🔥 TRENDING ದೇವದುರ್ಗ: ST ಬಾಲಕಿಯರ ವಸತಿ ನಿಲಯಕ್ಕೆ SFI... মাদকবিরোধী অভিযানে ফের বড়সড় সাফল্য র... Meghalaya Cabinet Reshuffle: Paul Lyng... Meghalaya to Review Health Challenges... Meghalaya to Host National Games – Big... Rajnath Singh Highlights Trust and Tec...
04 Nov 2026•
ગુજરાતી मराठी ਪੰਜਾਬੀ বাংলা

ದುಡಿಮೆಗೆ ತಕ್ಕ ಕೂಲಿ ಕೊಡಿ - ರಾಯಚೂರಿನಲ್ಲಿ ವಸತಿ ನಿಲಯ ಕಾರ್ಮಿಕರ ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ - ಮೇ 22ರ ಪರಿಷ್ಕೃತ ವೇತನ ಜಾರಿಗೆ ಆಗ್ರಹ

✍️ Reporter: Ningappa 🗓 02 Nov 2026, 09:38 PM 👁 22
Share: 💬 WhatsApp 📘 Facebook 𝕏 Post

ರಾಯಚೂರು ಜಿಲ್ಲೆಯ ನಾಲ್ಕು ಕಲ್ಯಾಣ ಇಲಾಖೆಗಳ ವಸತಿ ನಿಲಯಗಳಲ್ಲಿ ದುಡಿಯುವ ಅಡುಗೆ, ಸ್ವಚ್ಛತೆ, ಕಾವಲು ಕಾರ್ಮಿಕರಿಗೆ 2-3 ತಿಂಗಳಿಂದ ಸಂಬಳ ಇಲ್ಲ, EPF/ESI ಇಲ್ಲ - ಸರ್ಕಾರದ ಮೇ 22ರ ಪರಿಷ್ಕೃತ ಕನಿಷ್ಠ ವೇತನ ಎಲ್ಲಾ ಇಲಾಖೆಗಳಿಗೆ ಜಾರಿ ಮಾಡಬೇಕು, ಬಾಕಿ ವೇತನ ನೀಡಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ

ದುಡಿಮೆಗೆ ತಕ್ಕ ಕೂಲಿ ಕೊಡಿ - ರಾಯಚೂರಿನ ವಸತಿ ನಿಲಯ ಕಾರ್ಮಿಕರ ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ

ರಾಯಚೂರು: "ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯಬೇಡಿ - ಮೇ 22ರ ಹೊಸ ಸಂಬಳ ಜಾರಿ ಮಾಡಿ!" ಎಂಬ ಘೋಷಣೆಯೊಂದಿಗೆ ರಾಯಚೂರು ಜಿಲ್ಲೆಯ ವಸತಿ ನಿಲಯ ಕಾರ್ಮಿಕರು ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ರಾಯಚೂರು ಜಿಲ್ಲೆಯ ನಾಲ್ಕು ಕಲ್ಯಾಣ ಇಲಾಖೆಗಳ (ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ) ವಸತಿ ನಿಲಯಗಳಲ್ಲಿ ಅಡುಗೆ ಮಾಡುವವರು, ಅಡುಗೆಗೆ ನೆರವಾಗುವವರು, ಸ್ವಚ್ಛತೆ ಮಾಡುವವರು, ಕಾವಲು ಕಾಯುವವರು ಹಗಲು-ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಆದರೂ ದುಡಿಮೆಗೆ ತಕ್ಕ ಕೂಲಿ ಇಲ್ಲ, ಎರಡು-ಮೂರು ತಿಂಗಳಾದರೂ ವೇತನವಿಲ್ಲ, ಇಪಿಎಫ್ ಇಲ್ಲ, ಇಎಸ್‌ಐ ಇಲ್ಲ, ವಾರದ ರಜೆಯೂ ಇಲ್ಲ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

"ಸರ್ಕಾರ ದಿನಾಂಕ 22.05.2026ರಂದು ಕನಿಷ್ಠ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಹಿಂದುಳಿದ ವರ್ಗಗಳ ವಸತಿ ನಿಲಯದ ಕಾರ್ಮಿಕರಿಗೆ ಹೊಸ ವೇತನ ಜಾರಿಯಾಗಿದೆ. ಹಾಗಾದರೆ ಉಳಿದ ಇಲಾಖೆಗಳ ಕಾರ್ಮಿಕರು ಮಾಡಿದ ತಪ್ಪೇನು? ಒಂದೇ ಕೆಲಸಕ್ಕೆ ಬೇರೆ ಬೇರೆ ವೇತನ ಯಾಕೆ? ಈ ತಾರತಮ್ಯ ಯಾಕೆ?" ಎಂದು ಪ್ರಶ್ನಿಸಿದ್ದಾರೆ.

ಪ್ರಮುಖ ಆಗ್ರಹಗಳು:

- ನಾಲ್ಕೂ ಇಲಾಖೆಗಳ ವಸತಿ ನಿಲಯಗಳ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಯಾಗಲಿ.
- ಮೇ 22ರಿಂದ ಅನ್ವಯವಾಗುವಂತೆ ಬಾಕಿ ಅರಿಯರ್ಸ್ ಕೈ ಸೇರಲಿ.
- ತಿಂಗಳುಗಟ್ಟಲೆ ಬಾಕಿಯಿರುವ ಸಂಬಳ ಕೂಡಲೇ ಪಾವತಿಯಾಗಲಿ.
- ಇಪಿಎಫ್, ಇಎಸ್‌ಐ, ವಾರದ ರಜೆ ಸೇರಿದಂತೆ ಕಾನೂನುಬದ್ಧ ಸೌಲಭ್ಯ ಸಿಗಲಿ.
- ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಎಲ್ಲಾ ವಸತಿ ನಿಲಯಗಳಿಗೆ ಅಗತ್ಯ ಸಿಬ್ಬಂದಿ ನೇಮಕವಾಗಲಿ.
- ಕಡಿಮೆ ಸಿಬ್ಬಂದಿಯ ಮೇಲೆ ಹೆಚ್ಚು ಕೆಲಸದ ಹೊರೆ ಹೇರುವುದನ್ನು ನಿಲ್ಲಿಸಲಿ.

"ಒಂದು ಕಡೆ ವಿದ್ಯಾರ್ಥಿಗಳಿಗೆ ಊಟ, ಮತ್ತೊಂದು ಕಡೆ ಕಾರ್ಮಿಕರಿಗೆ ಸಂಕಷ್ಟ! ಕಾರ್ಮಿಕರ ಬೆವರು ಹರಿದರೆ ಮಾತ್ರ ವಸತಿ ನಿಲಯ ನಡೆಯುತ್ತದೆ. ಅವರ ಹೊಟ್ಟೆಗೆ ಹೊಡೆದು ವಿದ್ಯಾರ್ಥಿಗಳ ಸೇವೆ ಮಾಡಿಸುವುದು ಯಾವ ನ್ಯಾಯ?" ಎಂದು ಸಂಘಟನೆ ಪ್ರಶ್ನಿಸಿದೆ.

ಈ ಬೇಡಿಕೆಗಳನ್ನು ಈಡೇರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ದಿನಾಂಕ 25.11.2026ರೊಳಗೆ ಬೇಡಿಕೆ ಈಡೇರದಿದ್ದರೆ, ನವೆಂಬರ್ 26ರಿಂದ ರಾಯಚೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಘೋಷಣೆಗಳು: ದುಡಿದವರಿಗೆ ನ್ಯಾಯ ಬೇಕು - ಪರಿಷ್ಕೃತ ವೇತನ ಬೇಕು! ಬಾಕಿ ಸಂಬಳ ಕೈ ಸೇರಬೇಕು!

ಹೋರಾಟಕ್ಕೆ ಕರೆ ನೀಡುವ ಸಂಘಟನೆಗಳು:
ಕರ್ನಾಟಕ ರಾಜ್ಯ ವಸತಿ ನಿಲಯಗಳ ಕಾರ್ಮಿಕ ಸಂಘ - TUCI, ಸಿಂಧನೂರು ತಾಲೂಕು ಸಮಿತಿ.
. ಕರ್ನಾಟಕ ರಾಜ್ಯ ಕ್ರೈಸ್ ವಸತಿ ನಿಲಯ ಹೊರಗುತ್ತಿಗೆ ನೌಕರರ ಸಂಘ, TUCI ರಾಯಚೂರು ಜಿಲ್ಲಾ ಸಮಿತಿ.

ಪದಾಧಿಕಾರಿಗಳು: ನಜೀರ್ ಅಹ್ಮದ್ - ಅಧ್ಯಕ್ಷರು, ಸಂತೋಷ ಬಾಲಿ - ಉಪಾಧ್ಯಕ್ಷರು, ಚಂದ್ರಶೇಖರ್ - ಉಪಾಧ್ಯಕ್ಷರು, ಸಂತೋಷ್ - ಜಿಲ್ಲಾ ಕಾರ್ಯದರ್ಶಿ, ಎಂ. ಗಂಗಾಧರ್ - ಗೌರವಾಧ್ಯಕ್ಷರು, ನಾಗಮ್ಮ - ಜಿಲ್ಲಾಧ್ಯಕ್ಷರು, ದೇವೇಂದ್ರಕುಮಾರ್ - ಪ್ರಧಾನ ಕಾರ್ಯದರ್ಶಿ.
📲Get App