🔥 TRENDING Bhagat Singh‑lookalike Photo Found on... Siddhu Moosewala's brother dazzles at... US Judge Halts $20 Million Trump Taxpa... Houthi Group Claims Attack on Dammam’s... Supreme Court verdict restores public... Aaditya Thackeray rallies in Dadar aft...
12 Oct 2026•
ગુજરાતી मराठी ਪੰਜਾਬੀ বাংলা
National

ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘ ಚನ್ನಗಿರಿ ತಾಲ್ಲೂಕು

✍️ Reporter: ಕೆ ಆರ್ ಸುರೇಶ್ 🗓 12 Oct 2026, 06:32 AM 👁 39
Watch on: 📘 Facebook
Share: 💬 WhatsApp 📘 Facebook 𝕏 Post

ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಮಂಜುನಾಥ ಸಮುದಾಯ ಭವನದ ಆವರಣದಲ್ಲಿ, ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಯಿತುಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಯವರು ಉದ್ಘಾಟಿಸಿದರು.ವರದಿ: ಸುರೇಶ್ ಕೆ. ಆರ್. ದೇವರಹಳ್ಳಿ

ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ
ಸಂತೇಬೆನ್ನೂರು, ದಿನಾಂಕ: 12/10/2026
ದಿನಾಂಕ 12 ಅಕ್ಟೋಬರ್ 2026ರಂದು ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ಮಂಜುನಾಥ ಸಮುದಾಯ ಭವನದ ಆವರಣದಲ್ಲಿ, ಉಪ್ಪಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಯವರು ಉದ್ಘಾಟಿಸಿದರು. ಸ್ವಾಮೀಜಿಯವರೊಂದಿಗೆ ಸಂಘದ ಹಿರಿಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ವಿಜೃಂಭಣೆಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವುದು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸುವುದು ಈ ಸಮಾರಂಭದ ಪ್ರಮುಖ ಉದ್ದೇಶವಾಗಿತ್ತು.
ಸ್ವಾಮೀಜಿಯವರ ಆಶೀರ್ವಚನ ಹಾಗೂ ಹಿರಿಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಶಿಕ್ಷಣದ ಮಹತ್ವ, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಮಾಜದ ಅಭಿವೃದ್ಧಿಗೆ ಸಂಘಟನೆಯ ಕೊಡುಗೆಯನ್ನು ಸಾರುವ ಅರ್ಥಪೂರ್ಣ ಸಮಾರಂಭವಾಗಿ ಮೂಡಿಬಂತು.
ವರದಿ: ಸುರೇಶ್ ಕೆ. ಆರ್. ದೇವರಹಳ್ಳಿ
📲Get App