🔥 TRENDING Crowne Plaza Today New Delhi Okhla Hos... FMS Delhi MBA 2027 admissions: applica... Congress Holds ‘Constitution Save’ Ral... લીલીયા તાલુકા ના ગુદરણ ગામે બે પક્ષ વચ... Punjab Chief Secretary KP Sinha Skips... Congress Holds 'Constitution Save' Ral...
26 Nov 2026•
ગુજરાતી मराठी ਪੰਜਾਬੀ বাংলা
National

ಭೂ ಕಬಳಿಕೆ: ಔರಾದ್ ಶಾಸಕರಿಗೆ ನ್ಯಾಯಾಲಯ ನೋಟಿಸ್

✍️ Reporter: Basavaraj pujari 🗓 26 Nov 2026, 02:05 PM 👁 19
Share: 💬 WhatsApp 📘 Facebook 𝕏 Post

ಬೀದರ್: ಸರ್ಕಾರಿ ಭೂಮಿ ಕಬಳಿಕೆಗೆ ಸಂಬಂಧಿಸಿದಂತೆ ಔರಾದ್ ಶಾಸಕ ಪ್ರಭು ಚವಾಣ್ ಅವರಿಗೆ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. 2027 ರ ಜನವರಿ 19 ರ ಒಳಗೆ ನೋಟಿಸ್‍ಗೆ ಪ್ರತಿ

ಭೂ ಕಬಳಿಕೆ: ಔರಾದ್ ಶಾಸಕರಿಗೆ ನ್ಯಾಯಾಲಯ ನೋಟಿಸ್

ಬೀದರ್: ಸರ್ಕಾರಿ ಭೂಮಿ ಕಬಳಿಕೆಗೆ ಸಂಬಂಧಿಸಿದಂತೆ ಔರಾದ್ ಶಾಸಕ ಪ್ರಭು ಚವಾಣ್ ಅವರಿಗೆ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
2027 ರ ಜನವರಿ 19 ರ ಒಳಗೆ ನೋಟಿಸ್‍ಗೆ ಪ್ರತಿಕ್ರಿಯೆ ನೀಡಬೇಕು ಎಂದು ನವೆಂಬರ್ 19 ರಂದು ಹೊರಡಿಸಿದ ನೋಟಿಸ್‍ನಲ್ಲಿ ಸೂಚಿಸಿದೆ.
ಶಾಸಕ ಪ್ರಭು ಚವಾಣ್ ಅವರು ಖೊಟ್ಟಿ ದಾಖಲೆ ಸೃಷ್ಟಿಸಿ ಬೀದರ್ ತಾಲ್ಲೂಕಿನ ಕೊಳಾರ(ಬಿ) ಗ್ರಾಮದ ಸರ್ವೇ ಸಂಖ್ಯೆ 102 ರಲ್ಲಿರುವ 3 ಎಕರೆ 19 ಗುಂಟೆ ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂದು ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ ಚಾಂದೋರಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ 2024 ರಲ್ಲಿ ದಾವೆ ಹೂಡಿದ್ದು, ವಿಚಾರಣೆ ನಡೆಯುತ್ತಿದೆ.
ಗ್ರಾಮ ನಕಾಶೆ ಹಾಗೂ ಕಂದಾಯ ಇಲಾಖೆ ದಾಖಲೆ ಪ್ರಕಾರ ಜಮೀನು ಸರ್ಕಾರಕ್ಕೆ ಸೇರಿದೆ. ಗ್ರಾಮ ನಕಾಶೆಯಲ್ಲಿ ಹುಲ್ಲುಗಾವಲು ಎಂದಿದೆ. ಪಹಣಿಯಲ್ಲಿ ಖಾಸಗಿ ವ್ಯಕ್ತಿ ಹೆಸರು ಹೇಗೆ ಬಂದಿತು ಎನ್ನುವ ಕುರಿತು ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ 2020 ರಲ್ಲಿ ಅಂದಿನ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ನಂತರ ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸರ್ಕಾರಿ ಜಮೀನು ಮರಳಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಕ್ರಮ ಸಹ ತೆಗೆದುಕೊಳ್ಳಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮೊರ ಹೋಗಬೇಕಾಯಿತು ಎಂದು ದೀಪಕ್ ಪಾಟೀಲ ಚಾಂದೋರಿ ತಿಳಿಸಿದ್ದಾರೆ.
ಭೂ ಕಬಳಿಕೆಗೆ ಸಂಬಂಧಿಸಿದಂತೆ ವರದಿ ನೀಡದ ಕಾರಣ ನ್ಯಾಯಾಲಯ ಹಿಂದೆ ಜಿಲ್ಲಾಧಿಕಾರಿ ಅವರಿಗೆ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲು ಆದೇಶಿಸಿತ್ತು. ನಂತರ ಜಿಲ್ಲಾಡಳಿತ ನ. 19 ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ಜಮೀನು ಸರ್ಕಾರಿಯಾಗಿದೆ, ಶಾಸಕರ ಹೆಸರಲ್ಲಿ ಸೇಲ್ ಡೀಡ್ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಶಾಸಕರಿಗೆ ನೋಟಿಸ್ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ: ಶಾಸಕರ ಭೂ ಕಬಳಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಕಾರಣಕ್ಕಾಗಿ ಶಾಸಕರು ನನ್ನ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಹಿಂಬಾಲಕರ ಮೂಲಕ ಸುಳ್ಳು ದೂರು ಕೊಡಿಸುವುದು, ಇಲ್ಲ ಸಲ್ಲದ ಆರೋಪ ಹೊರೆಸುವ ಕೆಲಸ ಮಾಡುತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕರ ಮಾಲೀಕತ್ವದ ಪ್ರಭು ಎಂಟರ್‍ಪ್ರೈಸೆಸ್‍ಗೆ ರೂ. 1 ಕೋಟಿಗೂ ಅಧಿಕ ಲಂಚದ ಹಣ ಜಮೆ ಆಗಿರುವುದನ್ನು ಉಲ್ಲೇಖಿಸಿ,
ನಾನು ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದಾಗ, ಅವರು ನನಗೆ 105 ಎಕರೆ ಜಮೀನು ಇದೆ. ಅದರಿಂದ ಆದಾಯ ಬಂದಿದೆ ಎಂದು ಲೋಕಾಯುಕ್ತಕ್ಕೆ ಮಾಹಿತಿ ಕೊಟ್ಟಿದ್ದಾರೆ. 105 ಎಕರೆಯಲ್ಲಿ 40 ಎಕರೆ ಭೂ ಪರಿವರ್ತನೆ ಮಾಡಿಸಿದ್ದಾರೆ. ಅದರೊಳಗೆ ಕೃಷಿ ಮಾಡಲು ಹಾಗೂ ದೊಡ್ಡ ಪ್ರಮಾಣದ ಆದಾಯ ಪಡೆಯಲು ಹೇಗೆ ಸಾಧ್ಯ. ಶಾಸಕರ ವಿವರಣೆ ದಾರಿ ತಪ್ಪಿಸುವ ಪ್ರಯತ್ನ ಎಂದು ಪಾಟೀಲ ಆರೋಪಿಸಿದ್ದಾರೆ.
ಶಾಸಕರ ಭ್ರಷ್ಟಾಚಾರದ ವಿರುದ್ಧ ಕ್ರಮ ಹಾಗೂ ಶಾಸಕರು ಕಬಳಿಸಿರುವ ಭೂಮಿ ಸರ್ಕಾರಕ್ಕೆ ಮರಳುವವರೆಗೆ ನನ್ನ ಹೋರಾಟ ಮುಂದುವರಿಯಲಿದೆ. ನಾನು ಹುಸಿ ಟೀಕೆ, ಟಿಪ್ಪಣಿಗಳಿಂದ ವಿಚಲಿತನಾಗುವುದಿಲ್ಲ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
📲Get App