🔥 TRENDING 300 विषयों के स्मरण अद्भुत प्रदर्शन காரைக்குடி ரயில்வே சுரங்கப்பாதையில் கூ... हरिद्वार की हर की पौड़ी पर गंगा जलस्तर... सिद्धेश्वर सोसाइटी, जिटली में नव दुर्ग... गंगवाहा में मिट्टी में दब गई बच्ची सुम... காரைக்குடி புறவழிச்சாலை ரயில்வே கேட்டி...
22 Oct 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಗ್ರಾ.ಪಂ.ನಲ್ಲಿ ಶ್ರೀ ಮಧ್ವ ಚಾರ್ಯ ಜಯಂತಿ ಆಚರಿಸದಿರುವುದಕ್ಕೆ ಮಯೂರಿ ದೇಸಾಯಿ ಖಂಡನೆ!

✍️ Reporter: Khaja Hussain 🗓 22 Oct 2026, 08:52 AM 👁 18
Watch on: 📘 Facebook
Share: 💬 WhatsApp 📘 Facebook 𝕏 Post
ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್

# ಜಾಲಹಳ್ಳಿ ಗ್ರಾ.ಪಂ.ನಲ್ಲಿ ಶ್ರೀ ಮಧ್ವ ಚಾರ್ಯ ಜಯಂತಿ ಆಚರಿಸದಿರುವುದಕ್ಕೆ ಮಯೂರಿ ದೇಸಾಯಿ ಖಂಡನೆ!

**ಸರ್ಕಾರದ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಆಗ್ರಹ**

**ಜಾಲಹಳ್ಳಿ, ಅ.22:** ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಕ್ಟೋಬರ್ 21ರಂದು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಆಚರಿಸದಿರುವುದಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಮಯೂರಿ ಶ್ರೀಧರ್ ದೇಸಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸಲು ಘೋಷಿಸಲಾದ ಮಹನೀಯರ ಜಯಂತಿಯನ್ನು ಆಚರಿಸದೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯ ಸರ್ಕಾರವು ಶ್ರೀ ಮಧ್ವಾಚಾರ್ಯರ ಜಯಂತಿಯನ್ನು ಅಧಿಕೃತವಾಗಿ ಆಚರಿಸಲು ಘೋಷಿಸಿದ್ದು, ರಾಜ್ಯಾದ್ಯಂತ ಜಯಂತಿ ಆಚರಣೆ ನಡೆದಿರುವ ಸಂದರ್ಭದಲ್ಲಿ ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಜಯಂತಿ ಆಚರಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

**ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ಷೇಪ**

ಈ ಕುರಿತು ಜಾಲಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರನ್ನು ವಿಚಾರಿಸಿದಾಗ, ಶ್ರೀ ಮಧ್ವಾಚಾರ್ಯರ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ತಮಗೆ ಯಾವುದೇ ಆದೇಶ ಬಂದಿಲ್ಲ ಹಾಗೂ ತಾಲ್ಲೂಕು ಪಂಚಾಯಿತಿ ಇಲಾಖೆಯ ಅಧಿಕಾರಿಗಳೂ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ ಎಂದು ಮಯೂರಿ ದೇಸಾಯಿ ಹೇಳಿದ್ದಾರೆ.

ಸರ್ಕಾರದ ವತಿಯಿಂದ ಜಯಂತಿ ಆಚರಣೆಗೆ ಸೂಚನೆ ನೀಡಿದ್ದರೂ, ಸಂಬಂಧಿಸಿದ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಚರಣೆ ಕೈಬಿಟ್ಟಿರುವುದು ಆಡಳಿತಾತ್ಮಕ ಲೋಪಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

**ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ**

ಮಹನೀಯರ ಜಯಂತಿಗಳನ್ನು ಗೌರವಪೂರ್ವಕವಾಗಿ ಆಚರಿಸುವುದು ಸರ್ಕಾರದ ಆಶಯವಾಗಿದ್ದು, ಇಂತಹ ಕಾರ್ಯಕ್ರಮಗಳ ಕುರಿತು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಆದ್ದರಿಂದ ಜಾಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶ್ರೀ ಮಧ್ವಾಚಾರ್ಯರ ಜಯಂತಿ ಆಚರಿಸದಿರುವ ಪ್ರಕರಣವನ್ನು ಸಂಬಂಧಿಸಿದ ಮೇಲಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು.

ಈ ಲೋಪಕ್ಕೆ ಕಾರಣರಾದ ಪಿಡಿಒ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಹೊಣೆಗಾರಿಕೆಯನ್ನು ಪರಿಶೀಲಿಸಿ, ತಪ್ಪು ಸಾಬೀತಾದಲ್ಲಿ ಸೂಕ್ತ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀ ಮತಿ ಮಯೂರಿ ಶ್ರೀಧರ್ ದೇಸಾಯಿ ಅವರು ಒತ್ತಾಯಿಸಿದ್ದಾರೆ.

ವರದಿ ಖಾಜಾ ಹುಸೇನ್ ಬಾಬಾ ಜಾಲಹಳ್ಳಿ
📲Get App