🔥 TRENDING अररिया, 24 अक्टूबर 2026 पटना हवाई अड्डे पर लोक जनशक्ति पार्टी... ભરૂચમાં એમઆર ચોકડીથી ટેન્કર પુલની બાઉન... रामपुर में बारात चलत के दौरान आतिशबाजी... Jamia Millia Islamia Students Continue... Neha Bora Refuses to Sign 10,000 Rupee...
24 Oct 2026•
ગુજરાતી मराठी ਪੰਜਾਬੀ বাংলা
ಮನೆ ಕಳೆದುಕೊಂಡು 32 ವರ್ಷಗಳಾದರೂ ನ್ಯಾಯ ಸಿಗಲಿಲ್ಲ: ಹಕ್ಕುಪತ್ರಕ್ಕೆ ಆಗ್ರಹ

ಮನೆ ಕಳೆದುಕೊಂಡು 32 ವರ್ಷಗಳಾದರೂ ನ್ಯಾಯ ಸಿಗಲಿಲ್ಲ: ಹಕ್ಕುಪತ್ರಕ್ಕೆ ಆಗ್ರಹ

✍️ Reporter: Irfan Ahmad 🗓 12 Sep 2026, 01:20 AM 👁 87
Share: 💬 WhatsApp 📘 Facebook 𝕏 Post
100 ಅಡಿ ರಸ್ತೆ ನಿರ್ಮಾಣಕ್ಕಾಗಿ ಮನೆಗಳನ್ನು ಕಳೆದುಕೊಂಡು ಪುನರ್ವಸತಿ ನಿವೇಶನ ಪಡೆದಿದ್ದರೂ, ಕಳೆದ 32 ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಾಯುತ್ತಿರುವ ಅಮೀರ್ ಅಹಮ್ಮದ್ ಕಾಲೋನಿ ಸಂತ್ರಸ್ತರು ಇದೀಗ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ.

**ಆಟೋ ಬಕ್ಷಿ ಅವರ ನೇತೃತ್ವದಲ್ಲಿ** ಅಮೀರ್ ಅಹಮ್ಮದ್ ಕಾಲೋನಿ 2ನೇ ಹಂತದ ನಿವಾಸಿಗಳು, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ, ಪುನರ್ವಸತಿ ನಿವೇಶನಗಳಿಗೆ ಹಕ್ಕುಪತ್ರ ನೀಡಬೇಕು ಅಥವಾ ನಿವೇಶನಗಳ ನೋಂದಣಿಯನ್ನು ಅಧಿಕೃತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

1994ರಲ್ಲಿ 100 ಅಡಿ ರಸ್ತೆ ನಿರ್ಮಾಣಕ್ಕಾಗಿ ಅಮೀರ್ ಅಹಮ್ಮದ್ ಕಾಲೋನಿ ಕೊಳಚೆ ಪ್ರದೇಶದಲ್ಲಿದ್ದ ಸುಮಾರು 36 ಮನೆಗಳನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಈ 36 ಕುಟುಂಬಗಳ ಪುನರ್ವಸತಿಗಾಗಿ ಮುಳ್ಳುಕೆರೆ ಗ್ರಾಮದ ಸರ್ವೆ ನಂಬರ್ 49ರಲ್ಲಿ ಒಂದು ಎಕರೆ ಜಮೀನನ್ನು ನಗರಾಭಿವೃದ್ಧಿ ಪ್ರಾಧಿಕಾರ ಖರೀದಿಸಿತ್ತು. ನಂತರ 36 ಸಂತ್ರಸ್ತ ಕುಟುಂಬಗಳಿಗೆ ತಲಾ 20×30 ಅಡಿ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿ, ಮನೆ ನಿರ್ಮಿಸಿಕೊಂಡು ವಾಸಿಸಲು ಅವಕಾಶ ನೀಡಲಾಗಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ.

ಆದರೆ, ನಿವೇಶನಗಳನ್ನು ಹಂಚಿಕೆ ಮಾಡಿ ಹಲವು ವರ್ಷಗಳು ಕಳೆದರೂ ಇದುವರೆಗೂ ಅಧಿಕೃತ ಹಕ್ಕುಪತ್ರ ನೀಡಲಾಗಿಲ್ಲ ಎಂಬುದು ನಿವಾಸಿಗಳ ಆರೋಪವಾಗಿದೆ.

ಹಕ್ಕುಪತ್ರ ಇಲ್ಲದ ಕಾರಣ ಸರ್ಕಾರದ ವಸತಿ ಯೋಜನೆಗಳಡಿ ಸೌಲಭ್ಯ ಪಡೆಯಲು ಹಾಗೂ ಮನೆ ನಿರ್ಮಾಣಕ್ಕಾಗಿ ಸಾಲ ಪಡೆಯಲು ತೊಂದರೆಯಾಗುತ್ತಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಇದರ ನಡುವೆ, ಮೂಲ ಸಂತ್ರಸ್ತರಿಗೆ ಹಂಚಿಕೆಯಾಗಿದ್ದ ಕೆಲವು ನಿವೇಶನಗಳು ಅಗ್ರಿಮೆಂಟ್ ಮೂಲಕ ಇತರರಿಗೆ ವರ್ಗಾವಣೆಯಾಗಿದ್ದು, ಪ್ರಸ್ತುತ ಕೆಲವರು ಅಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ, ಪ್ರಸ್ತುತ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಅರ್ಹ ನಿವಾಸಿಗಳ ಸ್ಥಿತಿಯನ್ನು ಮರುಪರಿಶೀಲಿಸಿ, ನಿಯಮಾನುಸಾರ ಹಕ್ಕುಪತ್ರ ನೀಡಬೇಕು ಅಥವಾ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನಗಳ ನೋಂದಣಿಯನ್ನು ಅಧಿಕೃತಗೊಳಿಸಬೇಕು ಎಂದು **ಆಟೋ ಬಕ್ಷಿ ಅವರ ನೇತೃತ್ವದಲ್ಲಿ ನಿವಾಸಿಗಳು ಆಗ್ರಹಿಸಿದ್ದಾರೆ.**

32 ವರ್ಷಗಳಿಂದ ಬಾಕಿ ಉಳಿದಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, 100 ಅಡಿ ರಸ್ತೆ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂಬುದು ನಿವಾಸಿಗಳ ಒತ್ತಾಯವಾಗಿದೆ.
📲Get App