🔥 TRENDING Political Shifts in Jammu and Kashmir:... Disgruntled PDP MLAs Hold Secret Meeti... J&K Businesses Get 3-Year Break from R... New Movies & Shows Streaming on Netfli... Amal Neerad's 'Bachelor Party D'eux' E... Bollywood's 'Bachelor Party D’eux' Tra...
05 Nov 2026•
ગુજરાતી मराठी ਪੰਜਾਬੀ বাংলা

ಇತಿಹಾಸ: ಮಾರ್ಕ್ಸ್ ವಾದಿ ಚಿಂತಕರು ದುಡಿಯುವ ವರ್ಗಕ್ಕೆ ನಾಯಕತ್ವ ನೀಡಿದ ಕಥೆ - ಕಾರ್ಮಿಕ ಹಕ್ಕುಗಳ ಕಾನೂನುಗಳ ಹಿಂದಿನ ಹೋರಾಟದ ವಿವರಣೆ

✍️ Reporter: Ningappa 🗓 05 Nov 2026, 01:45 AM 👁 13
Share: 💬 WhatsApp 📘 Facebook 𝕏 Post

AITUC ಬಗ್ಗೆ ವಿಶೇಷ ವಿಡಿಯೋ - ದುಡಿಯುವ ವರ್ಗದ ಕ್ರಾಂತಿಯ ಸಿದ್ಧಾಂತವಾದ ಮಾರ್ಕ್ಸ್ ವಾದವನ್ನು ಅರ್ಥಮಾಡಿಕೊಂಡು ಕಮ್ಯುನಿಸ್ಟ್ ಪಕ್ಷ ಕಟ್ಟಿದ ಚಿಂತಕರು - 1920-1942 ರವರೆಗೆ AITUC ನೇತೃತ್ವದಲ್ಲಿ ದೇಶಾದ್ಯಂತ ಕಾರ್ಮಿಕ ಚಳುವಳಿ, ಫ್ಯಾಕ್ಟರಿ ಕಾಯ್ದೆ ಸೇರಿದಂತೆ ಹಲವು ಕಾನೂನುಗಳು ಜಾರಿಗೆ ಕಾರಣ - ಕಾನ್ಪುರ, ಮೀರತ್ ಪಿತೂರಿ ಕೇಸ್ ಎದುರಿಸಿದ ಕಾರ್ಮಿಕ ನಾಯಕರು - ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಕಾರ್ಮಿಕ ವರ್ಗದ ಕೊಡುಗೆ

AITUC ಇತಿಹಾಸ ಮತ್ತು ಕಾರ್ಮಿಕ ಚಳುವಳಿಯ ಕೊಡುಗೆ ಕುರಿತು ವಿಡಿಯೋ ವೈರಲ್

ರಾಯಚೂರು: AITUC ಸಂಘಟನೆಯ ಇತಿಹಾಸ ಮತ್ತು ಮಾರ್ಕ್ಸ್ ವಾದಿ ಸಿದ್ಧಾಂತದ ಬಗ್ಗೆ ಹಿರಿಯ ಚಿಂತಕರಾದ ಸಿದ್ದನಗೌಡ ಅವರು ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ವಿಡಿಯೋದಲ್ಲಿ ಅವರು ಹೇಳುವ ಪ್ರಕಾರ, ಎಲ್ಲರೂ ಮಾರ್ಕ್ಸ್ ವಾದಿ ಸಿದ್ಧಾಂತವೆಂದರೆ ದುಡಿಯುವ ವರ್ಗದ ಕ್ರಾಂತಿಯ ಸಿದ್ಧಾಂತ, ದುಡಿಯುವ ವರ್ಗದ ಶೋಷಣೆ ನಿರ್ಮೂಲನೆ ಮಾಡಲು ಹುಟ್ಟಿಕೊಂಡ ಸಿದ್ಧಾಂತ. ಈ ಸಿದ್ಧಾಂತವನ್ನು ಅರ್ಥ ಮಾಡಿಕೊಂಡು ಬದ್ಧತೆ ಹೊಂದಿದವರು ಮುಂದೆ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದರು. ಅವರು ದುಡಿಯುವ ವರ್ಗದ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದರು, ತಾತ್ವಿಕ ಬದ್ಧತೆ ಹೊಂದಿದ್ದರು, ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಲು ಸಿದ್ಧರಿದ್ದರು. ಎಷ್ಟೇ ಮೇಲ್ವರ್ಗ, ಮೇಲ್ವರ್ಣದಿಂದ ಬಂದಿದ್ದರೂ ತಮ್ಮನ್ನು ಕೆಳವರ್ಗೀಕರಣಗೊಳಿಸಿಕೊಂಡು ದುಡಿಯುವ ವರ್ಗದ ಬದುಕಿನ ಜೊತೆ ಸಮೀಕರಣ ಮಾಡಿಕೊಂಡು ನಾಯಕತ್ವ ಕೊಡುವ ಮನೋಸ್ಥಿತಿ ಹೊಂದಿದ್ದರು. ಕಾನೂನು ವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ಪ್ರಭುತ್ವವನ್ನು ಎದುರು ಹಾಕಿಕೊಳ್ಳುವ ಮನೋಸ್ಥೈರ್ಯ ಇದ್ದ ಕಾರಣ ಮುಂದೆ ಕಮ್ಯುನಿಸ್ಟರು ಕಾರ್ಮಿಕ ವರ್ಗಕ್ಕೆ ಅಖಿಲ ಭಾರತ ಮಟ್ಟದಲ್ಲಿ ನಾಯಕತ್ವ ಕೊಡಲು ಸಾಧ್ಯವಾಯಿತು.

1920 ರಿಂದ 1942 ರವರೆಗೆ ಸ್ವಾತಂತ್ರ್ಯ ಬರುವವರೆಗೂ AITUC ಹಲವಾರು ಕಾನೂನುಗಳು ಬರಲು ಕಾರಣವಾಯಿತು. ಫ್ಯಾಕ್ಟರಿ ಕಾಯ್ದೆ, ಇಂಡಸ್ಟ್ರಿಯಲ್ ಆಕ್ಟ್, ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳುವ ಹಕ್ಕಿನ ಕಾನೂನುಗಳು ಬರಲು ಬಹಳ ದೊಡ್ಡ ಹೋರಾಟಗಳು ನಡೆದವು. ಯುದ್ಧದ ಸಂದರ್ಭದಲ್ಲಿ ಬೆಲೆ ಏರಿಕೆ ಸಂದರ್ಭದಲ್ಲಿ ಮುಂಬೈನಲ್ಲಿ SS ಮಿರೇಶ್ಕರ್ ನೇತೃತ್ವದಲ್ಲಿ ಬಹಳ ದೊಡ್ಡ ಕಾರ್ಮಿಕ ಚಳುವಳಿ ನಡೆಯಿತು. ಮದ್ರಾಸ್ ಪ್ರಾಂತ್ಯದಲ್ಲಿಯೂ ದೊಡ್ಡ ಚಳುವಳಿಗಳು ನಡೆದವು. ಮದ್ರಾಸ್, ಮುಂಬೈ, ಕಲ್ಕತ್ತಾ ಈ ಮೂರು ಕೇಂದ್ರಗಳಲ್ಲಿ ನಡೆದ ಚಳುವಳಿಗಳ ಪರಿಣಾಮವಾಗಿ 1946 ರವರೆಗೂ ಬ್ರಿಟಿಷರು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಹಲವಾರು ಕಾನೂನುಗಳನ್ನು ಅನಿವಾರ್ಯವಾಗಿ ತರಬೇಕಾಯಿತು.

ಈ ಕಾರ್ಮಿಕ ನಾಯಕರ ಮೇಲೆ, ಅದರಲ್ಲೂ ಕಮ್ಯುನಿಸ್ಟ್ ಚಿಂತನೆಯ ನಾಯಕರ ಮೇಲೆ 1924 ರ ಕಾನ್ಪುರ ಪಿತೂರಿ ಕೇಸ್, ಮೀರತ್ ಪಿತೂರಿ ಕೇಸ್ ಹಾಕಲಾಯಿತು. ಬ್ರಿಟಿಷ್ ಸಾಮ್ರಾಜ್ಯದ ದೃಷ್ಟಿಯಲ್ಲಿ ಅದು ಪಿತೂರಿ, ಆದರೆ ಭಾರತದ ದುಡಿಯುವ ಜನರ ದೃಷ್ಟಿಯಲ್ಲಿ ಅದು ಸ್ವಾತಂತ್ರ್ಯ ಹೋರಾಟವಾಗಿತ್ತು.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಕಾರ್ಮಿಕ ವರ್ಗ ಸಂಭ್ರಮಿಸುವ ಸಂದರ್ಭವಾಗಿತ್ತು, ಏಕೆಂದರೆ ಸ್ವಾತಂತ್ರ್ಯ ಆಂದೋಲನಕ್ಕೆ ಕಾರ್ಮಿಕ ವರ್ಗ ತನ್ನ ಕೊಡುಗೆ ನೀಡಿತ್ತು. 1925 ರ ಡಿಸೆಂಬರ್ ನಲ್ಲಿ ದುಡಿಯುವ ಜನರ ರಾಜಕೀಯ ವೇದಿಕೆಯಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಆರಂಭವಾಯಿತು. ಅದರ ಉದ್ದೇಶ ದುಡಿಯುವ ವರ್ಗದಲ್ಲಿ ರಾಜಕೀಯ ಪ್ರಜ್ಞೆ, ವರ್ಗ ಪ್ರಜ್ಞೆ, ಸುಲಿಗೆ ಶೋಷಣೆ ವಿರುದ್ಧದ ಹೋರಾಟದ ಪ್ರಜ್ಞೆ ತರುವುದು ಮತ್ತು ಕಾರ್ಮಿಕ ವರ್ಗದ ಶಕ್ತಿಯನ್ನು ಬಲಪಡಿಸುವುದಾಗಿತ್ತು. ಸ್ವಾತಂತ್ರ್ಯ ನಂತರವೂ AITUC ಎಡಪಂಥೀಯ ಸಿದ್ಧಾಂತ, ಕಾರ್ಮಿಕ ವರ್ಗದ ರಾಜಕೀಯ ಚಿಂತನೆಯನ್ನು ಮುಂದುವರಿಸುತ್ತಿದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.
📲Get App