🔥 ट्रेंडिंग श्रद्धा कपूर के दृश्यों को हटाया जाएगा... सलमान खान ने उभरते गायक काज़ी तौकीर के... પાટણ ફાયરિંગ કેસમાં શૂટરોને વાહનો પૂરા... नाशिकच्या पंचवटीतील झोपडपट्टीत भयंकर आ... महाराष्ट्र के मुख्यमंत्री ने मुंबई के... पुण्यातील १०० व्या मराठी साहित्य संमेल...
24 नव. 2026•
ગુજરાતી मराठी ਪੰਜਾਬੀ বাংলা
स्वास्थ्य

ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಕರವೇ ಕಾವಲುಪಡೆ ಆಗ್ರಹ

✍️ रिपोर्टर: Basavaraj pujari 🗓 24 नव. 2026, 11:32 AM 👁 18
शेयर करें: 💬 WhatsApp 📘 Facebook 𝕏 Post

ಬೀದರ್: ಜಿಲ್ಲೆಯಲ್ಲಿ ವೈದ್ಯಕೀಯ ರ‍್ಹತೆ ಹಾಗೂ ಅಧಿಕೃತ ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರ‍್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ಜಿಲ್ಲಾ ಘಟ

ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಕರವೇ ಕಾವಲುಪಡೆ ಆಗ್ರಹ

ಬೀದರ್: ಜಿಲ್ಲೆಯಲ್ಲಿ ವೈದ್ಯಕೀಯ ರ‍್ಹತೆ ಹಾಗೂ ಅಧಿಕೃತ ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರ‍್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಅವಿನಾಶ ಬುಧರಕರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕಲ್ಕತ್ತಾ ಮೂಲದವರು ಎಂದು ಹೇಳಿಕೊಂಡು ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಕ್ಲಿನಿಕ್ ನಡೆಸುತ್ತಿರುವ ಕೆಲವರು, ವೈದ್ಯಕೀಯ ಶಿಕ್ಷಣ ಪಡೆಯದೆ ಜನರಿಗೆ ಚಿಕಿತ್ಸೆ ನೀಡುವ ಮೂಲಕ ವಂಚಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ ಎಂದು ಸಂಘಟನೆ ದೂರಿದೆ.

ಭಾಲ್ಕಿ ತಾಲೂಕಿನ ಶಿವಣಿ, ಖಟಕ ಚಿಂಚೋಳಿ, ದುಬಲಗುಂಡಿ, ಮನ್ನಾಖೇಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾಗೂ ಭಾಲ್ಕಿ ಪಟ್ಟಣದ ಹಲವು ಪ್ರದೇಶಗಳಲ್ಲಿ ಇಂತಹ ವೈದ್ಯರು ಕರ‍್ಯನರ‍್ವಹಿಸುತ್ತಿದ್ದಾರೆ ಎನ್ನಲಾಗಿದೆ. ಬಸವಕಲ್ಯಾಣ, ಔರಾದ್, ಕಮಲನಗರ, ಹುಮನಾಬಾದ್ ಹಾಗೂ ಬೀದರ್ ತಾಲೂಕಿನ ಚಿದ್ರಿ, ಅಣದೂರು ಸೇರಿದಂತೆ ವಿವಿಧೆಡೆ ಅನಧಿಕೃತ ಕ್ಲಿನಿಕ್‌ಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ವೈದ್ಯಕೀಯ ಪದವಿ, ಪ್ರಮಾಣಪತ್ರ ಹಾಗೂ ಕ್ಲಿನಿಕ್ ನಡೆಸಲು ಅಗತ್ಯ ಪರವಾನಗಿ ಇಲ್ಲದಿದ್ದರೂ, ಆರೋಗ್ಯ ಇಲಾಖೆಯ ಅಧಿಕಾರಿಗಳ ನರ‍್ಲಕ್ಷ್ಯದಿಂದ ಇವರು ರಾಜಾರೋಷವಾಗಿ ಕರ‍್ಯನರ‍್ವಹಿಸುತ್ತಿದ್ದಾರೆ. ಆರೋಗ್ಯ ನಿರೀಕ್ಷಕರಿಗೆ ಲಂಚ ನೀಡಿ ಕ್ಲಿನಿಕ್ ನಡೆಸುತ್ತಿರುವುದಾಗಿ ಕೆಲವರು ಹೇಳಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಸಂಘಟನೆ ಮಾಡಿದೆ.

ಔರಾದ್ ತಾಲೂಕಿನ ಜಂಬಗಿ ಪ್ರದೇಶದಲ್ಲಿ ಕ್ಲಿನಿಕ್ ಸೀಜ್ ಮಾಡಿದ ಬಳಿಕವೂ ಮತ್ತೆ ತೆರೆಯುತ್ತಿರುವ ಬಗ್ಗೆ ತನಿಖೆ ನಡೆಸಬೇಕು. ಅನಧಿಕೃತ ವೈದ್ಯರಿಗೆ ಔಷಧ ಪೂರೈಸುವ ಮೆಡಿಕಲ್ ಏಜೆನ್ಸಿಗಳು ಹಾಗೂ ಔಷಧ ವಿತರಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿರುವ ಸಂಘಟನೆ, ಒಂದು ವಾರದೊಳಗೆ ಕ್ರಮ ಕೈಗೊಂಡು ವರದಿ ನೀಡಬೇಕು. ಇಲ್ಲವಾದಲ್ಲಿ ಆರೋಗ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದೆ.

ಈ ಸಂರ‍್ಭದಲ್ಲಿ ಕರವೇ ಕಾವಲುಪಡೆ ಯುವ ಅಧ್ಯಕ್ಷ ಸ್ಟೀಫನ್ ಪೌಲ್, ರಾಜ್ಯ ಉಪಾಧ್ಯಕ್ಷ ವಿ.ಎಂ. ಭಂಗೂರು, ಹಾಗೂ ಸಂಘಟನೆಯ ಮುಖಂಡ ರ‍್ಮೇಂದ್ರ ಉಪಸ್ಥಿತರಿದ್ದರು.
📲Get App