🔥 TRENDING Himachal Police Issues Warning on Risi... Himachal MLAs Split Over New Districts... KLK Ventures Wins 500 kW Solar Project... 20th Bihar Battalion Celebrates 15th R... मुंबईच्या सुरक्षेसाठी मुंबई पोलीस 24x7... धान उपार्जन केन्द्रों में सुविधाओं को...
21 Nov 2026•
ગુજરાતી मराठी ਪੰਜਾਬੀ বাংলা

ಬದಾಮಿ ಕುರಿ ಕಳ್ಳರ ಹಾವಳಿ

✍️ Reporter: Banneppa Kuntoji 🗓 21 Nov 2026, 08:29 PM 👁 14
Share: 💬 WhatsApp 📘 Facebook 𝕏 Post
ಬದಾಮಿ ತಾಲೂಕಿನ ಯರಗೊಪ್ಪ ಎಸ್.ಬಿ. ಗ್ರಾಮದಲ್ಲಿ ಕಳ್ಳತನಕ್ಕೆ ಯತ್ನ: ಚಾಕು ತೋರಿಸಿ ಕುರಿ ಕದ್ದೊಯ್ದ ಕಳ್ಳರು!

ಬದಾಮಿ: ತಾಲೂಕಿನ ಯರಗೊಪ್ಪ ಎಸ್.ಬಿ. ಗ್ರಾಮದಲ್ಲಿ ಮಧ್ಯರಾತ್ರಿ 4ರಿಂದ 5 ಜನರ ಗುಂಪೊಂದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.
ಗ್ರಾಮದ ಎಲ್ಲಪ್ಪ ಶಂಕ್ರಪ್ಪ ಕೊಪ್ಪದ ಅವರಿಗೆ ಸೇರಿದ ಕುರಿದೊಡ್ಡಿಗೆ ಮಧ್ಯರಾತ್ರಿ ನುಗ್ಗಿದ ಕಳ್ಳರ ಗುಂಪು ಒಂದು ಕುರಿಯನ್ನು ಕದ್ದುಕೊಂಡು ಹೋಗಿದೆ. ಈ ವೇಳೆ ಚಾಕು ತೋರಿಸಿ ಭಯ ಹುಟ್ಟಿಸಿ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಯರಗೊಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ರಾತ್ರಿ ವೇಳೆ ಹೆಚ್ಚಿನ ಜಾಗ್ರತೆ ವಹಿಸಬೇಕು.

ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಎಚ್ಚರಿಕೆ ವಹಿಸಿ.
ಕುರಿದೊಡ್ಡಿ, ದನದ ಕೊಟ್ಟಿಗೆ ಹಾಗೂ ಮನೆಗಳ ಭದ್ರತೆಗೆ ಆದ್ಯತೆ ನೀಡಿ.
ಗ್ರಾಮಸ್ಥರು ರಾತ್ರಿ ಪಾಳಿಯಲ್ಲಿ ಕಾವಲು ಕಾಯುವ ವ್ಯವಸ್ಥೆ ಮಾಡಿಕೊಳ್ಳಿ.
📲Get App