🔥 TRENDING New Low-Pressure System Set to Bring M... West Bengal Gold Rates Published for 1... Two Independent Winners of Bihar MLC E... Diljit Dosanjh Expresses Desire to Per... Bihar Museum crowned Asia’s top museum... Rahul Gandhi flags Maharashtra drought...
01 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ಪಿಐ ಮಂಜುನಾಥ ಸಿಲ್ಲರಿಗೆ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ - ವಿಶೇಷ ಕಾರ್ಯಾಚರಣೆ, ತನಿಖೆ ಮತ್ತು ನ್ಯಾಯ ಕ್ಷೇತ್ರದ ಸೇವೆಗೆ ಸಂದ ಗೌರವ

✍️ Reporter: Ningappa 🗓 01 Nov 2026, 11:29 AM 👁 13
Share: 💬 WhatsApp 📘 Facebook 𝕏 Post

ಕೇಂದ್ರ ಗೃಹ ಸಚಿವಾಲಯದ ಪ್ರತಿಷ್ಠಿತ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ದೇವದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಸಿಲ್ಲರಿ ಆಯ್ಕೆ - 2026ನೇ ಸಾಲಿನಲ್ಲಿ ಕರ್ನಾಟಕದಿಂದ 7 ಮಂದಿಗೆ ಮಾತ್ರ ಗೌರವ

ದೇವದುರ್ಗ: ಕೇಂದ್ರ ಗೃಹ ಸಚಿವಾಲಯ ನೀಡುವ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ ಪ್ರಶಸ್ತಿಗೆ ದೇವದುರ್ಗ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಸಿಲ್ವರಿ ಭಾಜನರಾಗಿದ್ದಾರೆ.

ಮಂಜುನಾಥ ಎಸ್. ಅವರ ವಿಶೇಷ ಕಾರ್ಯಾಚರಣೆ, ತನಿಖೆ ಮತ್ತು ನ್ಯಾಯ ಕ್ಷೇತ್ರದಲ್ಲಿನ ವೈಯಕ್ತಿಕ ಸೇವೆ, ದಕ್ಷತೆ ಮತ್ತು ಸೇವಾ ನಿಷ್ಠೆಯನ್ನು ಗುರುತಿಸಿ ಕೇಂದ್ರ ಗೃಹ ಸಚಿವಾಲಯವು 2026ನೇ ಸಾಲಿನ ‘ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ’ವನ್ನು ದೇಶದ ಒಟ್ಟು 490 ಪೊಲೀಸ್ ಸಿಬ್ಬಂದಿಗೆ ಘೋಷಿಸಿದೆ.

ಈ ಬಾರಿ ಕರ್ನಾಟಕದಿಂದ 7 ಅಧಿಕಾರಿಗಳಿಗೆ ಈ ಪದಕ ಲಭಿಸಿದ್ದು, ಅದರಲ್ಲಿ ದೇವದುರ್ಗದ ಪಿಐ ಮಂಜುನಾಥ ಸಿಲ್ವರಿ ಅವರೂ ಒಬ್ಬರು ಎಂಬುದು ದೇವದುರ್ಗಕ್ಕೆ ಹೆಮ್ಮೆಯ ವಿಷಯವಾಗಿದೆ.

ಅವರ ಈ ಸಾಧನೆಗೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಅಭಿನಂದನೆಗಳು ವ್ಯಕ್ತವಾಗುತ್ತಿವೆ.
📲Get App