🔥 TRENDING Mahindra Tractors Launches ‘Dunia Vich... Eight Assam Residents Return After Sur... Truckers' Protest Over Entry Restricti... Morigaon District Accelerates Pulse Cu... Jharkhand CID busts recruitment exam s... Jharkhand HC Rules Fees Paid to Medica...
31 Aug 2026
ગુજરાતી मराठी ਪੰਜਾਬੀ বাংলা

ವಿಬಿ. ಜಿ ರಾಮಜೀ ಯೋಜನೆಯಡಿ ಕಾರ್ಮಿಕರು ಕೆರೆ ಹೊಳೆತ್ತುವ ಸ್ಥಳಕ್ಕೆ ಸಿಇಓ ಭೇಟಿ

✍️ Reporter: KALLAPPA MIRJI 🗓 31 Aug 2026, 09:30 PM 👁 10
Share: 💬 WhatsApp 📘 Facebook 𝕏 Post

ಕಲಘಟಗಿ: ತಾಲ್ಲೂಕಿನ ಬೀರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೀರವಳ್ಳಿ ಗ್ರಾಮದ ಕಡಬಗಟ್ಟಿ ಕೆರೆಯಲ್ಲಿ ವಿಬಿ. ಜಿ ರಾಮಜೀ ಯೋಜನೆಯಡಿ ಕೂಲಿ ಕಾರ್ಮಿಕರು ಕೆರೆ ಪುನಃಶ್ಚೇತನಗೊಳ್ಳಿಸುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತಿ ಸಿಇಓ ಭುವನೇಶ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

ನಂತರ ತಾಲ್ಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಕನ್ನಿನಾಯಕ ಕೆರೆ, ಉಗ್ಗಿನಕೇರಿ ಗ್ರಾಮದ ಹೆಗ್ಗೆರಿ ಕೆರೆಗೆ ಭೇಟಿ ನೀಡಿ ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿ ಸಮಸ್ಯೆ ಆಲಿಸಿ ಕೆಲಸದ ಸ್ಥಳದಲ್ಲಿ ಅಗತ್ಯ ನೀರಿನ ಸೌಲಭ್ಯ, ಪ್ರಥಮ ಚಿಕಿತ್ಸೆ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಬೇರೆ ಕಡೆ ವಲಸೆ ಹೋಗುವದು ತಡೆಗಟ್ಟಿ ನಿಮ್ಮ ಗ್ರಾಮದಲ್ಲಿ ಉದ್ಯೋಗ ನೀಡುತ್ತಿರುವದು ಯೋಜನೆ ಉದ್ದೇಶವಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬಂದು ಯೋಜನೆ ಸದುಪಯೋಗ ಪಡಿಸಿಕೊಳ್ಳಲ್ಲು ತಿಳಿಸಿದರು.
ತಾಲ್ಲೂಕ ಪಂಚಾಯತಿ ಇಓ ಪರಶುರಾಮ ಸಾವಂತ, ಯೋಜನೆ ತಾಲ್ಲೂಕ ಸಹಾಯಕ ನಿರ್ದೇಶಕ ಗಿರೀಶ ಕೋರಿ, ಪಿಡಿಓ ಶಿವಾನಂದ ಶಿಬಾರಗಟ್ಟಿ, ಟೆಕ್ನಿಕಲ್ ಇಂಜನೀಯರ್ ವರುಣ ಕುಲಕರ್ಣಿ, ಐ.ಇ.ಸಿ ಸಂಯೋಜಕ ಎಸ್. ದಿವಾಕರ ಹಾಗೂ ಸಿಬ್ಬಂದಿಗಳು ಇದ್ದರು.
📲Get App