🔥 TRENDING Chhattisgarh Announces 1,703 Governmen... पंचायतीराज चुनाव के तीसरे चरण मे ं 4 प... कलेक्टर ने स्वदेशी उत्पाद अपनाने की अप... Supreme Court says compulsory retireme... Stubble burning cases exceed 3,000 in... CG State Power Company Announces 2026...
07 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ ಜಿಲ್ಲಾ ಅಂಗನವಾಡಿ ನೌಕರರ ಸಮ್ಮೇಳನ - 2018ರಿಂದ ವೇತನ ಹೆಚ್ಚಳ ಇಲ್ಲ, ಕೇಂದ್ರ ಸರ್ಕಾರದ ನೀತಿ ಖಂಡನೆ - ಡಿ. 23-25 ಬೆಳಗಾವಿಯಲ್ಲಿ ರಾಜ್ಯ ಸಮ್ಮೇಳನ, ಡಿ. 1-2 ಸಂಸತ್ ಚಲೋಗೆ ಕರೆ - ನೂತನ ಸಮಿತಿ ಆಯ್ಕೆ

✍️ Reporter: Ningappa 🗓 07 Nov 2026, 03:32 PM 👁 16
Share: 💬 WhatsApp 📘 Facebook 𝕏 Post

ರಾಯಚೂರಿನ ಮಾದಾರ ಚೆನ್ನಯ್ಯ ಸಭಾ ಭವನದಲ್ಲಿ ಜಿಲ್ಲಾ ಅಂಗನವಾಡಿ ನೌಕರರ ಸಮ್ಮೇಳನ - ಕೇಂದ್ರ ಸರ್ಕಾರ ಯೋಜನೆಗಳಿಗೆ ಅನುದಾನ ಕಡಿತ, ಬೆಲೆಏರಿಕೆಗೆ ತಕ್ಕ ವೇತನ ಹೆಚ್ಚಳ ಇಲ್ಲ, 2018ರಿಂದ ವೇತನ ಹೆಚ್ಚಳ ಇಲ್ಲ ಎಂದು ಆರೋಪ - ಡಿ. 23-25 ಬೆಳಗಾವಿಯಲ್ಲಿ ರಾಜ್ಯ ಸಮ್ಮೇಳನ, ಡಿ. 1-2 ಸಂಸತ್ ಚಲೋಗೆ ತಯಾರಿಗೆ ಕರೆ - ಅಧ್ಯಕ್ಷರಾಗಿ ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿಯಾಗಿ ರಮಾ ಆಯ್ಕೆ

ರಾಯಚೂರಿನಲ್ಲಿ ಜಿಲ್ಲಾ ಅಂಗನವಾಡಿ ನೌಕರರ ಸಮ್ಮೇಳನ

ರಾಯಚೂರು: ರಾಯಚೂರು ಜಿಲ್ಲಾ ಅಂಗನವಾಡಿ ನೌಕರರ ಸಮ್ಮೇಳನ ರಾಯಚೂರಿನ ಮಾದಾರ ಚೆನ್ನಯ್ಯ ಸಭಾ ಭವನದಲ್ಲಿ ನಡೆಯಿತು.

ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಸುನಂದ ನೆರವೇರಿಸಿ ಮಾತನಾಡಿದರು.

ಡಿಸೆಂಬರ್ 23, 24, 25 ರಂದು ಬೆಳಗಾವಿಯಲ್ಲಿ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಯೋಜನೆಗಳಿಗೆ ಅನುದಾನ ಕಡಿತ ಮಾಡುತ್ತಿದೆ. ಬೆಲೆಏರಿಕೆಗೆ ತಕ್ಕ ಹಾಗೆ ವೇತನ ಹೆಚ್ಚಳ ನೀಡಿಲ್ಲ. ಕಾರ್ಮಿಕರ ಹಕ್ಕುಗಳನ್ನು ಕಸಿದು 4 ಸಂಹಿತೆಗಳನ್ನಾಗಿ ಮಾಡಿದೆ. 2018ರಿಂದ ವೇತನ ಹೆಚ್ಚಳ ಮಾಡಿಲ್ಲ ಎಂದು ಹೇಳಿದರು.

ಡಿಸೆಂಬರ್ 1, 2 ರಂದು ಕಾರ್ಮಿಕರ ಸಂಸತ್ ಚಲೋಗೆ ನಾವೆಲ್ಲಾ ತಯಾರಾಗಬೇಕಿದೆ ಎಂದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕಾ. ಶರಣಬಸವ ಮಾತನಾಡಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನತೆಯ ಮಧ್ಯೆ ಪ್ರಚಾರ ಮಾಡಬೇಕು ಎಂದರು.

ರೈತರ ಸಂಘದ ಜಿಲ್ಲಾಧ್ಯಕ್ಷರಾದ ಕಾ. ವೀರೇಶ ಶುಭಕೋರಿ ಮಾತನಾಡಿದರು. ಸಮಾರೋಪ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಕಾ. ಶಾಂತಾ ಘಂಟೆ ಮಾತನಾಡಿದರು.

ನೂತನ ಸಮಿತಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕಾ. ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿಯಾಗಿ ಕಾ. ರಮಾ, ಖಜಾಂಚಿಯಾಗಿ ಕಾ. ಪ್ರಸಂಗಿ, ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಯಿತು.
📲Get App