🔥 ट्रेंडिंग जिले में 49 ग्रामीण आशा कार्यकर्ता के... साइक्लोन मुरासु घटकर डिप्रेशन, कोस्टल... मुरासु चक्रवात 3 नवंबर को आंध्र प्रदेश... सफाई अभियान गुजरात के मुख्यमंत्री भुपेंद्र पटेल ने... जीएमडीसीएल के शेयर 9% बढ़े, बाजार में...
04 नव. 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ ಜಿಲ್ಲಾ SC/ST ಸಾಮಾಜಿಕ ನ್ಯಾಯ ಸಭೆ - ADGP ಪಿ. ಹರೀಶೇಖರನ್, DC ಪೂವಿತ್ ಎಸ್, SP ಅರುಣಾಂಶು ಗಿರಿ ಭಾಗಿ

✍️ रिपोर्टर: Ningappa 🗓 03 नव. 2026, 02:36 PM 👁 18
शेयर करें: 💬 WhatsApp 📘 Facebook 𝕏 Post

ರಾಯಚೂರು ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಾಮಾಜಿಕ ನ್ಯಾಯ ಸಭೆ - ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ADGP ಪಿ. ಹರೀಶೇಖರನ್ IPS, ಜಿಲ್ಲಾಧಿಕಾರಿ ಪೂವಿತ್ ಎಸ್, ಎಸ್ಪಿ ಅರುಣಾಂಶು ಗಿರಿ ಸೇರಿದಂತೆ ಅಧಿಕಾರಿಗಳು ಮತ್ತು ಸಂಘಟನೆ ಮುಖಂಡರ ಭಾಗಿ

ರಾಯಚೂರು, ನ. 3: ರಾಯಚೂರು ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಾಮಾಜಿಕ ನ್ಯಾಯ ಸಭೆ ಇತ್ತೀಚೆಗೆ ಜಿಲ್ಲಾಡಳಿತ ವತಿಯಿಂದ ನಡೆಯಿತು.

ಈ ಸಭೆಯಲ್ಲಿ ಸನ್ಮಾನ್ಯ ಶ್ರೀ ಪಿ. ಹರೀಶೇಖರನ್ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು, ಸನ್ಮಾನ್ಯ ಶ್ರೀಮತಿ ಪೂವಿತ್ ಎಸ್, ಜಿಲ್ಲಾಧಿಕಾರಿಗಳು, ರಾಯಚೂರು, ಸನ್ಮಾನ್ಯ ಶ್ರೀ ಅರುಣಾಂಶು ಗಿರಿ, ಪೊಲೀಸ್ ಅಧೀಕ್ಷಕರು, ರಾಯಚೂರು ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಸಭೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಲೇವಾರಿ, ಪರಿಹಾರ ವಿತರಣೆ, ಸಾಮಾಜಿಕ ನ್ಯಾಯದ ಅನುಷ್ಠಾನ, ನಾಗರಿಕ ಹಕ್ಕುಗಳ ರಕ್ಷಣೆ ಕುರಿತು ಚರ್ಚಿಸಲಾಯಿತು. ಸಲ್ಲಿಕೆಯಾದ ಅಹವಾಲುಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ADGP ಅವರು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.
📲Get App