🔥 TRENDING कांग्रेस ने पंचायत राज चुनाव में 129 स... सरिस्का के जंगलों में वन्यजीव सुरक्षा... રાજુલાના છતડીયા ગામમાં 70 વર્ષીય વલકુભ... Assam CM extends greetings on Tai Kham... Glass of Stationary Train Shattered at... Armed assailants fire on youths prepar...
21 Nov 2026•
ગુજરાતી मराठी ਪੰਜਾਬੀ বাংলা

ಬಸವಣ್ಣನವರ ಪ್ರತಿಷ್ಠೆ - ಲಿಂಗಾಯತ ಉಳಿಸಲು ವೈದಿಕ ವಿರೋಧಿ ವೈಚಾರಿಕ ಯುದ್ಧಕ್ಕೆ ಸಿದ್ದರಾಗಿ - ರಾಯಚೂರು ಬಸವ ವೃತ್ತದಲ್ಲಿ ಬೃಹತ್ ಪ್ರತಿಭಟನೆ - ಮಾನವ ಸರಪಳಿ ನಿರ್ಮಿಸಿ ಆಕ್ರೋಶ - ಸಾಹಿತ್ಯ ನಿಷೇಧಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

✍️ Reporter: Ningappa 🗓 21 Nov 2026, 04:07 PM 👁 17
Share: 💬 WhatsApp 📘 Facebook 𝕏 Post

ಬಸವಣ್ಣನವರ ಪ್ರತಿಷ್ಠೆ - ಲಿಂಗಾಯತ ಉಳಿಸಲು ವೈದಿಕ ವಿರೋಧಿ ವೈಚಾರಿಕ ಯುದ್ಧಕ್ಕೆ ಸಿದ್ದರಾಗಿ - ರಾಯಚೂರು ಬಸವ ವೃತ್ತದಲ್ಲಿ ಬೃಹತ್ ಪ್ರತಿಭಟನೆ - ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ, ಮಾನವ ಸರಪಳಿ - ಬಸವಣ್ಣನವರಿಗೆ ಅವಮಾನ ಮಾಡಿದ ಕೂಟದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ - ಸಾಹಿತ್ಯ ನಿಷೇಧಿಸಿ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ

ಬಸವಣ್ಣನವರ ಪ್ರತಿಷ್ಠೆ - ಲಿಂಗಾಯತ ಉಳಿಸಲು ವೈದಿಕ ವಿರೋಧಿ ವೈಚಾರಿಕ ಯುದ್ಧಕ್ಕೆ ಸಿದ್ದರಾಗಿ - ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ

ರಾಯಚೂರು:
ವಿಶ್ವಗುರು ಬಸವಣ್ಣನವರಿಗೆ ಅವಮಾನ ಮಾಡಿದ ದುಷ್ಟ ಕೂಟದ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕರ್ನಾಟಕದ ಪ್ರಜ್ಞಾವಂತರು ಅದರಲ್ಲೂ ಸಮಸ್ತ ಶೂದ್ರ, ದಲಿತರು ಈ ಮನುವಾದಿಗಳನ್ನು ಮಣ್ಣು ಮುಕ್ಕಿಸಬೇಕು ಎಂಬ ಒಕ್ಕೊರಳಿನ ಪ್ರಕಟಣೆ ಹೊರಡಿಸಲಾಯಿತು.

ರಾಯಚೂರು ಬಸವ ವೃತ್ತದಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾದ ಪ್ರತಿಭಟನೆಯು, ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ, ನೂರಾರು ಜನರಿಂದ ಬಸವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಈ ಪ್ರತಿಭಟನೆಯಲ್ಲಿ ಕರ್ನಾಟಕ ಲಿಂಗಾಯತ ಮಹಾಸಭಾ, ವೀರಶೈವ ಸಮಾಜ, ಶರಣ ಸಾಹಿತ್ಯ ಪರಿಷತ್ತು, ಅಮರ ಜ್ಞಾನಪೀಠ ಶ್ರೀ ಕೊಡೇಕಲ್ಲ ಬಸವಣ್ಣ ಶಾಖ ಮಠ, ಜಿಲ್ಲಾ ಕುರುಬರ ಸಮಾಜ ಸಂಘ, ಜಿಲ್ಲಾ ಯಾದವ ಸಮಾಜ ಸಂಘ, ದಲಿತ ಸಂಘಟನೆಗಳ ಒಕ್ಕೂಟ, ಜಮಾತ್ ಇಸ್ಲಾಂ ಹಿಂದ್, ಹಡಪದ ಅಪ್ಪಣ್ಣ ಸಮಾಜ, ಮಡಿವಾಳ ಮಾಚಿದೇವರ ಸಮಾಜ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಮಾತನಾಡಿದರು.

ರಾಯಚೂರು ಶಾಸಕರಾದ ಡಾ. ಶಿವರಾಜ್ ಪಾಟೀಲ್, ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಆರ್. ಮಾನಸಯ್ಯ, ವಕೀಲರಾದ ಎಸ್. ಮಾರೆಪ್ಪ, ಬಸವ ಕೇಂದ್ರದ ಅಧ್ಯಕ್ಷರಾದ ರುದ್ರಗೌಡ, ಹರವಿ ನಾಗನಗೌಡ, ಕಾರ್ಯದರ್ಶಿ ಚನ್ನಬಸವಣ್ಣ ಮಹಾಜನಶೆಟ್ಟಿ ಮುಂತಾದ ಮುಖಂಡರು ಪ್ರತಿಭಟನೆಯಲ್ಲಿ ಮಾತನಾಡಿದರು.

ಬಸವಣ್ಣ ಮತ್ತು ಶರಣರ ಸಿದ್ದಾಂತಗಳ ತಂಟೆಗೆ ಬಂದರೆ ಪರಿಸ್ಥಿತಿ ನಿಕೋಪಕ್ಕೆ ಹೋಗುತ್ತದೆ, ಈಗ ನಾವು ಒಗ್ಗಟ್ಟಾಗುತ್ತಿದ್ದೇವೆ, ಇನ್ನು ಮುಂದೆ ನಿಮ್ಮ ಪುಂಡಾಟ ನಡೆಯುವುದಿಲ್ಲ ಎಂಬ ಎಚ್ಚರಿಕೆಗಳನ್ನು ಪ್ರಕಟಿಸಲಾಯಿತು.

ಕೊನೆಯಲ್ಲಿ, ಬಸವಣ್ಣನವರಿಗೆ ಅಪಮಾನ ಮಾಡಿದ ದುಷ್ಟ ಕೂಟದ ಸಾಹಿತ್ಯವನ್ನು ನಿಷೇಧಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ರಾಯಚೂರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯ ಪತ್ರ ಸಲ್ಲಿಸಲಾಯಿತು.

ಇಂದಿನ ಪ್ರತಿಭಟನೆಯಲ್ಲಿ ಅಂಬಿಗರ ಚೌಡಯ್ಯ ಸಮಾಜ, ಮಡಿವಾಳ ಮಾಚದೇವ ಸಮಾಜ, ಮಾದಾರ ಚೆನ್ನಯ್ಯ ಸಮಾಜ, ಹಡಪದ ಅಪ್ಪಣ್ಣ ಸಮಾಜ, ಕುಂಬಾರ ಗುಂಡಯ್ಯ ಸಮಾಜ, ಮಾದಯ್ಯ ಹೂಗಾರ ಸಮಾಜ, ಕುರಬ ಗೊಲ್ಲಾಳ ಸಮಾಜ, ಮೇದಾರ ಕೇತಯ್ಯ ಸಮಾಜ, ಲಿಂಗಾಯತ ಗೌಳಿ ಸಮಾಜ, ಜೇಡರ ದಾಸಿಮಯ್ಯ ಸಮಾಜ, ಭೋವಿ ಸಮಾಜ, ಯಾದವ/ಗೊಲ್ಲ ಸಮಾಜ, ಈಡಿಗ ಸಮಾಜ, ವಿಶ್ವಕರ್ಮ ಸಂಚಾಳ ಸಮಾಜ, ಉಪ್ಪಾರ ಸಮಾಜ, ವಾಲ್ಮೀಕಿ ಸಮಾಜ ಹಾಗೂ ನುಲಿಯ ಚಂದ್ರಯ್ಯ ಸಮಾಜ ಮತ್ತು ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
📲Get App