🔥 TRENDING Jamia Millia Islamia hosts AISA solida... Bharatanatyam performance moves audien... Delhi's Art Pieces Reveal Their Untold... સેવા જ્યોતિ અભિયાનમાં વડાપ્રધાનનું વર્... जिंतूरच्या हळदीच्या शेतात १६ किलो गांज... આજરોજ રાજુલા ટી જે બી એસ ગર્લ્સ સ્કૂલ...
07 Oct 2026•
ગુજરાતી मराठी ਪੰਜਾਬੀ বাংলা

ರೈತರು ಕೇವಲ ಫಲಾನುಭವಿಗಳಾಗದೆ ಪಾಲುದಾರರಾಗಿ ಕೈಜೋಡಿಸಿ: ಭಟ್

✍️ Reporter: KALLAPPA MIRJI 🗓 07 Oct 2026, 10:20 PM 👁 13
Share: 💬 WhatsApp 📘 Facebook 𝕏 Post

ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆಯಿಂದ ಸೋಮವಾರ ಆಯೋಜಿಸಿದ್ದ ಜಲಕೃಷಿ ಸಮೃದ್ಧಿ ಯೋಜನೆಯಡಿ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಲಘಟಗಿ: ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಜಲ ಸಂರಕ್ಷಣೆ ನಮ್ಮ ಯೋಜನೆ ಉದ್ದೇಶವಾಗಿದ್ದು ರೈತರು ಕೇವಲ ಫಲಾನುಭವಿಗಳಾಗದೆ ಪಾಲುದಾರರಾಗಿ ಕೈಜೋಡಿಸಬೇಕು ಎಂದು ಮನುವಿಕಾಸ ಸಂಸ್ಥೆ ಮುಖ್ಯಸ್ಥ ಗಣಪತಿ ಭಟ್ ತಿಳಿಸಿದರು.
ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆಯಿಂದ ಸೋಮವಾರ ಆಯೋಜಿಸಿದ್ದ ಜಲಕೃಷಿ ಸಮೃದ್ಧಿ ಯೋಜನೆಯಡಿ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಧಾರವಾಡದ ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶಿವಯೋಗಿ ಮಾತನಾಡಿ ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಕೃಷಿ ಭೂಮಿಯ ಫಲವತ್ತತೆ ಕಾಪಾಡುವ ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಸಮಗ್ರ ಕೃಷಿ ಪದ್ಧತಿಯ ಮಹತ್ವ, ನುಗ್ಗೆ ಬೆಳೆಯ ಉಪಯೋಗಗಳು ಹಾಗೂ ಅದರಿಂದ ರೈತರಿಗೆ ದೊರೆಯುವ ಪ್ರಯೋಜನಗಳ ಕುರಿತು ವಿವರಿಸಿದರು.
ಪ್ರಗತಿಪರ ರೈತ ಮಾನಪ್ಪ ಸಿಂಗನಹಳ್ಳಿ ಅವರು ಜೀವಾಮೃತ ಹಾಗೂ ಗೋ ಕೃಪಾಮೃತ ಸ್ಥಳದಲ್ಲಿ ತಯಾರಿಸಿ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಅವುಗಳ ಬಳಕೆಯಿಂದಾಗುವ ಪ್ರಯೋಜನೆ ಹಾಗೂ ಕೃಷಿ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಅವುಗಳ ಮಹತ್ವ ವಿವರಿಸಿದರು.
ದಾವಲಸಾಬ್ ಕುಂಬಾರ, ಚನ್ನಬಸಯ್ಯ ಹುಬ್ಬಳ್ಳಿಮಠ, ಈಶ್ವರ ಗೋದಿ,ಸಾಯಿನಾಥ್ ಪವಾರ, ಚಂದ್ರಮುನಿ ದಾದುಗೋಳ, ನಿಂಗಪ್ಪ ಬ್ಯಾಹಟ್ಟಿ,ಗದಿಗೆಪ್ಪ ಪಲ್ಲೇದ, ಮಹಾಂತಯ್ಯ ದುರದುಂಡಿಮಠ, ಚಂದ್ರಕಾಂತ ಹಡಪದ, ಈಶ್ವರ ಪಾಟೀಲ ಇದ್ದರು.
📲Get App