🔥 TRENDING Punjab High Court orders Chief Secreta... Clash erupts over alleged fake voting... उन्नाव की 161 ग्राम पंचायतें मुख्यमंत्... અબડાસા તાલુકાના પૈયા ગામે ગૌવંશ પર કુહ... હિંમતનગરમાં સ્વચ્છતા અભિયાન: નગરપાલિકા... માનગઢમાં ખોડલધામ કાગવડ રથની પધરામણી
17 Nov 2026•
ગુજરાતી मराठी ਪੰਜਾਬੀ বাংলা

ಬೋಧನೆ ಮತ್ತು ಸಂಶೋಧನೆಯಲ್ಲಿ AI ಪರಿಕರಗಳ ಬಳಕೆ ಕುರಿತು ಅಧ್ಯಾಪಕರಿಗೆ ತರಬೇತಿ

✍️ Reporter: Viswanatha D R 🗓 17 Nov 2026, 02:07 PM 👁 14
Share: 💬 WhatsApp 📘 Facebook 𝕏 Post
ಹರಿಹರ, ನವೆಂಬರ್ 17: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹರಿಹರದ ಕಂಪ್ಯೂಟರ್ ವಿಜ್ಞಾನ ಮತ್ತು ಬಿಸಿಎ ವಿಭಾಗದ ವತಿಯಿಂದ ಆಂತರಿಕ ಗುಣಮಟ್ಟ ಭರವಸೆ ಕೋಶದ (IQAC) ಅಡಿಯಲ್ಲಿ ಮಂಗಳವಾರ ಕೃತಕ ಬುದ್ಧಿಮತ್ತೆ (AI) ಪರಿಕರಗಳ ಪ್ರಾಯೋಗಿಕ ಬಳಕೆ ಕುರಿತು ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (FDP) ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಬೋಧನೆ, ಸಂಶೋಧನೆ ಹಾಗೂ ಆಡಳಿತದ ಕಾರ್ಯಗಳಲ್ಲಿ AI ಪರಿಕರಗಳ ಪರಿಣಾಮಕಾರಿ ಬಳಕೆ ಕುರಿತು ಅಧ್ಯಾಪಕರಿಗೆ ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿ.ಎಂ. ವಿಶ್ವವಿದ್ಯಾಲಯದ FCIT ವಿಭಾಗದ ಡೀನ್ ಡಾ. ಶ್ವೇತಾ ಮರಿಗೌಡರ್, AI ಬಳಸಿ ಸಂಶೋಧನೆ ನಡೆಸುವ ವಿಧಾನ, ಸಂಶೋಧನಾ ಲೇಖನಗಳ ಪ್ರಕಟಣೆ ಹಾಗೂ ಕೃತಿಚೌರ್ಯ ತಡೆಗಟ್ಟುವ ಬಗ್ಗೆ ವಿವರಿಸಿದರು. ಸಂಶೋಧನೆಯಲ್ಲಿ AI ಬಳಕೆಯ ಸದುಪಯೋಗ ಮತ್ತು ನೈತಿಕ ಜವಾಬ್ದಾರಿಗಳ ಬಗ್ಗೆಯೂ ಅಧ್ಯಾಪಕರಿಗೆ ತಿಳಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಶ್ರೀ ರಾಜಶೇಖರ್ ಜಿ.ಸಿ. ಅವರು Gemini AI ಹಾಗೂ ಇ-ಮೇಲ್ ಕರಡು ಸಿದ್ಧಪಡಿಸುವ ಪರಿಕರಗಳ ಪ್ರಾಯೋಗಿಕ ಬಳಕೆಯನ್ನು ಪರಿಚಯಿಸಿದರು. ಶ್ರೀ ವರುಣ್ ಕೆ.ಎಸ್. ಅವರು Prompt Engineering ಮತ್ತು NotebookLM ಬಳಕೆಯ ಬಗ್ಗೆ ವಿವರಿಸಿ, ಅಸೈನ್‌ಮೆಂಟ್‌ಗಳು, ಅಧ್ಯಯನ ಸಾಮಗ್ರಿಗಳು ಹಾಗೂ ಬೋಧನಾ ಸಂಪನ್ಮೂಲಗಳನ್ನು ಸಿದ್ಧಪಡಿಸಲು AI ಪರಿಕರಗಳನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಕುಂತಲಾ ಎನ್. ಅವರು, ತಂತ್ರಜ್ಞಾನ ಆಧಾರಿತ ಬೋಧನೆ ಮತ್ತು ಸಂಶೋಧನೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ತಂತ್ರಜ್ಞಾನದ ಅನುಕೂಲ ಮತ್ತು ಅನಾನುಕೂಲಗಳನ್ನು ವಿವರಿಸಿ, ತಂತ್ರಜ್ಞಾನದ ಬೆಳವಣಿಗೆಯಿಂದ ಉದ್ಯೋಗಾವಕಾಶಗಳ ಮೇಲೆ ಆಗುವ ಪರಿಣಾಮ ಕುರಿತು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಬಸವರಾಜ ವೆಂಕಣ್ಣನವರು ಸ್ವಾಗತಿಸಿದರು. ಡಾ. ಯಶೋಧ ಆರ್. ಪ್ರಾರ್ಥಿಸಿದರು. ಯೋಗೀಶ್ ಕೆ.ಎಂ. ನಿರೂಪಿಸಿದರು. ಪ್ರವೀಣ್ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ IQAC ಸಹ-ಸಂಯೋಜಕ ಶ್ರೀ ಅಬ್ದುಲ್ ಬಶೀರ್, ಗ್ರಂಥಪಾಲಕರಾದ ಪ್ರೊ. ಚಿದಾನಂದಪ್ಪ ಎಸ್. ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಜ್ಞಾನ ಮತ್ತು ಬಿಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀ ವೆಂಕಪ್ಪನವರ ಬಸವರಾಜ ಅವರು ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು
📲Get App