🔥 TRENDING સુરત RTO એ દિવાળી રજાઓમાં ડ્રાઇવિંગ ટે... কামরায় পোড়া গন্ধ, আতঙ্কিত যাত্রীরা!... સુરતમાં હીરા વેપારીના 22 વર્ષીય પુત્રન... સુરતના ફોરેન્સિક સાયબર ક્રાઈમ સ્પેશિયા... Nagaland State Lottery Draws Scheduled... Trial to Begin in Janakidas Murder Cas...
03 Nov 2026•
ગુજરાતી मराठी ਪੰਜਾਬੀ বাংলা

ಸೋಮನಮರಡಿ ಗ್ರಾಪಂ ವ್ಯಾಪ್ತಿಯ ಐದು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಒಮ್ಮತದ ಒತ್ತಾಯಅರಕೇರಾ ತಾಲೂಕು ಕೇಂದ್ರದ ದೂರದ ಪ್ರಯಾಣಕ್ಕೆ ಮುಕ್ತಿ ನೀಡಿ; ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೈ ಎತ್ತಿ ಬೆಂಬಲಿಸಿದ ಗ್ರಾಮಸ್ಥರು

✍️ Reporter: Khaja Hussain 🗓 03 Nov 2026, 09:13 PM 👁 28
Share: 💬 WhatsApp 📘 Facebook 𝕏 Post
**ದೇವದುರ್ಗ–ಅರಕೇರಾ | ಬ್ರೇಕಿಂಗ್ ನ್ಯೂಸ್**

# ಸೋಮನಮರಡಿ ಗ್ರಾಪಂ ವ್ಯಾಪ್ತಿಯ ಐದು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಒಮ್ಮತದ ಒತ್ತಾಯ

ಅರಕೇರಾ ತಾಲೂಕು ಕೇಂದ್ರದ ದೂರದ ಪ್ರಯಾಣಕ್ಕೆ ಮುಕ್ತಿ ನೀಡಿ; ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೈ ಎತ್ತಿ ಬೆಂಬಲಿಸಿದ ಗ್ರಾಮಸ್ಥರು


**ಅರಕೇರಾ, ನ. 3:** ಅರಕೇರಾ ತಾಲೂಕಿಗೆ ಸೇರ್ಪಡೆಗೊಂಡಿರುವ ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಮರಡಿ, ಬಿ.ಆರ್. ಗುಂಡ, ಮ್ಯಾಕಲದೊಡ್ಡಿ, ನಾಗಲಾಪುರ ಹಾಗೂ ಸಂಪತ್‌ರಾಯನದೊಡ್ಡಿ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಬೇಕು ಎಂದು ಐದು ಗ್ರಾಮಗಳ 920ಕ್ಕೂ ಅಧಿಕ ಗ್ರಾಮಸ್ಥರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಸೋಮನಮರಡಿ ಗ್ರಾಮದಲ್ಲಿ ಅರಕೇರಾ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಐದು ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೈ ಎತ್ತುವ ಮೂಲಕ ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸುವ ಬೇಡಿಕೆಗೆ ಬೆಂಬಲ ಸೂಚಿಸಿದರು.



**ಅರಕೇರಾಕ್ಕೆ ತೆರಳಲು ದೂರದ ಸಮಸ್ಯೆ:**

ಸೋಮನಮರಡಿ ಗ್ರಾಮವು ಅರಕೇರಾ ತಾಲೂಕು ಕೇಂದ್ರದಿಂದ ಸುಮಾರು 46 ಕಿ.ಮೀ., ಸಂಪತ್‌ರಾಯನದೊಡ್ಡಿ 51 ಕಿ.ಮೀ., ಬಿ.ಆರ್. ಗುಂಡ 47 ಕಿ.ಮೀ., ಮ್ಯಾಕಲದೊಡ್ಡಿ 45 ಕಿ.ಮೀ. ಹಾಗೂ ನಾಗಲಾಪುರ 48 ಕಿ.ಮೀ. ದೂರದಲ್ಲಿವೆ. ಇದರಿಂದ ರೈತರು, ಸಾರ್ವಜನಿಕರು ಹಾಗೂ ಸರ್ಕಾರಿ ಯೋಜನೆಗಳ ಫಲಾನುಭವಿಗಳು ವಿವಿಧ ಕೆಲಸಗಳಿಗಾಗಿ ಅರಕೇರಾಕ್ಕೆ ತೆರಳಿ ಬರಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದರು.

ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿ ಈ ಗ್ರಾಮಗಳಿಗೆ ಸಮೀಪದಲ್ಲಿದೆ. ಸೋಮನಮರಡಿಯಿಂದ ಸುಮಾರು 6 ಕಿ.ಮೀ. ಹಾಗೂ ಮ್ಯಾಕಲದೊಡ್ಡಿಯಿಂದ ಕೇವಲ 4 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಭೌಗೋಳಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಈ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.



**ಜಾಲಹಳ್ಳಿಯಲ್ಲಿ ಅಗತ್ಯ ಮೂಲಸೌಕರ್ಯ:**

ಜಾಲಹಳ್ಳಿ ಹೋಬಳಿಯಲ್ಲಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಪಶು ಚಿಕಿತ್ಸಾಲಯ, ರೈತ ಸಂಪರ್ಕ ಕೇಂದ್ರ, ವಿದ್ಯುತ್ ಕೇಂದ್ರ ಹಾಗೂ ಬ್ಯಾಂಕಿಂಗ್ ಸೌಲಭ್ಯಗಳಿವೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ 150ಎ ಮತ್ತು 61 ಸೇರಿದಂತೆ ಪ್ರಮುಖ ರಸ್ತೆ ಸಂಪರ್ಕ ವ್ಯವಸ್ಥೆಯೂ ಇದೆ. ಹೀಗಾಗಿ ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಂಡರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಅರಕೇರಾ ಹೊಸ ತಾಲೂಕು ರಚನೆಯ ಸಂದರ್ಭದಲ್ಲಿ ಗ್ರಾಮಸ್ಥರ ಸಮರ್ಪಕ ಜನಾಭಿಪ್ರಾಯ ಸಂಗ್ರಹಿಸದೆ ಈ ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರು ಅನಗತ್ಯವಾಗಿ ದೂರ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.



**ಈ ಹಿಂದೆಯೇ ಗ್ರಾಪಂ ಠರಾವು ಅಂಗೀಕಾರ:**

ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸುವಂತೆ 24-03-2025ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಠರಾವು ಅಂಗೀಕರಿಸಲಾಗಿದೆ. ಇದೀಗ ಮತ್ತೊಮ್ಮೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರ ಸಹಿಗಳನ್ನು ಪಡೆದು ಅಧಿಕೃತವಾಗಿ ದಾಖಲಿಸಲಾಗಿದೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಸೆಕ್ಷನ್ 4(2)(ಎ) ಹಾಗೂ ಸಂಬಂಧಿತ ಕಾನೂನು ನಿಯಮಗಳ ಅನ್ವಯ ಗ್ರಾಮಗಳ ಭೌಗೋಳಿಕ ಸ್ಥಿತಿಗತಿ, ಸಾರ್ವಜನಿಕರ ಅನುಕೂಲತೆ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಐದು ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಮರುಸೇರ್ಪಡೆಗೊಳಿಸಲು ಸಂಬಂಧಪಟ್ಟ ಜಿಲ್ಲಾಡಳಿತ ಹಾಗೂ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಸಭೆಯಲ್ಲಿ ಅರಕೇರಾ ತಹಶೀಲ್ದಾರ್ ಅಮರೇಶ, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಅಣ್ಣಾರಾವ್, ಜಾಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ವೈಶಾಲಿ ಝಳಕಿ, ಸೋಮನಮರಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಸ್ಥರಾದ ಬಸಯ್ಯಸ್ವಾಮಿ, ಮಹದೇವ ಯಾದವ್, ವಸಂತ ಕುಮಾರ್ ವಕೀಲರು, ಮೌಲಾಸಾಬ್, ಸಂಗಣ್ಣ, ಬಸವರಾಜ ಗಾಣದಾಳ್ ವಕೀಲರು, ಶಿವು ಪಾಟೀಲ್ ಗಾಣ ದಾಳ್,ಸಾಬಣ್ಣ ಕಮಲದಿನ್ನಿ, ಸಾಬಣ್ಣ ಹೂಗಾರ್, ಸಾಬಣ್ಣ ತಳವಾರ್, ಕರಿಯಪ್ಪ ಮಾಲಿಪಾಟೀಲ್, ಹನುಮಂತ ಬಿಂಗಿ, ಸಾಬಗೌಡ ದುರ್ಗಪ್ಪ, ಬಿ.ಆರ್. ಗುಂಡದ ವೆಂಕಟೇಶ್, ಬಿ.ಆರ್. ಗುಂಡದ ಚನ್ನಬಸವ, ಮ್ಯಾಕಲದೊಡ್ಡಿಯ ನಾಗರಾಜ್, ಶಿವನಗೌಡ ಕಕ್ಕಲದೊಡ್ಡಿ ಸೇರಿದಂತೆ ಐದು ಗ್ರಾಮಗಳ 920ಕ್ಕೂ ಅಧಿಕ ಸಾರ್ವಜನಿಕರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App