🔥 TRENDING Congress Accuses AAP‑GFP Alliance of T... Jazeera Airways adds four new India‑Ku... KONKANIZ Platform Launched in Mangalur... एटा के औद्योगिक आस्थान उपकेंद्र में पर... Manipur U17 Boys Score 15-0 Victory in... ગઢશીશામાં LCBની જુગાર પર તવાઈ, 1 લાખથી...
16 Sep 2026
ગુજરાતી मराठी ਪੰਜਾਬੀ বাংলা

ದೇವದುರ್ಗ ಜಾಲಹಳ್ಳಿ ಪಶು ಆಸ್ಪತ್ರೆ ಮುಂದೆ ರೈತರ ಹೋರಾಟ ವೈದ್ಯರು ಸಿಬ್ಬಂದಿ ನಿಗದಿತ ಸಮಯಕ್ಕೆ ಹಾಜರಾಗಬೇಕು ಪಶುಪಾಲಕರಿಗೆ ಸಮರ್ಪಕ ಸೇವೆ ನೀಡಲು ಆಗ್ರಹ

✍️ Reporter: MAHAMAD WALI QURESHI 🗓 16 Sep 2026, 12:14 PM 👁 14
Watch on: ▶️ YouTube
Share: 💬 WhatsApp 📘 Facebook 𝕏 Post
ದೇವದುರ್ಗ ಜಾಲಹಳ್ಳಿ ಪಶು ಆಸ್ಪತ್ರೆ ಮುಂದೆ ರೈತರ ಹೋರಾಟ ರ್, ವೈದ್ಯರು ಸಿಬ್ಬಂದಿ ನಿಗದಿತ ಸಮಯಕ್ಕೆ ಹಾಜರಾಗಬೇಕು ಪಶುಪಾಲಕರಿಗೆ ಸಮರ್ಪಕ ಸೇವೆ ನೀಡಲು ಆಗ್ರಹ

ನೀಡ್ 24 ನ್ಯೂಸ್

ಜಾಲಹಳ್ಳಿ, ಸೆ.15-ಪಟ್ಟಣದ ಪಶು ಆಸ್ಪತ್ರೆ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘಟನೆ ನೇತೃತ್ವದಲ್ಲಿ ವಿವಿಧ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಹಾಗೂ ಪಶುಪಾಲಕರು ಹೋರಾಟ ನಡೆಸಿದರು.

ಪಶು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಹಾಜರಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಜಾನುವಾರು ಸಾಕಾಣಿಕೆದಾರ ರೈತರಿಗೆ ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಪಶುವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಬಹುತೇಕ ರೈತ ಕುಟುಂಬಗಳಿಗೆ ಹೈನುಗಾರಿಕೆ ಹಾಗೂ ಜಾನುವಾರು ಸಾಕಾಣಿಕೆ ಪ್ರಮುಖ ಆದಾಯದ ಮೂಲವಾಗಿದೆ. ಜಾನುವಾರುಗಳಿಗೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ತಕ್ಷಣ ಪಶುವೈದ್ಯಕೀಯ ಚಿಕಿತ್ಸೆ ಲಸಿಕೆ. ಔಷಧೋಪಚಾರ ಹಾಗೂ ಅಗತ್ಯ ಸಲಹೆ ದೊರೆಯುವುದು ಅತ್ಯಂತ ಅವಶ್ಯಕವಾಗಿ ದೆ. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಲಭ್ಯವಿಲ್ಲದಿರುವುದು ಮತ್ತು ಸೇವೆಯಲ್ಲಿ ವಿಳಂಬವಾಗುತ್ತಿರುವುದರಿಂದ ರೈತರು ಖಾಸಗಿ ಪಶುವೈದ್ಯರ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೋರಾಟಗಾರರು ಆರೋಪಿಸಿದರು.

ಪಶು ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಸಮರ್ಪಕವಾಗಿ ಲಭ್ಯವಿರುವಂತೆ ನೋಡಿ ಕೊಳ್ಳಬೇಕು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು, ರೈತರಿಗೆ ತುರ್ತು ಸಂದರ್ಭದಲ್ಲಿ ಪಶುವೈದ್ಯಕೀಯ ಸೇವೆ ದೊರೆಯುವ ವ್ಯವಸ್ಥೆ ಕಲ್ಪಿಸಬೇಕು, ಆಸ್ಪತ್ರೆಯಲ್ಲಿನ ಮೂಲಸೌಕರ್ಯಗಳನ್ನು ಸುಧಾರಿಸಬೇಕು

ಪಶು ಆಸ್ಪತ್ರೆ ಜಾಲಹಳ್ಳಿ

ಹಾಗೂ ಪಶುಪಾಲಕರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದಲ್ಲದೆ ಜಾನುವಾರುಗಳಿಗೆ ನಿಯಮಿತವಾಗಿ ಲಸಿಕೆ ನೀಡುವುದು, ರೋಗ ನಿಯಂತ್ರಣಕ್ಕೆ ಆಗತ್ಯ ಕ್ರಮ ಕೈಗೊಳ್ಳುವುದು, ರೈತರಿಗೆ ಪಶುಪಾಲನಾ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪಶುವೈದ್ಯಕೀಯ ಸೇವೆಯನ್ನು ಪರಿಣಾಮಕಾರಿಯಾಗಿ ತಲುಪಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಅಧಿಕಾರಿಗಳ ಲಿಖಿತ ಭರವಸೆ

ಹೋರಾಟದ ವಿಷಯ ತಿಳಿದು ಸ್ಥಳಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು.

ರೈತರು ಹಾಗೂ ಪಶುಪಾಲಕರು ಮುಂದಿಟ್ಟಿರುವ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಆಲಿಸಿದ ಅಧಿಕಾರಿಗಳು, ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಈಡೇರಿಸುವ ಭರವಸೆ ನೀಡಿದರು. ಅಲ್ಲದೆ ಸಮಸ್ಯೆಗಳ ಕುರಿತು ಉನ್ನತ ಮಟ್ಟದಲ್ಲಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ

ತಿಳಿಸಿದರು.

ಅಧಿಕಾರಿಗಳ ಲಿಖಿತ ಭರವಸೆ ಹಾಗೂ ಉನ್ನತ ಮಟ್ಟದ ಸಭೆ ನಿಗದಿಯಾದ ಹಿನ್ನೆಲೆಯಲ್ಲಿ ರೈತ ಸಂಘಟನೆ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಿತು. ಆದರೆ ಭರವಸೆಗಳು ಕಾರ್ಯರೂಪಕ್ಕೆ ಬರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ಸಂಘಟನೆ ನೀಡಿತು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘಟನೆ ಗ್ರಾಮ ಘಟಕ ಅಧ್ಯಕ್ಷ ಹನುಮಂತ ಮಡಿವಾಳ, ರಂಗನಾಥ ಬುಂಕಲದೊಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ತೆಗ್ಗೆಳ್ಳಿ, ಕೃಷಿ ಕೂಲಿಕಾರರ ಸಂಘಟನೆ ತಾಲೂಕು ಅಧ್ಯಕ್ಷ ನಿಂಗಣ್ಣ ಮಕಾಶಿ, ದುರುಗಪ್ಪ ಹೊರಾಟ್ಟಿ, ಬಸವರಾಜ ವಂದಿ, ಸುರೇಶಗೌಡ, ನರಸಣ್ಣ ಧರೆಪೂರ, ಚಂದ್ರಶೇಖರ, ಶಿವಪ್ಪ ಚಿಂಚರಕಿ, ಬಸವರಾಜ ಲಿಂಗದಹಳ್ಳಿ, ಮುದ್ದಪ್ಪ ಬಂಡಿ, ಕೃಷಿ ಕೂಲಿಕಾರರ ಸಂಘಟನೆ ಗ್ರಾಮ ಘಟಕ ಅಧ್ಯಕ್ಷ ಶರಣಪ್ಪ ಕಾರಲಕುಂಟಿ, ನರೇಶ್ ಕುರುಕುಂದಿ, ಮೌನೇಶ ಚಂದ್ರು ಸೇರಿದಂತೆ ಹಲವಾರು ಉಪಸ್ಥಿತರಿದ್ದರು.. ವರದಿ ವಲಿ ಖುರೇಷಿ
📲Get App