🔥 TRENDING ‘First Christmas’ Film to Start Shooti... ‘Oka Court Case’ Spotlight on Contempo... Meghalaya aims for $16 billion economy... Bangladesh Measles Outbreak Claims 9 L... Dr. Vaidehi Taman Delves into Kashmir’... Alliance City Launches Three New Resid...
28 Sep 2026•
ગુજરાતી मराठी ਪੰਜਾਬੀ বাংলা
Sports

ದಾವಣಗೆರೆ ವಿಶ್ವವಿದ್ಯಾಲಯ ಅಂತರ್ ಕಾಲೇಜು ಕರಾಟೆ ಸ್ಪರ್ಧೆ: ವಿವಿ ತಂಡಗಳ ಆಯ್ಕೆ

✍️ Reporter: D Basha Saheb 🗓 28 Sep 2026, 03:52 PM 👁 14
Share: 💬 WhatsApp 📘 Facebook 𝕏 Post

ದಾವಣಗೆರೆ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಮಟ್ಟದ ಪುರುಷ ಮತ್ತು ಮಹಿಳೆಯರ ಕರಾಟೆ ಸ್ಪರ್ಧೆಗಳು ಮತ್ತು ೨೦೨೬-೨೭ರ ಸಾಲಿನ ವಿವಿ ತಂಡಗಳ ಆಯ್ಕೆ ಪ್ರಕ್ರಿಯೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಯಶಸ್ವಿಯಾಗಿ ಜರುಗಿತು.

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗಾಗಿ ಅಂತರ್ ಕಾಲೇಜು ಮಟ್ಟದ ಕರಾಟೆ ಸ್ಪರ್ಧೆಯನ್ನು ದಿನಾಂಕ ೨೫/೦೯/೨೦೨೬ ರಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯು ೨೦೨೬-೨೭ನೇ ಸಾಲಿನ ದಾವಣಗೆರೆ ವಿವಿ ತಂಡಗಳ ಆಯ್ಕೆಗಾಗಿ ನಡೆಸಲಾಯಿತು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಶ್ರಮಿಸಿದರು. ರೆಫ್ರಿ ಕಮಿಷನ್ ಚೇರ್ಮನ್ ಕ್ಯೂಶಿ ಕೆ ಪಿ ಜೋಶ್ ಅವರ ಮಾರ್ಗದರ್ಶನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಸೆನ್ಸಾಯ್ ಭಾಷಾ ಸಾಹೇಬ್, ಸೆನ್ಸಾಯ್ ಕೆ ಬಿ ರಾಜು, ಸೆನ್ಸಾಯ್ ನಜೀರ್ ಬಾಷಾ, ಸೆನ್ಸಾಯ್ ಸೈಯದ್ ರಿಯಾಜ್, ಸೆನ್ಸಾಯ್ ಆನಂದ್ ಮುದಲಿಯಾರ್, ಸೆನ್ಸಾಯ್ ರಾಘವೇಂದ್ರ, ಸೆನ್ಸಾಯ್ ಯುವರಾಜ್, ಸೆನ್ಸಾಯ್ ಪ್ರವೀಣ್ ಕುಮಾರ್, ಸೆನ್ಸಾಯ್ ತನ್ವೀರ್ ಭಾಷಾ, ಸೆನ್ಸಾಯ್ ಗೌತಮ್ ಮತ್ತು ಸಂತೋಷ್ ಕುಮಾರ್ ಅವರು ರೆಫ್ರಿ ಮತ್ತು ಜಡ್ಜ್‌ಗಳಾಗಿ ಕಾರ್ಯನಿರ್ವಹಿಸಿದರು. ಅವರ ಉಪಸ್ಥಿತಿಯಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯಿತು.
📲Get App