🔥 TRENDING Pdp s mega convention in srinagar toda... सिवान में एन बि पी डी सी एल का 14वां स... दक्षिण सोलापूरसाठी ई-बस सोडण्याची मागण... Gh Nabi Lone Hanjura sb Leaves today v... ಜಿಲ್ಲೆಯ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದ ಅಧ... Every Kashmiri Pandit family must Retu...
02 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ - ಪತ್ನಿ, ಇಬ್ಬರು ಮಕ್ಕಳನ್ನು ಕೊಲೆ ಮಾಡಿ ರೈಲಿಗೆ ಬಿದ್ದು ಪತಿ ಆತ್ಮಹತ್ಯೆ - ಜಲಾಲನಗರದಲ್ಲಿ ದಾರುಣ

✍️ Reporter: Ningappa 🗓 02 Nov 2026, 10:45 AM 👁 8
Share: 💬 WhatsApp 📘 Facebook 𝕏 Post

ರಾಯಚೂರು ಜಲಾಲನಗರದಲ್ಲಿ ಕೌಟುಂಬಿಕ ಕಲಹಕ್ಕೆ ನಾಲ್ವರ ಬಲಿ - ಪತ್ನಿ ಅರುಣಾ, ಮಕ್ಕಳಾದ ಶ್ಲೋಕ, ಖುಷಿ ಅವರನ್ನು ಕೊಲೆ ಮಾಡಿ ರೈಲ್ವೆ ಹಳಿಗೆ ಬಿದ್ದು ಪತಿ ವಿಷ್ಣುರೆಡ್ಡಿ ಆತ್ಮಹತ್ಯೆ - ಪೊಲೀಸರ ತನಿಖೆ

*ಪತ್ನಿ, ಇಬ್ಬರು ಮಕ್ಕಳಿಗೆ ಕೊಲೆ ಮಾಡಿ ತಾನೂ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಶರಣಾದ ಪತಿ*

*ರಾಯಚೂರು, ನ. 1:* ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನೂ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ರಾಯಚೂರು ನಗರದ *ಜಲಾಲನಗರದಲ್ಲಿ* ಭಾನುವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಪತಿ *ವಿಷ್ಣುರೆಡ್ಡಿ (45), ಪತ್ನಿ ಅರುಣಾ (36), ಮಗ ಶ್ಲೋಕ (10), ಮಗಳು ಖುಷಿ (7)* ಎಂದು ಗುರುತಿಸಲಾಗಿದೆ.

ಪತಿಯು ಪತ್ನಿ ಮತ್ತು ಇಬ್ಬರು ಮಕ್ಕಳನ್ನು *ಉಸಿರುಗಟ್ಟಿಸಿ ಕೊಲೆ* ಮಾಡಿ, ಬಳಿಕ ತಾನೂ ರಾಯಚೂರು ತಾಲೂಕಿನ *ಚಿಕ್ಕಸುಗೂರು ಬಳಿಯ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ* ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಮೃತದೇಹಗಳು *ರಿಮ್ಸ್ ಆಸ್ಪತ್ರೆಯ* ಶವಾಗಾರದಲ್ಲಿ ಇರಿಸಲಾಗಿದ್ದು, ಶವ ಪರೀಕ್ಷೆಯ ಬಳಿಕ ಸತ್ಯಾಂಶ ಹೊರಬರಲಿದೆ ಎಂದು *ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ* ತಿಳಿಸಿದ್ದಾರೆ.

ಘಟನೆ ಸಂಬಂಧ ರಾಯಚೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
📲Get App