🔥 TRENDING बहराइच में पुलिस झण्डा दिवस पर एसपी वि... ग्राम पंचायत गोरता में उत्साह के साथ म... सीतामढ़ी थाना क्षेत्र में पेट्रोल पंप... Ramayana Film Continues Strong Perform... Dhruv Vikram’s Debut Film 'Adithya Var... Tripura Boosts Dearness Allowance to 4...
23 Nov 2026•
ગુજરાતી मराठी ਪੰਜਾਬੀ বাংলা
Defence

ತಾಲೂಕಿನ ವಿವಿಧ ಗ್ರಾಮಕ್ಕೆ ತೆರಳಿ ಗ್ರಾಮದ ಕುಂದು ಕೊರತೆ ಆಲಿಸಿದ ಬಾಬಣ್ಣ

✍️ Reporter: Vasanthakumar C S 🗓 23 Nov 2026, 03:29 PM 👁 33
Share: 💬 WhatsApp 📘 Facebook 𝕏 Post

ಸಮಾಜ ಸೇವೆಗೆ ಸದಾ ಸಿದ್ಧ: ಬಿ.ಬಿ.ಆರ್. ಬಾಬಣ್ಣ

ಪಿರಿಯಾಪಟ್ಟಣ: ಪಟ್ಟಣದ ಬೆಟ್ಟದಪುರ ರಸ್ತೆಯಲ್ಲಿರುವ ಶ್ರೀ ಸಾಯಿ ಸಮುದಾಯ ಭವನದ ಹಿಂಭಾಗದಲ್ಲಿ ಸಮಾಜ ಸೇವಾ ರತ್ನ ಬಿ.ಬಿ.ಆರ್. ನರೇಂದ್ರ ಬಾಬಣ್ಣ ಅವರ ನೂತನ ಸಮಾಜ ಸೇವಾ ಕೇಂದ್ರದ ಕಚೇರಿಯನ್ನು ಸೋಮವಾರ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಬಿ.ಆರ್. ನರೇಂದ್ರ ಬಾಬಣ್ಣ ಅವರು, "ನಾನು ಮೂಲತಃ ಬೆಂಗಳೂರಿನ ಆನೇಕಲ್ ಗ್ರಾಮದವನಾಗಿದ್ದು, ಕಳೆದ 19 ವರ್ಷಗಳಿಂದ ಪಿರಿಯಾಪಟ್ಟಣ ತಾಲೂಕಿನ ಜನರೊಂದಿಗೆ ಒಡನಾಟ ಹೊಂದಿದ್ದೇನೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಈ ಕಚೇರಿಯನ್ನು ಆರಂಭಿಸಿದ್ದೇನೆ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ತಮ್ಮ ಕಷ್ಟ-ಕಾರ್ಪಣ್ಯಗಳನ್ನು ತಿಳಿಸಲು ಕಚೇರಿಗೆ ಆಗಮಿಸಿ ನನ್ನನ್ನು ಸಂಪರ್ಕಿಸಬಹುದು. ಜನರ ಸೇವೆ ಹಾಗೂ ಸಹಕಾರಕ್ಕೆ ನಾನು ಸದಾ ಸಿದ್ಧನಿದ್ದೇನೆ" ಎಂದರು.

ತಾಲೂಕಿನ ಜನರಲ್ಲಿ ಜಾತಿ, ಭೇದ, ಮೇಲು-ಕೀಳು ಎಂಬ ಭಾವನೆಗಳಿಗೆ ಅವಕಾಶ ನೀಡದೆ, ನಾವೆಲ್ಲರೂ ಒಂದೇ ಎಂಬ ಸಹೋದರತ್ವದ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದ ಪ್ರತಿಯೊಬ್ಬರಿಗೂ ನೆರವಾಗುವ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಕಚೇರಿ ಉದ್ಘಾಟನೆಯ ಬಳಿಕ ತಾಲೂಕಿನ ದೊರೆಕೆರೆ, ಹೊಸಕೊಪ್ಪಲು, ರಾಮನಾಥತುಂಗಾ, ಸುಂಡವಾಳು ಹಾಗೂ ನಂದಿಪುರ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು. ಗ್ರಾಮಗಳಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೊಸಕೊಪ್ಪಲು ಗ್ರಾಮದ ರೈತ ಸಂಘದ ಸದಸ್ಯ ಸುಬ್ಬೇಗೌಡ ಅವರು ಗ್ರಾಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಕಾರ ನೀಡುವುದರ ಜತೆಗೆ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಸೌಲಭ್ಯ ಕಲ್ಪಿಸುವಂತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಬಾಬಣ್ಣ ಅವರು, "ಸಮಾಜ ಸೇವೆಯ ಉದ್ದೇಶದಿಂದಲೇ ಈ ತಾಲೂಕಿಗೆ ಬಂದಿದ್ದೇನೆ. ಸಾರ್ವಜನಿಕರ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸ್ಪಂದಿಸಲು ಪ್ರಾಮಾಣಿಕವಾಗಿ ಸಹಕರಿಸುತ್ತೇನೆ" ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗಣೇಶ್ ಹರಿಲಾಪುರ, ಶೇಖರ್ ತಾತನಹಳ್ಳಿ, ಟೈಲರ್ ಗಣೇಶ್, ಟಿ.ಟಿ. ಗೋವಿಂದ, ಶಶಿಕುಮಾರ್, ದೇಪುರ್ ಕರೀಗೌಡ, ಮಹದೇವ್, ತಾತನಹಳ್ಳಿ ಕುಮಾರ್, ತಾತನಹಳ್ಳಿ ಮಹೇಶ್, ಪದ್ಮನಾಭ ಸೇರಿದಂತೆ ಹಲವರು ಉಪಸ್ಥಿತರಿದ್ದರು.

📲Get App