🔥 TRENDING सोलापूर जिल्ह्यातील मध्यवर्ती सहकारी ब... रींगस के लाखनी मोड़ पर दो कारों की तेज... श्रावस्ती के सीताद्वार तीसरे मेले में... भोरमध्ये संविधान दिनाचा उत्सव: समता सै... मुख्यमंत्री सुधेंदु अधिकारी ने फरक्का... राष्ट्रीय राजमार्ग 27 पर भंवरगढ़ के पा...
27 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಕನಕ ಜಯಂತಿ ಆಚರಣೆ ಗಣ್ಯಮಾನ್ಯರಿಂದ ಪ್ರತಿಮೆಗೆ ಮಾಲಾರ್ಪಣೆ

✍️ Reporter: Ningappa 🗓 27 Nov 2026, 01:04 PM 👁 25
Share: 💬 WhatsApp 📘 Facebook 𝕏 Post
ಜಾಲಹಳ್ಳಿಯಲ್ಲಿ ಕನಕ ಜಯಂತಿ ಆಚರಣೆ

ದೇವದುರ್ಗ: ತಾಲುಕಿನ ಜಾಲಹಳ್ಳಿ ಗ್ರಾಮದಲ್ಲಿ ಇಂದು ಕನಕ ಜಯಂತಿ ಆಚರಣೆ ಮಾಡಲಾಯಿತು.

ಗ್ರಾಮದ ಮುಖಂಡರು, ವಿವಿಧ ರಾಜಕೀಯ ಪಕ್ಷದ ನಾಯಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು.

ನಂತರ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಣ್ಣ ಕೊಲ್ಕಾರ್ ಮಾತನಾಡಿ,ಕನಕದಾಸರು ತಮ್ಮ ಕೀರ್ತನೆ ಮುಖಾಂತರ ಸಮಾಜದ ಅಸಮಾನತೆಯ ವಿರುದ್ದ ಬಹುದೊಡ್ಡ ಕ್ರಾಂತಿ ಸಾರಿದವರು, "ಕುಲ ಕುಲ ಎಂದು ಬಡಿದಾಡದಿರಿ ಕುಲದ ನೆಲೆ ಏನಾದರೂ ಬಲ್ಲಿರಾ ಬಲ್ಲಿರಾ ಎಂದು" ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದ ಕನಕದಾಸರು ಯುವ ಪೀಳಿಗೆ ಆದರ್ಶ ಆಗಬೇಕಿದೆ. ಅವರ ವಿಚಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿನ ಅಸಮಾನತೆ, ಅಂಧಕಾರ ತೊಳೆಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗೋವಿಂದ ಆಲಗೇರಿ,ಉಪಾಧ್ಯಕ್ಷ ಖುರ್ಷಿದ್ ಪಟೇಲ್, ಶಿವರಾಜ ಬಿದರಾಣಿ,ಭೀಮಣ್ಣ ಗುಮೇದಾರ್,ಶಂಕರಗೌಡ ಮಾ.ಪಾಟೀಲ್,ಶಿವಲಿಂಗಪ್ಪ,ರಂಗನಾಥ ಮುರಾಳ,ಚಂದ್ರಶೇಖರ ಹುನಗುಂದ, ಶರಣಪ್ಪ ಕಾರಲಕುಂಟಿ, ನರಸಣ್ಣ ಪನ್ನೂರ ಗೌಡ,ಯಲ್ಲಪ್ಪ ಗಚ್ಚಿನಮನಿ, ಶಿವರಾಜ ನಡಿಗೇರಿ,ರಮೇಶ್ ಅನ್ವರಿ,ಮುದುರಂಗಪ್ಪ,ಬಸವರಾಜ ಗೋಪಾಳಪುರ,ಬಾಬಾ ಮೆಡಿಕಲ್, ಚಂದಪ್ಪ ಬುದ್ದಿನ್ನಿ,ಈಶಣ್ಣ ಕಾಟಮಳ್ಳಿ, ರಂಗಪ್ಪ ಬಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
📲Get App