🔥 ट्रेंडिंग ବାଲେଶ୍ୱରରେ ଖେଳ ଛୁଟି ବେଳେ ଦଶମ ଛାତ୍ରଙ୍କୁ... राजकिशोर नगर में नौ दिवसीय श्रीमद भागव... ଭାରତ-ନେପାଳ ମଧ୍ୟରେ ୮ଟି ଗୁରୁତ୍ୱପୂର୍ଣ୍ଣ ଚ... सपोटरा में स्वास्थ्य सेवाओं की समीक्षा... OSSTET-୨୦୨୬ ରେଜଲ୍ଟ ପ୍ରକାଶ, ୪୪,୨୯୮ ପରୀକ... સાબરકાંઠા જિલ્લામાં દારૂ-બિયર હેરાફેરી...
23 नव. 2026•
ગુજરાતી मराठी ਪੰਜਾਬੀ বাংলা
देश

ಸಾಹಿತ್ಯ ಸೇವೆಗಾಗಿ ಸುಬ್ಬಣ್ಣ ಕರಕನಳ್ಳಿಗೆ ಕರ್ನಾಟಕ ಜನಸೇವಾ ರತ್ನ ಪ್ರಶಸ್ತಿ.

✍️ रिपोर्टर: Basavaraj pujari 🗓 23 नव. 2026, 07:28 PM 👁 27
शेयर करें: 💬 WhatsApp 📘 Facebook 𝕏 Post

ಬೀದರಃ ನವೆಂಬರ್ 20 ರಂದು ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ, ಜೈ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆದ 71 ನೇ ಕರ್ನಾಟಕ ರಾಜ್ಯೋತ್ಸವ, ಯುವ ಸಮಾವೇಶ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಜೈಕರವೇ ಸಂಸ್ಥಾಪಕ ಅಧ್

ಸಾಹಿತ್ಯ ಸೇವೆಗಾಗಿ ಸುಬ್ಬಣ್ಣ ಕರಕನಳ್ಳಿಗೆ ಕರ್ನಾಟಕ ಜನಸೇವಾ ರತ್ನ ಪ್ರಶಸ್ತಿ.



ಬೀದರಃ ನವೆಂಬರ್ 20 ರಂದು ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ, ಜೈ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಡೆದ 71 ನೇ ಕರ್ನಾಟಕ ರಾಜ್ಯೋತ್ಸವ, ಯುವ ಸಮಾವೇಶ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಜೈಕರವೇ ಸಂಸ್ಥಾಪಕ ಅಧ್ಯಕ್ಷರಾದ ಅರುಣಕುಮಾರ ಎಸ್ ಪಾಟೀಲ ಉದ್ಘಾಟಿಸಿ, ಕರ್ನಾಟಕದಲ್ಲಿ ಗಡಿಭಾಗದಲ್ಲಿರುವ ಕನ್ನಡ ಮಾಧ್ಯಮದ ಶಾಲಾಕಾಲೇಜುಗಳು ಯಾವುದೇ ಕಾರಣಕ್ಕೂ ಬಂದ ಮಾಡಬಾರದು. ನಾಡಿನ ರೈತರ ಸಮಸ್ಯೆ, ಕಾರ್ಮಿಕರ ಸಮಸ್ಯೆ ಪರಿಹಾರ ಮಾಡಬೇಕು. ಕ್ವೀಟಲಿಲ್ ಕಬ್ಬಿಗೆ ಐದು ಸಾವಿರ ನೀಡಬೇಕು.ಮಳೆಬಾರದ ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ಪ್ರತಿ ಎಕ್ಕರೆಗೆ 25 ಸಾವಿರ ನೀಡಬೇಕು. ಸಣ್ಣ ಅತಿ ಸಣ್ಣ ರೈತರಿಗೆ ಸರ್ಕಾರ ವಿವಿಧ ಯೋಜನೆಗಳ ಮೂಲಕ ಸೌಲಭ್ಯಗಳು ಕಲ್ಪಿಸಿಕೊಡಬೇಕು. ಈ ಭಾಗದಲ್ಲಿರುವ ಹಳ್ಳಿಖೇಡ ಮತ್ತು ನಾರಂಜಾ ಸಕ್ಕರೆ, ಕಾರಖಾನೆಗಳು ಪ್ರಾರಂಭಿಸಬೇಕು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ,ಮಾಜಿ ಸಚಿವರಾದ ಬಂಡೆಪ್ಪಾ ಖಾಶೇಂಪೂರ ಮಾತನಾಡಿ ಬೀದರ ಸೌರ್ಹಾದತೆಯ ಭೂಮಿಯಾಗಿದೆ. ಕನ್ನಡ ಭಾಷೆ ಉಳಿಸಿಬೆಳೆಸುವ ಕೆಲಸ ನಿತ್ಯನಿರಂತರವಾಗಿ ಬೀದರ ನೆಲದಲ್ಲಿ ನಡೆಯುತ್ತಿದೆ. ಜಿಲ್ಲಾ ಗೌರವಾಧ್ಯಕ್ಷ ಸೈಯದ್ ನವಾಜ್ ಚಿಟ್ಟಾ, ಜಿಲ್ಲಾದ್ಯಕ್ಷ ರಮೇಶ ಮರ್ಜಾಪೂರ, ಜಿಲ್ಲಾ ಉಪಾಧ್ಯಕ್ಷ ಮೋಹಸೀನ್ ಪಟೇಲ್ ಖಾಶಂಪೂರ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ (ಕಾವಲುಪಡೆ) ರಾಜ್ಯ ಉಪಾಧ್ಯಕ್ಷ ವಿ. ಎಂ. ಭಂಗೂರೆ, ಮುಖ್ಯ ಅತಿಥಿಗಳಾಗಿ ಭಾಗವಹಿಸದರು. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಅನೀಲ ಶಂಕರ್ ಡಾ. ಸಂಗಪ್ಪ ತೌಡಿ, ಕ್ರಾಂತಿಯ ಬೆಳಕು, ಸಂಘರ್ಷದ ಬೆಳಕು ಕೃತಿ ಬರದಿರುವ ಡಾ. ಸುಬ್ಬಣ್ಣ ಕರಕನಳ್ಳಿ, ಯುವ ಸಾಹಿತಿ ಮರಿಲಿಂಗ ಗುರುಬಸಪ್ಪಾ, ಅಂಕಣಕಾರ ಸಂಗಮೇಶ ಎನ್. ಜವಾದಿ ಜಿಲ್ಲೆಯ ಐದು ಜನ ಸಾಹಿತಿಗಳಿಗೆ ಕರ್ನಾಟಕ ಜನಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜೈ ಕರವೇ ರಾಜ್ಯಾಧ್ಯಕ್ಷ ಮಂಜುನಾಥ ಬಿ. ಹಾಗರಗಿ, ಶೋಯಬ ಚಿಟ್ಟಾ, ಮಂಜೂರ ಇರ್ಪಾನ ಖಾಲಿದ ಚಿಟ್ಟಾ, ಶಶಿಕಾಂತ ಎಸ್ ಪೊಲೀಸ್ ಪಾಟೀಲ್, ನವಾಜಖಾನ, ತನವೀರ ಅಹ್ಮದ ಖಾನ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸಮಾರೋಪ ಸಮಾರಂಭದಲ್ಲಿ ಹವಾಮಲ್ಲಿನಾಥ ಸ್ವಾಮಿ, ಜೈಕರವೇ ಕಾರ್ಯಕರ್ತರಿಗೆ ಸನ್ಮಾನ ಮಾಡಿದರು. ಸಮರಿಗಮಪ ಖ್ಯಾತಿ ಕು. ಶಿವಾನಿ ತಂದೆಯಾದ ಶಿವದಾಸ ಸ್ವಾಮಿ, ಹಾಡುಗಳನ್ನು ಹಾಡಿದರು.
📲Get App