🔥 TRENDING डेहरी के भेड़िया टोला में एक युवक नहर म... मृत्यु शिकार खिलाड़ियों को श्रद्धांजलि... Delhi’s Old RTR Flyover Reopens for Bi... Private Licence Sparks Statewide Elect... Kanak News Odisha airs 1PM headline bu... Punjab & Haryana High Court Orders Goo...
26 Oct 2026•
ગુજરાતી मराठी ਪੰਜਾਬੀ বাংলা

ಮನುಷ್ಯನ ಬದುಕು ಎಂದಾದರೂ ಬದಲಾಗಬಹುದು -ಶ್ರೀ ವಾಯ್ ಎಸ್ ಸೋಮನಕಟ್ಟಿ

✍️ Reporter: Mallikarjun Gabbur 🗓 26 Oct 2026, 04:50 PM 👁 20
Share: 💬 WhatsApp 📘 Facebook 𝕏 Post

ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಮಹಾಕಾವ್ಯವು ಕೇವಲ ಒಂದು ಕಾವ್ಯವಲ್ಲ; ಅದು ಧರ್ಮ, ಮರ್ಯಾದೆ, ಸತ್ಯ, ತ್ಯಾಗ ಮತ್ತು ಮಾನವೀಯ ಮೌಲ್ಯಗಳ ಮಹಾಗ್ರಂಥ. ಭಗವಾನ್ ಶ್ರೀರಾಮನ ಆದರ್ಶ ಜೀವನವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವಾಲ್ಮೀಕಿಯವರ ಜೀವನವೇ ನಮಗೊಂದು ದೊಡ್ಡ ಸಂದೇಶ ನೀಡುತ್ತದೆ. ಅವರು ಹಿಂದೆ ಬೇಟೆಗಾರನಾಗಿದ್ದರು ಎಂಬ ಪ್ರತೀತಿ ಇದೆ. ಆದರೆ ಸನ್ಮಾರ್ಗದ ಸಂಪರ್ಕದಿಂದ ಅವರು ಮಹರ್ಷಿಯಾಗಿ, ಆದಿಕವಿಯಾಗಿ ಪರಿವರ್ತನೆ ಹೊಂದಿದರು. ಇದು ಮನುಷ್ಯನ ಬದುಕು ಎಂದಾದರೂ ಬದಲಾಗಬಹುದು; ಒಳ್ಳೆಯ ದಾರಿ ತೋರಿದರೆ ಯಾರಾದರೂ ಮಹಾನ್ ವ್ಯಕ್ತಿಯಾಗಬಹುದು ಎಂಬುದನ್ನು ತೋರಿಸುತ್ತದೆ ಎಂದು ಮಾತನಾಡಿದರು.

ವಾಲ್ಮೀಕಿ ಮಹರ್ಷಿಗಳ ಜೀವನ ನಮಗೆ ನೀಡುವ ಅತ್ಯಂತ ದೊಡ್ಡ ಸಂದೇಶವೆಂದರೆ ಆಂತರಿಕ ಪರಿವರ್ತನೆ. 'ರತ್ನಾಕರ'ನೆಂಬ ಸಾಮಾನ್ಯ ವ್ಯಕ್ತಿ, ಸತ್ಸಂಗ ಮತ್ತು ತೀವ್ರ ಧ್ಯಾನ-ತಪಸ್ಸಿನ ಬಲದಿಂದ 'ಮಹರ್ಷಿ ವಾಲ್ಮೀಕಿ'ಯಾಗಿ ಬದಲಾದ ಇತಿಹಾಸವೇ ಒಂದು ವಿಸ್ಮಯ. ವ್ಯಕ್ತಿಯ ಹಿನ್ನೆಲೆ ಅಥವಾ ಹಿಂದಿನ ತಪ್ಪುಗಳಿಗಿಂತ, ಆತನ ಸಂಕಲ್ಪ ಮತ್ತು ಆಂತರಿಕ ಪರಿವರ್ತನೆ ಎಷ್ಟು ಮಹತ್ವದ್ದು ಎಂಬುದನ್ನು ಅವರ ಜೀವನ ಸ್ಪಷ್ಟವಾಗಿ ತೋರಿಸುತ್ತದೆ ಎಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ವೆಂಕಟೇಶ್ವ ವಂದಾಲ ಮಾತನಾಡಿದರು
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಿಗೆ ಆಗಮಿಸಿದ ಬಿ ಎಸ್ ಪಾಟೀಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕರದ ಶ್ರೀ ಮಹಾಂತೇಶ ಚೆಕನರ್ತಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಜೀವನ ಕುರಿತು ಉಪನ್ಯಾಸ ನೀಡಿದರು. ರಾಮಾಯಣ ಮಹಾಕಾವ್ಯ ರಚಿಸಲು ಪ್ರೇರಣೆ ನೀಡಿದ ಅಂಶಗಳನ್ನು ಹಾಗೂ ಪ್ರಸ್ತುತ ಸಮಾಜದಲ್ಲಿ ರಾಮಾಯಣದ ಮಹತ್ವದ ಕುರಿತು ಮಾತನಾಡುತ್ತಾ ಪ್ರತಿಯೊಬ್ಬರೂ ಕೂಡ ಆದರ್ಶದ ಬದುಕನ್ನು ನಡೆಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚ ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷರಾದ ಶ್ರೀ ಮಹಬೂಬ್ ನಾಯ್ಕೋಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಜುಳಾ ಹಿರೇಮನಿ, ಪುರಸಭೆ ಅಧಿಕಾರಿಗಳಾದ ಶ್ರೀ ಶಬ್ಬೀರ್ ರೇವೂಕರ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
📲Get App