🔥 TRENDING BJP Expresses Frustration Over INDIA B... Six Discounted TV Models Offer Better... Central Govt Announces New Service Ten... Maharashtra sugarcane farmers block Mu... Uttar Pradesh Approves Construction of... Maharashtra clears appointment of dire...
05 Nov 2026•
ગુજરાતી मराठी ਪੰਜਾਬੀ বাংলা

ಮಕ್ಕಳು ಜಾಲತಾಣ ಬಳಸುವಾಗ ಜಾಗೃತರಾಗಬೇಕು- ಶ್ರೀ ಅಮಿತ್ ಘಟ್ಟಿ

✍️ Reporter: Mallikarjun Gabbur 🗓 29 Oct 2026, 08:30 PM 👁 44
Share: 💬 WhatsApp 📘 Facebook 𝕏 Post

ಇಂದು ಪುಸ್ತಕ ಹಿಡಿಯುವ ಮಕ್ಕಳ ಕೈಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಮೊಬೈಲ್ ಕಂಡುಬರುತ್ತಿದೆ. ಪ್ರತಿಯೊಂದು ಜಾಲತಾಣವನ್ನು ಅವಲಂಬಿಸುವುದು ನಾವೇ ಅಪಾಯವನ್ನು ತಂದುಕೊಂಡಂತೆ. ಮಕ್ಕಳು ಜಾಲತಾಣವನ್ನು ಉಪಯೋಗಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಮಕ್ಕಳಿಗೆ ಸುರಕ್ಷಿತವಾದ ಆನ್ಲೈನ್ ಬಳಕೆಯ ಬಗ್ಗೆ ತಿಳಿಸಿಕೊಡಬೇಕು ಇಲ್ಲದಿದ್ದರೆ ಇದರಿಂದ ಇಲ್ಲದಿದ್ದರೆ ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ನಿಮ್ಮ ಫೋಟೋ ದುರ್ಬಳಕೆಯಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಸವನಬಾಗೇವಾಡಿಯ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಅಮಿತ್ ಘಟ್ಟಿ ಮಾತನಾಡಿದರು.

ಬಸವನ ಬಾಗೇವಾಡಿ ಪಟ್ಟಣದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ 'ಸುರಕ್ಷಿತ ಬಾಲ್ಯ ಅಭಿಯಾನ' (ಸುರಕ್ಷಿತ ಕ್ಲಿಕ್, ಸುರಕ್ಷಿತ ಬಾಲ್ಲ) ಮತ್ತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪುಸ್ತಕ ಹಿಡಿಯುವ ಮಕ್ಕಳ ಕೈಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಮೊಬೈಲ್ ಕಂಡುಬರುತ್ತಿದೆ. ಪ್ರತಿಯೊಂದು ಜಾಲತಾಣವನ್ನು ಅವಲಂಬಿಸುವುದು ನಾವೇ ಅಪಾಯವನ್ನು ತಂದುಕೊಂಡಂತೆ. ಮಕ್ಕಳು ಜಾಲತಾಣವನ್ನು ಉಪಯೋಗಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಮಕ್ಕಳಿಗೆ ಸುರಕ್ಷಿತವಾದ ಆನ್ಲೈನ್ ಬಳಕೆಯ ಬಗ್ಗೆ ತಿಳಿಸಿಕೊಡಬೇಕು ಇಲ್ಲದಿದ್ದರೆ ಇದರಿಂದ ಇಲ್ಲದಿದ್ದರೆ ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ನಿಮ್ಮ ಫೋಟೋ ದುರ್ಬಳಕೆಯಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಬಸವನಬಾಗೇವಾಡಿಯ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀ ಅಮಿತ್ ಘಟ್ಟಿ ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಬಸವನಬಾಗೇವಾಡಿಯ ನ್ಯಾಯವಾದಿಗಳಾದ ಶ್ರೀಮತಿ ಕೆ ಜಿ ಕಂದಗಲ್ ರವರು ಸುರಕ್ಷಿತ ಕ್ಲಿಕ್, ಸುರಕ್ಷಿತ ಬಾಲ್ಯ" ಎಂಬುದು ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳಿಗೆ ಆನ್‌ಲೈನ್ ಸುರಕ್ಷತೆ, ಸೈಬರ್ ಜಾಗೃತಿ ಮತ್ತು ಡಿಜಿಟಲ್ ಶಿಕ್ಷಣದ ಮಹತ್ವವನ್ನು ಸಾರುವ ಅತ್ಯಂತ ಅರ್ಥಪೂರ್ಣ ಮತ್ತು ಪ್ರಸ್ತುತ ಪಮುಕಿದ್ ಅತಿಥಿ ಸ್ಥಾನವನ್ನು ವಹಿಸಿದ್ದ ಬಸವನ ಬಾಗೇವಾಡಿಯ 1 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಶ್ರೀ ಈರಪ್ಪ ಡವಳೇಶ್ವರ ರವರು .
.ವೈಯಕ್ತಿಕ ಮಾಹಿತಿ ರಕ್ಷಣೆ, ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, ಯಾವುದೇ ಸೈಬರ್ ಅಪರಾಧ ಅಥವಾ ವಂಚನೆಗೆ ಒಳಗಾದರೆ, ತಕ್ಷಣ ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಎಂದು ಮಾತನಾಡಿದರು.
ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಮೊಬೈಲ್ ಬಿಡಿ ಪುಸ್ತಕ ಹಿಡಿ ಕಾರ್ಯಕ್ರಮವನ್ನು ಶಾಲೆ ಎಲ್ಲ ಶಿಕ್ಷಕರು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದೆಯಾದಲ್ಲಿ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಹಾಗೂ ಸೈಬರ್ ವಂಚನೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಸಮನ್ವಧಿಕಾರಿಗಳಾದ ಶ್ರೀ ಸುನಿಲ್ ನಾಯಕ್ ಮಾತನಾಡಿದರು.
ವಿದ್ಯಾರ್ಥಿಗಳು 'ಸುರಕ್ಷಿತ ಕ್ಲಿಕ್, ಸುರಕ್ಷಿತ ಬಾಲ್ಲ' ವಿಷಯದಡಿ ಕಿರು ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪತಹಶೀಲ್ದಾ‌ರ ಶ್ರೀಮತಿ ಬಿ ಆರ್ ಪೋಲೇಶಿ ವಹಿಸಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಶ್ರೀ ಎ ಎಸ್ ಕೋಲಕಾರ , ಶಿಶು ಅಭಿವೃದ್ಧಿ ಯೋಜನಾ ಸಹಾಯಕ ಅಧಿಕಾರಿಗಳಾದ ಶ್ರೀ ಬಿ ಎಸ್ ನೀಲುಗಲ್, ಸಂಸ್ಥೆಯ ಅಧ್ಯಕ್ಷರರಾದ ರಾಜಶೇಖರ ಪಾಟೀಲ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
📲Get App