🔥 ट्रेंडिंग 5ನೇ ವಾರ್ಡಿನ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟ... प्रतापगढ़ के नायन पंचायत में 35 साल बा... સાબરકાંઠા: રાણી તળાવ વિકાસમાં ગુણવત્તા... ग्राम पंचायत बिलारी में 'बाल विवाह मुक... સાબરકાંઠા માં રાણી તળાવ વિકાસમાં પંચાય... एमके स्टैलिन ने सोनी गांधी की पुस्तक ल...
18 नव. 2026•
ગુજરાતી मराठी ਪੰਜਾਬੀ বাংলা

ಲಿಂಗಸಗೂರು: ನವೆಂಬರ್ 21 ರಂದು ಚಿತ್ತಾಪೂರದಲ್ಲಿ ಪ್ರಜಾಸೇವೆ ಆಂದೋಲನ ಸಭೆ - ಶಾಸಕರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ - ಸಾರ್ವಜನಿಕರು, ರೈತರು ಅಹವಾಲುಗಳೊಂದಿಗೆ ಪಾಲ್ಗೊಳ್ಳಲು ತಹಶೀಲ್ದಾರ್ ಕರೆ

✍️ रिपोर्टर: Ningappa 🗓 18 नव. 2026, 09:33 PM 👁 23
शेयर करें: 💬 WhatsApp 📘 Facebook 𝕏 Post

ಲಿಂಗಸಗೂರು: ನವೆಂಬರ್ 21 ರಂದು ಚಿತ್ತಾಪೂರ ಗ್ರಾಮ ಪಂಚಾಯತ ಆವರಣದಲ್ಲಿ ಪ್ರಜಾಸೇವೆ ಆಂದೋಲನ ಸಭೆ - ಶಾಸಕರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ - ತಾಲೂಕಿನ ಸಾರ್ವಜನಿಕರು, ರೈತರು ತಮ್ಮ ಅಹವಾಲುಗಳೊಂದಿಗೆ ಪಾಲ್ಗೊಳ್ಳಲು ತಹಶೀಲ್ದಾರ್ ಕರೆ - ಪ್ರತಿ ತಿಂಗಳು 2ನೇ, 4ನೇ ಶನಿವಾರ ತಾಲೂಕು, ಹೋಬಳಿ ಮಟ್ಟದಲ್ಲಿ ಸಭೆ

ಲಿಂಗಸಗೂರು: ನವೆಂಬರ್ 21 ರಂದು ಚಿತ್ತಾಪೂರದಲ್ಲಿ ಪ್ರಜಾಸೇವೆ ಆಂದೋಲನ ಸಭೆ

ಲಿಂಗಸಗೂರು: ಕರ್ನಾಟಕ ಸರ್ಕಾರ, ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ಲಿಂಗಸಗೂರು ವತಿಯಿಂದ ದಿನಾಂಕ 18/11/2026 ರಂದು ಪ್ರಜಾಸೇವೆ ಆಂದೋಲನ ಸಭೆಗಳನ್ನು ಆಯೋಜಿಸುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಸರ್ಕಾರದ ಉಪ ಕಾರ್ಯದರ್ಶಿ ಪ್ರಜಾ ಸೇವಾ ಇಲಾಖೆ ಬೆಂಗಳೂರು ಇವರ ಪತ್ರ ಸಂ.ಕಂ.ಸಿ.ಆಸು.ಇ.33.2026-27 ದಿನಾಂಕ 28/08/2026 ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ಇವರ ಪತ್ರ ಸಂ.ಕಂ.ಪಿ.ಜಿ.ಸಿ.596/26-27 ದಿನಾಂಕ 18/08/2026 ರಂತೆ, ಪ್ರತಿ ತಿಂಗಳು ಎಲ್ಲಾ 2ನೇ ಶನಿವಾರ ಹಾಗೂ 4ನೇ ಶನಿವಾರ ಸೇರಿದಂತೆ ತಾಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾ ಸೇವೆ ಆಂದೋಲನ ಸಭೆಗಳನ್ನು ಆಯೋಜಿಸಬೇಕೆಂದು ಮತ್ತು ಪ್ರತಿ ತಿಂಗಳ 1ನೇ ಶನಿವಾರ ಹಾಗೂ 3ನೇ ಶನಿವಾರ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಎಲ್ಲಾ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ನಡೆಸಬೇಕೆಂದು ಸೂಚಿಸಿರುತ್ತಾರೆ.

ಅದರಂತೆ ದಿನಾಂಕ 21/11/2026 ರಂದು ಪ್ರಜಾಸೇವೆ ಆಂದೋಲನ ಸಭೆಯನ್ನು ಮಾನ್ಯ ಶಾಸಕರು ಲಿಂಗಸಗೂರು ರವರ ಅಧ್ಯಕ್ಷತೆಯಲ್ಲಿ ಚಿತ್ತಾಪೂರ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 3-00 ಗಂಟೆಗೆ ವರೆಗೆ ಏರ್ಪಡಿಸಲಾಗಿದೆ.

ಕಾರಣ ತಾಲೂಕಿನ ಎಲ್ಲಾ ಸಮಸ್ತ ಸಾರ್ವಜನಿಕರು, ರೈತರು ಸದರಿ ಸಭೆಯಲ್ಲಿ ತಮ್ಮ ಅಹವಾಲುಗಳೊಂದಿಗೆ ಪಾಲ್ಗೊಳ್ಳಲು ಕೋರಿ ತಮ್ಮ ದೃಶ್ಯ ಮಾಧ್ಯಮದಲ್ಲಿ / ಪತ್ರಿಕೆಯಲ್ಲಿ ಉಚಿತವಾಗಿ ವ್ಯಾಪಕ ಪ್ರಚಾರ ಮಾಡಲು ಈ ಮೂಲಕ ಕೋರಲಾಗಿದೆ ಎಂದು ತಹಶೀಲ್ದಾರ್ ಲಿಂಗಸಗೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
📲Get App