🔥 TRENDING No Block Development Officer at Siot B... India's Chilli Prices Hit €2.23/kg FOB... मेराल थाना प्रभारी रवि कुमार केसरी को... Kia India Secures $2B Manufacturing De... NDA Candidates Secure 2,000+ Sarpanch... Congress alleges 65.3% specialist doct...
27 Nov 2026•
ગુજરાતી मराठी ਪੰਜਾਬੀ বাংলা
Education

ಅಳವಡಿಸಿಕೊಳ್ಳಿ: ಬಲಭೀಮರಾವ ಕಚರೆ

✍️ Reporter: Basavaraj pujari 🗓 27 Nov 2026, 04:04 PM 👁 15
Share: 💬 WhatsApp 📘 Facebook 𝕏 Post

ಬೀದರ್: ನಗರದ ಶಹಾಗಂಜ್‌ನ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ (ರಿ.) ಸಂಚಾಲಿತ ಸರಸ್ವತಿ ಶಿಶುಮಂದಿರ, ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ವಿದ್ಯಾರಣ್ಯ ಪ್ರೌಢಶಾಲೆ ಹಾಗೂ ಸರಸ್ವತಿ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮತ್

ಅಳವಡಿಸಿಕೊಳ್ಳಿ: ಬಲಭೀಮರಾವ ಕಚರೆ

ಬೀದರ್: ನಗರದ ಶಹಾಗಂಜ್‌ನ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ (ರಿ.) ಸಂಚಾಲಿತ ಸರಸ್ವತಿ ಶಿಶುಮಂದಿರ, ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ವಿದ್ಯಾರಣ್ಯ ಪ್ರೌಢಶಾಲೆ ಹಾಗೂ ಸರಸ್ವತಿ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನವೆಂಬರ್ 27ರಂದು ಕನಕದಾಸ ಜಯಂತಿಯನ್ನು ಭಕ್ತಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಬಲಭೀಮರಾವ ಕಚರೆ ಮಾತನಾಡಿ, ಸಮಾಜದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಉತ್ತಮ ಮೌಲ್ಯಗಳನ್ನು ಸಾರಿದ ದಾಸಶ್ರೇಷ್ಠ ಕನಕದಾಸರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ. ಅವರ ಜಯಂತಿಯನ್ನು ಆಚರಿಸುತ್ತಿರುವುದು ಪವಿತ್ರ ಹಾಗೂ ಸಾರ್ಥಕ ಕ್ಷಣವಾಗಿದೆ ಎಂದು ಹೇಳಿದರು.

ಎಲ್ಲ ದಾಸಶ್ರೇಷ್ಠರನ್ನು ಹಾಗೂ ಭಕ್ತಿ ಪಂಥದ ಮಹನೀಯರನ್ನು ಸ್ಮರಿಸಿದ ಅವರು, ಮಾನವ ಜನ್ಮ ಅತ್ಯಂತ ಶ್ರೇಷ್ಠವಾದುದು. ಕನಕದಾಸರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೃಕ್ಷ ಮತ್ತು ನದಿಗಳಂತೆ ನಮ್ಮ ಬದುಕನ್ನು ಪರೋಪಕಾರಕ್ಕಾಗಿ ಮುಡಿಪಾಗಿಡಬೇಕು. ಶಿಕ್ಷಕರು ಮಕ್ಕಳಲ್ಲಿ ಇಂತಹ ಆದರ್ಶ ಮೌಲ್ಯಗಳನ್ನು ಬೆಳೆಸುವ ಮೂಲಕ ಅವರನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು. ಪ್ರತಿಯೊಬ್ಬರೂ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಬೌದ್ಧಿಕ ಉಪನ್ಯಾಸ ನೀಡಿದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಇಂದುಮತಿ ಮೇತ್ರೆ ಅವರು ಕನಕದಾಸರ ಜನನ, ಬಾಲ್ಯ ಜೀವನ ಹಾಗೂ ಅವರ ಬದುಕಿನಲ್ಲಿ ನಡೆದ ಮಹತ್ವದ ಘಟನೆಗಳನ್ನು ಕಥೆಗಳ ಮೂಲಕ ವಿವರಿಸಿದರು. ವ್ಯಾಸರಾಯರ ಮಾರ್ಗದರ್ಶನದಲ್ಲಿ ಕನಕದಾಸರು ರಚಿಸಿದ ಕೀರ್ತನೆಗಳು ಹಾಗೂ 'ಮೋಹನ ತರಂಗಿಣಿ', 'ರಾಮಧಾನ್ಯ ಚರಿತ್ರೆ' ಮೊದಲಾದ ಕೃತಿಗಳ ಮಹತ್ವವನ್ನು ತಿಳಿಸಿದರು.

ಕನಕದಾಸರ ಜನಪ್ರಿಯ ಕೀರ್ತನೆಯಾದ 'ಕುಲ ಕುಲ ಕುಲವೆಂದು ಬಡಿದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?' ಎಂಬ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡಿದ ಅವರು, ಕನಕದಾಸರು ಮನುಷ್ಯ ಕುಲವೊಂದೇ ಎಂಬ ಮಾನವೀಯ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ. ಜಾತಿ ಭೇದಗಳನ್ನು ಮೀರಿ ಸಮಾನತೆ ಮತ್ತು ಮಾನವೀಯತೆಯಿಂದ ಬದುಕುವಂತೆ ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅವರ ಜೀವನದ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಊರ್ಮಿಳಾ ಬಕ್ಷಿ ಹಾಗೂ ಸಂಸ್ಥೆಯ ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಸಹಶಿಕ್ಷಕಿ ವೈಶಾಲಿ ಮಣಗೀರೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ವರಿ ಬಿರಾದಾರ ವೈಯಕ್ತಿಕ ಗೀತೆ ಹಾಡಿದರು. ಸರಿತಾ ಬಿರಾದಾರ ವಂದನಾರ್ಪಣೆ ಮಾಡಿದರು. ಪೂಜಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಸಾಮೂಹಿಕ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
📲Get App