🔥 TRENDING तेतहली बाजार में मदरसा के दो बच्चों की... भारका देवी वस्त्र भंडार का वाहन शहर मे... നിലമ്പൂർ ബൈപാസ് നിർമ്മാണോദ്ഘാടനം 28ന് पजनीयातोला में कार्तिक पूजा के अवसर पर... સાબરકાંઠા પોલીસ દ્વારા સંવિધાન દિવસની... Mother and Daughter Dragged Into Sea b...
26 Nov 2026•
ગુજરાતી मराठी ਪੰਜਾਬੀ বাংলা
Religion

ನೊಣವಿನಕೆರೆ ಶ್ರೀ ನಾಳೆ ಬೀದರ್‍ಗೆ

✍️ Reporter: Basavaraj pujari 🗓 26 Nov 2026, 02:09 PM 👁 30
Share: 💬 WhatsApp 📘 Facebook 𝕏 Post

ಬೀದರ್: ನೊಣವಿನಕೆರೆಯ ಸೋಮೆಕಟ್ಟೆ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ನ. 28 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾ

ನೊಣವಿನಕೆರೆ ಶ್ರೀ ನಾಳೆ ಬೀದರ್‍ಗೆ

ಬೀದರ್: ನೊಣವಿನಕೆರೆಯ ಸೋಮೆಕಟ್ಟೆ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ನ. 28 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ರೈಲು ಮೂಲಕ ಬೆಳಿಗ್ಗೆ 8ಕ್ಕೆ ನಗರದ ರೈಲು ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಕಾರುಗಳ ಮೆರವಣಿಗೆಯಲ್ಲಿ ಭಾಲ್ಕಿ ತಾಲ್ಲೂಕಿನ ಕಪಲಾಪುರ(ಎ) ಗ್ರಾಮದ ಗಣೇಶ ಬಸವರಾಜ ಬಿರಾದಾರ ಅವರ ಮನೆಗೆ ತೆರಳಿ, ವಾಸ್ತವ್ಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
29 ರಂದು ಬೀದರ್‍ನ ಘಾಳೆ ಫಂಕ್ಷನ್ ಹಾಲ್‍ನಲ್ಲಿ ನಡೆಯಲಿರುವ ಗಣೇಶ ಬಸವರಾಜ ಬಿರಾದಾರ ಅವರ ವಿವಾಹ ಸಮಾರಂಭದಲ್ಲಿ ಭಾಗಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರೀಗಳು ನಾಡಿನ ಪ್ರಸಿದ್ಧ ಮಠಾಧೀಶರಾಗಿದ್ದಾರೆ. ರಾಜ್ಯ, ರಾಷ್ಟ್ರದ ಗಣ್ಯರು ಸೇರಿ ಅಪಾರ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಭಕ್ತರು ಅವರ ದರ್ಶನ ಪಡೆದು ಪುನೀತರಾಗಬೇಕು ಎಂದು ಕೋರಿದ್ದಾರೆ.
📲Get App