🔥 TRENDING Keerthy Suresh Stars in Mysskin’s ‘Sat... Maharashtra Cabinet Grants Free Food G... Maharashtra CM Fadnavis Extends Invita... ਤੇਜ਼ ਰਫ਼ਤਾਰ ਜ਼ਿੰਦਗੀ ’ਚ ਤੰਦਰੁਸਤ ਰਹਿਣ ਲਈ... 106 Maharashtra tourists rescued from... Akhilesh Yadav Accelerates Seat Alloca...
27 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ಭಕ್ತ ಕನಕದಾಸರ ಜಯಂತಿ ಅರ್ಥಪೂರ್ಣ ಆಚರಣೆಜಾತಿ–ಮತಗಳ ಎಲ್ಲೆ ಮೀರಿ ಮಾನವೀಯತೆ ಸಾರಿದ ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಿವಪ್ಪ ಉಪ್ರಾಳ

✍️ Reporter: Khaja Hussain 🗓 27 Nov 2026, 06:27 PM 👁 29
Share: 💬 WhatsApp 📘 Facebook 𝕏 Post
**ದೇವದುರ್ಗ ಬ್ರೇಕಿಂಗ್ ನ್ಯೂಸ್**

# ದೇವದುರ್ಗದಲ್ಲಿ ಭಕ್ತ ಕನಕದಾಸರ ಜಯಂತಿ ಅರ್ಥಪೂರ್ಣ ಆಚರಣೆ

### ಜಾತಿ–ಮತಗಳ ಎಲ್ಲೆ ಮೀರಿ ಮಾನವೀಯತೆ ಸಾರಿದ ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಿವಪ್ಪ ಉಪ್ರಾಳ

**ದೇವದುರ್ಗ, ನ. 27:** ದೇವದುರ್ಗ ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಭಕ್ತಿ, ಸಡಗರ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಕೆಇಬಿ ಮುಖ್ಯ ರಸ್ತೆಯಲ್ಲಿರುವ ಕನಕದಾಸರ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಿವಪ್ಪ ಉಪ್ರಾಳ, ಕನಕದಾಸರು ಜಾತಿ–ಮತಗಳ ಎಲ್ಲೆಯನ್ನು ಮೀರಿ ಇಡೀ ಮನುಕುಲಕ್ಕೆ ಮಾನವೀಯತೆಯ ಸಂದೇಶ ಸಾರಿದ ಮಹಾನ್ ಸಂತರು. ಅವರ ಕೀರ್ತನೆಗಳು ಹಾಗೂ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಅವರು ಪ್ರತಿಪಾದಿಸಿದ ಸಾಮಾಜಿಕ ಸಮಾನತೆ ಮತ್ತು ಸಮಾಜ ಸುಧಾರಣೆಯ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.



ಇದೇ ಸಂದರ್ಭದಲ್ಲಿ ನೂತನ ತಾಲೂಕು ಸಮಾಜ ಕಲ್ಯಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶಿವಪ್ಪ ಉಪ್ರಾಳ ಅವರನ್ನು ಎಂ.ಆರ್.ಎಚ್.ಎಸ್. ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಅವರು ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಎಂ.ಆರ್.ಎಚ್.ಎಸ್. ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಮನ್ನಾಪುರಿ, ಭಕ್ತ ಕನಕದಾಸರು 16ನೇ ಶತಮಾನದ ಕರ್ನಾಟಕದ ಹರಿದಾಸ ಪರಂಪರೆಯ ಪ್ರಮುಖ ಸಂತರು, ಕವಿಗಳು, ದಾರ್ಶನಿಕರು ಹಾಗೂ ಸಮಾಜ ಸುಧಾರಕರಾಗಿದ್ದರು. ಪುರಂದರದಾಸರೊಂದಿಗೆ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೀರ್ತನೆಗಳು ಸಮಾಜದಲ್ಲಿ ಭಕ್ತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ ಬೊಮ್ಮನಾಳ, ಶಿರಸ್ತೇದಾರ್ ಭೀಮರಾಯ ಮೇಟಿ, ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ, ತಾಲೂಕು ವೈದ್ಯಾಧಿಕಾರಿ ಬನದೇಶ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಬಾಗಪ್ಪ ಹುಜರಾತಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಾಬಣ್ಣ ಅಕ್ಕರಕಿ, ಪ್ರವೀಣ ಯಡ್ರಾಮಿ, ಗಂಗಾಧರ, ಮಹಾದೇವ, ಮೌನೇಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್. ಶಿವರಾಜ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ನಾಗರಾಜ ಖಾನಾಪುರ, ಮಲ್ಲಣ್ಣ ತಾತ ಹಿರೇರಾಯಕುಂಪಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನರಸಣ್ಣ ನಿಲವಂಜಿ, ಜಿಲ್ಲಾ ಕಾರ್ಯದರ್ಶಿ ನವೀನ ಕುಮಾರ ದೇವದುರ್ಗ, ಖಜಾಂಚಿ ಮಲ್ಲಯ್ಯ ಬೂದಿನಾಳ, ಅಂಬಣ್ಣ ಹಿರೇರಾಯಕುಂಪಿ, ಕಾನೂನು ಸಲಹೆಗಾರ ಎಸ್.ಬಿ. ಪೂಜಾರಿ, ನಗರ ಘಟಕದ ಅಧ್ಯಕ್ಷ ಶಿವರಾಜ ಡೆಂಗಿ, ಅಯ್ಯಪ್ಪ ಕೊಂಗಂಡಿ, ಅಮರೇಶ್ ಡೆಂಗಿ, ಅಯಣ್ಣ ದಿವಳಗುಡ್ಡ, ಹನುಮಂತ್ರಾಯ ಪೂಜಾರಿ, ಬುರ್ರಪ್ಪ ಗಬ್ಬೂರು, ನರಸಣ್ಣ ಗೌಡ, ಬಿ. ಗಣೇಕಲ್, ಲಕ್ಷ್ಮಣ ಮಸರಕಲ್, ಚನ್ನಬಸವ ಭಂಡಾರಿ ಹಾಗೂ ಶಿವಕುಮಾರ ಚಲವಾದಿ ಸೇರಿದಂತೆ ವಿವಿಧ ದಲಿತಪರ, ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App