ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರ: ತ್ಯಾಗಮಯಿ ಮಾತಾಜಿ
ಹರಿಹರ, ಸೆ.5: ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಬಾಹ್ಯ ರೂಪಕ್ಕಿಂತ ಚಾರಿತ್ರ್ಯ, ಆತ್ಮವಿಶ್ವಾಸ ಹಾಗೂ ಉತ್ತಮ ಆಲೋಚನೆಗಳೇ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಚಳ್ಳಕೆರೆಯ ಶ್ರೀ ಶಾರದಾಶ್ರಮದ ಅಧ್ಯಕ್ಷೆ ಪೂಜ್ಯ ತ್ಯಾಗಮಯಿ ಮಾತಾಜಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಸ್ವಾಮಿ ವಿವೇಕಾನಂದರು ಮತ್ತು ವ್ಯಕ್ತಿತ್ವ ನಿರ್ಮಾಣ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಜ್ಞಾನದ ಪರದೆಯನ್ನು ತೆರವುಗೊಳಿಸಿ ಉತ್ತಮ ಆಲೋಚನೆ ಹಾಗೂ ಕಾರ್ಯಗಳನ್ನು ರೂಢಿಸಿಕೊಳ್ಳಬೇಕು. ಅವು ನಿರಂತರ ಅಭ್ಯಾಸದಿಂದ ಉತ್ತಮ ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತವೆ. ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಧೈರ್ಯ, ಆತ್ಮವಿಶ್ವಾಸ ಹಾಗೂ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ,ಡಾ. ಶಕುಂತಲಾ ಎನ್. ಮಾತನಾಡಿ, ಸತ್ಯ, ಪ್ರಾಮಾಣಿಕತೆ ಹಾಗೂ ಪಾವಿತ್ರ್ಯ ಉತ್ತಮ ಚಾರಿತ್ರ್ಯದ ಅಡಿಪಾಯಗಳಾಗಿವೆ. ಏಕಾಗ್ರತೆ ಮತ್ತು ಶಿಸ್ತು ಇದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಧಾರವಾಡದ ಶ್ರೀ ರಾಮಕೃಷ್ಣ ಆಶ್ರಮದ ಪೂಜ್ಯ ಬುದ್ಧಿಯೋಗಾನಂದಜಿ ಮಹಾರಾಜ್, ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪೂಜ್ಯ ಸ್ವಾಮಿ ಆತ್ಮದೀಪಾನಂದಜಿ ಮಹಾರಾಜ್, ಡಾ. ತಿರುಮಲ ಟಿ., ಡಾ. ಬಾಬು ಕೆ.ಎ., ಡಾ. ಯಶೋಧಾ ಆರ್. ಉಪಸ್ಥಿತರಿದ್ದರು.
ಡಾ. ಗೌರಮ್ಮ ಎಂ.ಎಸ್. ಸ್ವಾಗತಿಸಿದರು. ಕುಮಾರಿ ಅನುಷಾ. ಜಿ. ಎಂ. ಪ್ರಾರ್ಥನೆ ಮಾಡಿದರು,ಕೆ.ಎಂ. ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಜಿ.ಪಿ. ಕಾರ್ಯಕ್ರಮ ನಿರ್ವಹಿಸಿದರು. ಡಾ. ಗಂಗರಾಜು ಎಸ್. ವಂದಿಸಿದರು.