🔥 TRENDING વિકાસની નવી દિશા, સુરક્ષાની નવી પહેલ! नगर पालिका कुम्हेर में सफ़ाई कार्य पर... 2026 US Midterms Verdict Explained: De... 3-Storey Building Collapses Near Chawr... Panchkula School Assault Triggers Hary... Haryana Discoms File Challenge to HERC...
05 Nov 2026•
ગુજરાતી मराठी ਪੰਜਾਬੀ বাংলা

ಇಂಗ್ಲಿಷ್ ಭಾಷಾ ಕೌಶಲ್ಯ ಮತ್ತು ಕಲಿಕೆಯ ಆಸಕ್ತಿ ಬೆಳೆಸಿಕೊಳ್ಳಿ: ಡಾ. ಭೀಮಪ್ಪ

✍️ Reporter: Viswanatha D R 🗓 05 Nov 2026, 12:57 PM 👁 21
Share: 💬 WhatsApp 📘 Facebook 𝕏 Post
ಹರಿಹರ: ವಿದ್ಯಾರ್ಥಿಗಳು ಪಠ್ಯಜ್ಞಾನದ ಜೊತೆಗೆ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯಂತ ಮುಖ್ಯವಾಗಿದೆ. ವಿಶೇಷವಾಗಿ ಇಂಗ್ಲಿಷ್ ಭಾಷೆ ಕಲಿಯುವಲ್ಲಿ ಆಸಕ್ತಿ ಬೆಳೆಸಿಕೊಂಡು, ದಿನನಿತ್ಯದ ಜೀವನದಲ್ಲಿ ಇಂಗ್ಲಿಷ್ ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಡಾ. ಭೀಮಪ್ಪ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯರು ಇಂಗ್ಲಿಷ್ ಭಾಷೆಯನ್ನು ವ್ಯಾಕರಣಬದ್ಧವಾಗಿ ಮಾತನಾಡಲು ಪ್ರಯತ್ನಿಸುತ್ತಾರೆ. ಆದರೆ ಆರಂಭದಲ್ಲಿ ತಪ್ಪುಗಳಾಗುವ ಭಯ ಬಿಟ್ಟು, ಮೂಲಭೂತ ಇಂಗ್ಲಿಷ್‌ನಿಂದಲೇ ಕಲಿಕೆಯನ್ನು ಪ್ರಾರಂಭಿಸಬೇಕು. ಆರಂಭದಲ್ಲಿ ಸರಳ ಹಾಗೂ ತುಂಡು ವಾಕ್ಯಗಳ ಮೂಲಕ ಮಾತನಾಡಲು ಪ್ರಯತ್ನಿಸಿ, ಕ್ರಮೇಣ ಭಾಷಾ ಪ್ರಾವೀಣ್ಯತೆ ಬೆಳೆಸಿಕೊಳ್ಳಬೇಕು. ಇಂಗ್ಲಿಷ್ ಕಲಿಕೆಗೆ ನಿರಂತರ ಅಭ್ಯಾಸ ಮತ್ತು ಆಸಕ್ತಿ ಅಗತ್ಯ. ದಿನನಿತ್ಯದ ಸಂವಹನದಲ್ಲಿ ಇಂಗ್ಲಿಷ್ ಬಳಕೆ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಅಬ್ದುಲ್ ಬಶೀರ್, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬೇಡ್ಕರ್ ಕಾಲೇಜ್ ಮಂಜುನಾಥ ಜಿ. ಮಾತನಾಡಿ ಲ್ಯಾಂಗ್ವೇಜ್ ಸ್ಕಿಲ್ಸ್,ಪದವಿ ನಂತರ ಪತ್ರ ಬರೆಯಲು ಕೆಲವರಿಗೆ ಬರುವುದಿಲ್ಲ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ. ಶಕುಂತಲಾ. ಎನ್ ಮಾತನಾಡಿ, ಇಂಗ್ಲಿಷ್ ಜೀವನ ಕಟ್ಟಿಕೊಳ್ಳಲು ಸಹಕಾರಿ, ಸಂವಹನ ಕೌಶಲ್ಯಗಳು, ಹೊರ ರಾಜ್ಯ ಹೋದಾಗ ಇಂಗ್ಲಿಷ್ ಬೇಕು,
ಡಾ. ತಿರುಮಲ ಮಾತನಾಡಿ ಇಂಗ್ಲಿಷ್ ವಿಭಾಗ ಉತ್ತಮ ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರಕಾಶ್, ಮನೋಹರ್, ವಿಶ್ವನಾಥ, ಪೃತಾ ಸಿ. ನಾಯ್ಡು ಸೇರಿದಂತೆ ಮತ್ತಿತರರು ಭಾಗವಹಿಸಿದರು,
ರಮ್ಯಾ ಮತ್ತು ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಶ್ರೀಲಕ್ಷ್ಮಿ ಸ್ವಾಗತಿಸಿದರು. ಉಮ್ಮಲ್ ವರ ನಿರೂಪಿಸಿದರು. ಮೇಘನಾ ವಂದನಾರ್ಪಣೆ ಮಾಡಿದರು.
📲Get App