🔥 TRENDING Goa College Launches Course on Healthy... हजारीबाग में बरही चौक पर स्कूल बच्चों... Inspection of Comba Wells Cancelled, R... Goa Police Inspector Arrested in Minor... বিজেপি নেতা শমীক ভট্টাচার্য নেতৃত্বে ক... फतेहपुर के कुचेसर रोड पर शिक्षा समारोह...
04 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗ: ST ಬಾಲಕಿಯರ ವಸತಿ ನಿಲಯಕ್ಕೆ SFI ಮುಖಂಡರ ಭೇಟಿ - ಮೂಲಭೂತ ಸೌಕರ್ಯ ಮತ್ತು ಬಸ್ ಸಮಸ್ಯೆ ಪರಿಹಾರಕ್ಕೆ ಆಗ್ರಹ

✍️ Reporter: Ningappa 🗓 04 Nov 2026, 09:35 PM 👁 10
Share: 💬 WhatsApp 📘 Facebook 𝕏 Post

ದೇವದುರ್ಗ ಹೊರವಲಯದ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯಕ್ಕೆ SFI ಮುಖಂಡರ ಭೇಟಿ - ವಸತಿ ನಿಲಯದ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ವಿದ್ಯಾರ್ಥಿನಿಯರ ಬಸ್ ಸಮಸ್ಯೆ ಕುರಿತು ವಾರ್ಡನ್ ಜೊತೆ ಚರ್ಚೆ - ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಮನವಿ - SFI ತಾಲೂಕು ಕಾರ್ಯದರ್ಶಿ ಸಂತೋಷ್ ತ್ಯಾಪ್ಲಿ ನೇತೃತ್ವದ ತಂಡ ಭೇಟಿ

ದೇವದುರ್ಗ ST ಬಾಲಕಿಯರ ಹಾಸ್ಟೆಲ್ ಗೆ SFI ಮುಖಂಡರ ಭೇಟಿ, ಸೌಲಭ್ಯಗಳ ಪರಿಶೀಲನೆ

ದೇವದುರ್ಗ: ಇಂದು ದೇವದುರ್ಗದ ಹೊರವಲಯದಲ್ಲಿ ಇರುವ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯಕ್ಕೆ SFI ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಸತಿ ನಿಲಯದಲ್ಲಿ ಇರುವ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ವಿದ್ಯಾರ್ಥಿನಿಯರಿಗೆ ಎದುರಾಗುತ್ತಿರುವ ಬಸ್ ಸಮಸ್ಯೆಗಳ ಕುರಿತು ವಿದ್ಯಾರ್ಥಿನಿಯರೊಂದಿಗೆ ಮತ್ತು ಹಾಸ್ಟೆಲ್ ವಾರ್ಡನ್ ಜೊತೆ ಚರ್ಚಿಸಲಾಯಿತು. ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸಬೇಕು ಎಂದು ವಾರ್ಡನ್ ಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ SFI ತಾಲೂಕು ಕಾರ್ಯದರ್ಶಿ ಸಂತೋಷ್ ತ್ಯಾಪ್ಲಿ, SFI ಅರಕೇರಾ ತಾಲೂಕು ಅಧ್ಯಕ್ಷರಾದ ಬಾಬು ಶ್ಯಾನೇರದೊಡ್ಡಿ, ಹಾಗೂ ಶಿವರಾಜ್, ಸಿದ್ದೇಶ್ ಮುಂಡರಗಿ, ರಮಾ ಕಾಮ್ರೇಡ್ ಮತ್ತು ಇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು SFI ಮುಖಂಡರು ಒತ್ತಾಯಿಸಿದರು.
📲Get App