🔥 TRENDING सासाराम में दीपावली, छठ एवं कार्तिक पू... गोपालगंज के जलालपुर में सरकारी जमीन से... हरदोई के अतरौली थाना क्षेत्र में दो पक... सवाई माधोपुर के बोरीफ गांव मे ं पहुंचा... शाहाबाद में कपड़े की दुकान से लड़की बर... સુપ્રીમ કોર્ટ અને ગુજરાત હાઈકોર્ટ દ્વા...
29 Nov 2026•
ગુજરાતી मराठी ਪੰਜਾਬੀ বাংলা

ಪರಂಪರಾ ರಕ್ಷಣಾ ದಿನದ ಆಚರಣೆಗೆ ಪೂರ್ವಭಾವಿ ಸಭೆ ಯಶಸ್ವಿ

✍️ Reporter: Viswanatha D R 🗓 29 Nov 2026, 05:58 PM 👁 21
Share: 💬 WhatsApp 📘 Facebook 𝕏 Post
ಹರಿಹರ, ನ. 29: ಪರಂಪರೆ, ಸಂಸ್ಕೃತಿ ಹಾಗೂ ಧಾರ್ಮಿಕ ಮೌಲ್ಯಗಳ ಸಂರಕ್ಷಣೆ ಮಾಡುವುದರ ಜೊತೆಗೆ ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪರಂಪರಾ ರಕ್ಷಣಾ ದಿನದ ಆಚರಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯು ಭಾನುವಾರ ಮಧ್ಯಾಹ್ನ ಹರಿಹರ ತಾಲ್ಲೂಕಿನ ಶಿವನಹಳ್ಳಿಯ ವೈರಾಗ್ಯಧಾಮದಲ್ಲಿ ಯಶಸ್ವಿಯಾಗಿ ನಡೆಯಿತು.

ಶ್ರೀ ಷ. ಬ್ರ. ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಪರಂಪರಾ ರಕ್ಷಣಾ ದಿನದ ಆಚರಣೆಯ ಉದ್ದೇಶ, ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಅನುಷ್ಠಾನದ ಕುರಿತು ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಡಿಸೆಂಬರ್ 22ರಂದು ಕೇದಾರ ಜಗದ್ಗುರುಗಳ ನೇತೃತ್ವದಲ್ಲಿ ನಡೆಯಲಿರುವ ಸಂಗೀತ ಇಷ್ಟಲಿಂಗ ಮಹಾಪೂಜೆಯ ಆಯೋಜನೆ ಕುರಿತು ಸಮಾಲೋಚನೆ ನಡೆಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಭಕ್ತರಿಂದ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸುವುದರ ಜೊತೆಗೆ ತಮ್ಮ ಸಲಹೆ-ಸಹಕಾರ ನೀಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ಭಕ್ತರಿಂದ ವ್ಯಕ್ತವಾಯಿತು.

ಸಭೆಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸಚೇತಕ ಡಾ. ಎ. ಎಚ್.ಶಿವಯೋಗಿ ಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಂ. ಸುರೇಶ್, ಸೇರಿದಂತೆ ಧಾರ್ಮಿಕ ಮುಖಂಡರು, ಭಕ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.
📲Get App