🔥 ट्रेंडिंग ਬਦਲ ਗਿਆ ਇਸ ਸੂਬੇ ਦਾ ਨਾਂ ! CM ਅਧਿਕਾਰੀ ਨੇ... बोदोलैंड लॉटरी के 23 नवंबर 2026 के परि... मजुली में शुरू हुआ रास महोत्सव, असम की... असम ने ‘अतिथि देवो भव’ अभियान शुरू किय... डॉ. निकेता पटेल की अचानक कार्डियक अरेस... भगवान बिरसा मुंडा लोकप्रिय ग्रामीण एवं...
23 नव. 2026•
ગુજરાતી मराठी ਪੰਜਾਬੀ বাংলা

ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ಸನ್ಮಾನಿಸಿ ಶುಭ ಹಾರೈಸಿದ ರವಿ ಬೋಸರಾಜ

✍️ रिपोर्टर: Ningappa 🗓 23 नव. 2026, 10:37 PM 👁 17
शेयर करें: 💬 WhatsApp 📘 Facebook 𝕏 Post
ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ರುದ್ರಪ್ಪ ಅಂಗಡಿ ಹಾಗೂ ನೂತನ ಸದಸ್ಯರಾದ ಶ್ರೀ ಡಿ. ಗೋವಿಂದಪ್ಪ, ಶ್ರೀ ಕೆ. ರಾಮು ತಾಂಡ, ಶ್ರೀ ಮಿಜಾರ್ ಮೊಹಮ್ಮದ್ ಫಸೀಲಲ್ಲಾ ಮತ್ತು ಶ್ರೀಮತಿ ಗಾಯತ್ರಿ ಜಿ. ಅವರನ್ನು ಕಾಂಗ್ರೆಸ್ ಪಕ್ಷದ ಯುವ ಮುಖಂಡ ರವಿ ಬೋಸರಾಜ ಅವರು ಸನ್ಮಾನಿಸಿ, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ನಗರದ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ವೇಗ ನೀಡುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಹಾಗೂ ಸದಸ್ಯರು ಸಮನ್ವಯದಿಂದ ಕಾರ್ಯನಿರ್ವಹಿಸಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಜನಪರ ಕಾರ್ಯಗಳನ್ನು ಕೈಗೊಳ್ಳಲಿ. ರಾಯಚೂರು ನಗರವನ್ನು ಸುಸಜ್ಜಿತ ಹಾಗೂ ಅಭಿವೃದ್ಧಿ ಹೊಂದಿದ ನಗರವನ್ನಾಗಿ ರೂಪಿಸುವಲ್ಲಿ ತಮ್ಮೆಲ್ಲರ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ಶುಭ ಕೋರಿದರು.
📲Get App