🔥 TRENDING भवठडी में बीडिसी चुनाव प्रचार, वार्ड ल... mathura भाजपा ने तीसरी बार जताया भरोसा... અમદાવાદ ના જયભોલે ગ્રુપ દ્વારા જમ્મુ ક... महादलित टोलों में शत-प्रतिशत शौचालय नि... ਫੌਜ ਨੂੰ ਹਮੇਸ਼ਾ ਅੱਗੇ ਰਹਿਣ ਲਈ ਨਵੀਆਂ ਸਮਰੱ... પલસાણા તાલુકાના એના ગામમાં છઠ્ઠો શરદ ર...
26 Oct 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

✍️ Reporter: Khaja Hussain 🗓 26 Oct 2026, 09:03 PM 👁 17
Share: 💬 WhatsApp 📘 Facebook 𝕏 Post
**ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

### ಜಾಲಹಳ್ಳಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು: ಇಒ ರಾಜೇಂದ್ರ ಕುಮಾರ್

**ಜಾಲಹಳ್ಳಿ, ಅ. 26:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ರಾಜೇಂದ್ರ ಕುಮಾರ್ ಅವರು, ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಹೇಳಿದರು.

ಜಾಲಹಳ್ಳಿ ದೊಡ್ಡ ಪಟ್ಟಣವಾಗಿ ಬೆಳೆಯುತ್ತಿದ್ದು, ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮಂತಿ ಶಿವಬಸಪ್ಪ ರಾಮ ಪಾಳಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ, ಉಪಾಧ್ಯಕ್ಷ ವಿರೇಶ್ ಅರಕೇರಾ, ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮಣ್ಣ ನಾಯಕ್ ದಿವಾನ್, ಶಿವಮಾನ್ಯಪ್ಪ ತ್ಯಾಪ್ಲಿ, ಅಬ್ದುಲ್ ರಹಮಾನ್ ಖುರೇಶಿ, ರಮೇಶ್ ತೆಗ್ಗೆಳ್ಳಿ, ಗ್ರಾಮದ ಮುಖಂಡರಾದ ರಂಗಣ್ಣ ಕೊಲ್ಕರ್, ಭೀಮಣ್ಣ ಗುಮೇಧಾರ್, ನಿವೃತ್ತ ಶಿಕ್ಷಕ ಶಿವಪುತ್ರಪ್ಪ, ವೆಂಕೋಬ ತೋಟದ್, ಶ್ರೀನಿವಾಸ ತಿಂಪುರ್, ದುರುಗಪ್ಪ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App