApp 📘 Facebook 𝕏 Post

ಲಿಂಗಸುಗೂರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ಈಶ್ವರಕುಮಾರ ಕಾಂದುರು ಭೇಟಿ ನೀಡಿ ಪರಿಶೀಲನೆ - ಕೆರೆ ಅಭಿವೃದ್ಧಿ, ಶಾಲಾ ಕಟ್ಟಡ, ಕುಡಿಯುವ ನೀರು, ಜೆಜೆಎಂ ಕಾಮಗಾರಿ ಪರಿಶೀಲನೆ - ಬರಗಾಲ ಹಿನ್ನೆಲೆ 125 ಮಾನವ ದಿನದ ಜೊತೆಗೆ ಇನ್ನೂ 50 ದಿನ ಹೆಚ್ಚಿಗೆ ಬೇಡಿಕೆ ಪತ್ರ - ಶಿಕ್ಷಣಕ್ಕೆ ಮೊದಲ ಆದ್ಯತೆ, 2 ವಾರದೊಳಗೆ ಪ್ರಗತಿಗೆ ಸೂಚನೆ

ರಾಯಚೂರು/ಲಿಂಗಸುಗೂರು: ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಹಾಗೂ ವಿವಿಧ ಕಾಮಗಾರಿಗಳಿಗೆ ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರಕುಮಾರ ಕಾಂದುರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಗದಗ್ಗಿ ತಾಂಡದ ಹತ್ತಿರ ವಿಬಿಜಿ ರಾಮಜಿ ಯೋಜನೆಯಲ್ಲಿ ಗೋಲಪಲ್ಲಿ ಸಾಗಿ ಮಠದ ಕೆರೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೇಟಿ ನೀಡಿದರು. ಕೂಲಿಕಾರರ ಜೊತೆ ಚರ್ಚೆ ಮಾಡಿದರು. ಕೂಲಿ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಿದರು. ಈಗಿನ ಬರಗಾಲ ಇರುವ ಕಾರಣ ಜನರಿಗೆ 125 ಮಾನವ ದಿನದ ಜೊತೆಗೆ ಇನ್ನೂ 50 ದಿನ ಹೆಚ್ಚಿಗೆ ಬೇಡಿಕೆಯನ್ನು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಹೇಳಿದರು. ಸಮಯಕ್ಕೆ ಸರಿಯಾಗಿ ಕೂಲಿ ಹಣ ಪಾವತಿಯಾಗುವ ಕುರಿತು ಕೇಳಿದರು, ನಿರಂತರವಾಗಿ ವಿಬಿಜಿ ರಾಮಜಿ ಕೆಲಸ ಕೊಡುವುದಾಗಿ ಹೇಳಿದರು. ಪ್ರಾರಂಭದಿಂದ ಕಾಮಗಾರಿ ಮೊದಲ ಫೋಟೋ ಮತ್ತು ಪ್ರತಿ ದಿನ ಹಂತ ಹಂತವಾಗಿ ಫೋಟೋ ತೆಗೆಯಲು ತಿಳಿಸಿದರು.

ಪೈದೊಡ್ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ಕಾಮಗಾರಿಯನ್ನು ಪರಿಶೀಲನೆ ಮಾಡಿ ಕಾಮಗಾರಿಯನ್ನು ತುರ್ತಾಗಿ ಮುಗಿಸಲು ಮತ್ತು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಹೇಳಿದರು.

ಗೋಲಪಲ್ಲಿ ಗ್ರಾಮದ ಸೂಗೂರ ದೊಡ್ಡಿಯ ಕುಡಿಯುವ ನೀರು ಸಮಸ್ಯೆಯನ್ನು ಭೇಟಿ ನೀಡಿ ಪರಿಶೀಲನೆ ಮಾಡಿದರು. ನಂತರ ದೇವರಭೂಪುರ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಗತಿ ಪರಿಶೀಲನೆ ಮಾಡಿ 2 ವಾರದೊಳಗೆ ಪ್ರಗತಿ ಸಾಧಿಸಲು ತಿಳಿಸಿದರು.

ಪರಾಂಪುರ ಗ್ರಾಮ ಪಂಚಾಯತ್ ನಲ್ಲಿ ಜೆ. ಜೆ. ಎಂ. ಕಾಮಗಾರಿಯ ಕುಡಿಯುವ ನೀರು ನಲ್ಲಿಗೆ ಬರುವುದನ್ನು ಖುದ್ದಾಗಿ ಪರಿಶೀಲನೆ ಮಾಡಿದರು. ಪರಾಂಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಚರ್ಚೆ ಮಾಡಿದರು. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಮುಖ್ಯ ಗುರುಗಳಿಗೆ ಸೂಚನೆ ನೀಡಿದರು. ಎಲ್ಲಾ ಕೊಠಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡಿದರು. ಸ್ವಚ್ಛತೆ ಮತ್ತು ಕ್ರೀಡೆ ಹಾಗೂ ಇತರ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಲು ತಿಳಿಸಿದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ತಾಯಿಯಂತೆ ಪ್ರೀತಿ ತೋರಿಸಿ ಆರೈಕೆ ಮಾಡಲು ಸೂಚಿಸಿದರು.
📲Get App