🔥 TRENDING Uttar Pradesh police lodge FIRs under... Over 22 Sports Competitions to Kick Of... District Administration Thoubal Intens... विकास खण्ड कोंच में मतदाता सूची का पाठ... कार्यालय जिला विधिक सेवा प्राधिकरण, ब्... జనగాం జిల్లా కొడకండ్ల మండల కేంద్రంలో ఇ...
21 Nov 2026•
ગુજરાતી मराठी ਪੰਜਾਬੀ বাংলা
Politics

ನಾಡು, ನುಡಿ, ಜಲ ಹಾಗೂ ಗಡಿ ವಿಚಾರದಲ್ಲಿ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಬೇಕು: ಅರುಣಕುಮಾರ ಎಸ್. ಪಾಟೀಲ

✍️ Reporter: Basavaraj pujari 🗓 21 Nov 2026, 05:59 PM 👁 27
Share: 💬 WhatsApp 📘 Facebook 𝕏 Post

ಬೀದರ್‌ನಲ್ಲಿ ನಡೆದ 71ನೇ ರ‍್ನಾಟಕ ರಾಜ್ಯೋತ್ಸವ ಜಿಲ್ಲಾ ಮಟ್ಟದ ಯುವ ಸಮಾವೇಶವನ್ನು ಜೈ ರ‍್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಎಸ್. ಪಾಟೀಲ ಉದ್ಘಾಟಿಸಿ ಮಾತನಾಡಿದರು.

ನಾಡು, ನುಡಿ, ಜಲ ಹಾಗೂ ಗಡಿ ವಿಚಾರ ಬಂದಾಗ ನಾಡಿನ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಜೈ ರ‍್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಎಸ್. ಪಾಟೀಲ ಹೇಳಿದರು. ಬೀದರ್‌ನ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜೈ ರ‍್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ 71ನೇ ರ‍್ನಾಟಕ ರಾಜ್ಯೋತ್ಸವ ಜಿಲ್ಲಾ ಮಟ್ಟದ ಯುವ ಸಮಾವೇಶ, ವಿವಿಧ ಕ್ಷೇತ್ರಗಳ ಸಾಧಕರಿಗೆ ರ‍್ನಾಟಕ ಜನಸೇವಾ ರತ್ನ ಪ್ರಶಸ್ತಿ ಪ್ರದಾನ ಹಾಗೂ ಚಿತ್ರಕಲೆ, ಪ್ರಬಂಧ ಸ್ರ‍್ಧೆಯಲ್ಲಿ ವಿಜೇತರಾದ ವಿದ್ಯರ‍್ಥಿಗಳ ಸನ್ಮಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ವಿಶ್ವಕ್ಕೆ ಸಮಾನತೆ, ಸ್ವಾಭಿಮಾನ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಬಸವಣ್ಣನವರ ನಾಡು ಬೀದರ್ ಎಂದು ಹೇಳಿದ ಅವರು, ಇಂತಹ ನೆಲದಲ್ಲಿ ಸಕ್ಕರೆ ಕರ‍್ಖಾನೆಗಳು ಆರಂಭವಾಗುತ್ತಿರುವುದು ಸಂತಸದ ವಿಚಾರ ಎಂದು ತಿಳಿಸಿದರು. ಬೆಳೆ ನಾಶದಿಂದ ಸಂಕಷ್ಟದಲ್ಲಿರುವ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಸಂಘಟನೆ ಮೂಲಕ ರ‍್ಕಾರವನ್ನು ಆಗ್ರಹಿಸಲಾಗುವುದು. ನಾಡಿನಲ್ಲಿ ಹುಟ್ಟಿದ ಪ್ರತಿಯೊಂದು ಸಂಘಟನೆಯೂ ನಾಡಿನ ಹಿತ ರಕ್ಷಣೆಗೆ ಶ್ರಮಿಸಬೇಕು. ಅನ್ಯಾಯದ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಬೀದರ್ ಜಿಲ್ಲೆ ವಿಶಿಷ್ಟವಾದ ನೆಲವಾಗಿದೆ. ಇಲ್ಲಿ ಪಂಚಭಾಷೆ ಮಾತನಾಡುವ ಜನರಿದ್ದರೂ ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನ ಕಡಿಮೆಯಾಗಿಲ್ಲ ಎಂದು ತಿಳಿಸಿದರು. ಜೈ ರ‍್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ಬಿ. ಹಾಗರಗಿ, ಕಾನೂನು ಸಲಹೆಗಾರ ಶಂಭುಲಿಂಗ ದಬ್ಬಾಸಾನೋರ, ಜಿಲ್ಲಾಧ್ಯಕ್ಷ ರಮೇಶ ರ‍್ಜಾಪೂರ, ಗೌರವಾಧ್ಯಕ್ಷ ಸೈಯದ್ ನವಾಜ್ ಚಿಟ್ಟಾ, ಉಪಾಧ್ಯಕ್ಷ ಮೊಹಸಿನ್ ಪಟೇಲ್ ಖಾಶೆಂಪೂರ ಸೇರಿದಂತೆ ಹಲವರು ಮಾತನಾಡಿ, ಜಿಲ್ಲೆಯಲ್ಲಿ ಸಮಾಜ ಸೇವೆ ಹಾಗೂ ಜನಪರ ಕರ‍್ಯಗಳಿಗೆ ಸಂಘಟನೆ ಬದ್ಧವಾಗಿದೆ ಎಂದರು.

ಸಮಾರಂಭದಲ್ಲಿ ಸಾಹಿತ್ಯ, ಸಾಂಸ್ಕೃತಿಕ, ರ‍್ಕಾರಿ ಸೇವೆ, ಕೃಷಿ, ಸಮಾಜ ಸೇವೆ, ಮಾಧ್ಯಮ, ಕ್ರೀಡೆ, ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಗಣ್ಯರಿಗೆ ರ‍್ನಾಟಕ ಜನಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಬಂಧ ಸ್ರ‍್ಧೆಯಲ್ಲಿ ಲಾವಣ್ಯ, ಕಲ್ಪನಾ, ಅಭಿಷೇಕ್ ಹಾಗೂ ಚಿತ್ರಕಲೆ ಸ್ರ‍್ಧೆಯಲ್ಲಿ ಅನುನ್ಯ, ಮರಿಯಂ ಗೌಸಿಯಾ, ರತ್ನಜ್ಯೋತಿ ವಿಜೇತರಾಗಿ ಪ್ರೋತ್ಸಾಹಧನ ಹಾಗೂ ಸನ್ಮಾನ ಪತ್ರ ಪಡೆದರು. ಜೈ ಕರವೇ ಜಿಲ್ಲಾ ಪ್ರಧಾನ ಕರ‍್ಯರ‍್ಶಿ ರುಕ್ಮಾನ್ ಚಿದ್ರಿ ಸ್ವಾಗತಿಸಿದರೆ, ಜಿಲ್ಲಾ ಸಂಯೋಜಕ ಶಿವರಾಜ ನೆಳವಾಳಕರ್ ಪ್ರಾಸ್ತಾವಿಕ ಮಾತನಾಡಿದರು. ಸದ್ಗುರು ಸಿದ್ಧಾರೂಢ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚರ‍್ಯ ನಾಗಪ್ಪ ಜಾನಕನೋರ ನಿರೂಪಿಸಿದರು. ಜಿಲ್ಲಾ ಕರ‍್ಯಾಧ್ಯಕ್ಷ ಶಾಮವೇಲ್ ಸಾಜನ್ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಹವಾಮಲ್ಲಿನಾಥ ಸ್ವಾಮೀಜಿ ಕರ‍್ಯರ‍್ತರನ್ನು ಸನ್ಮಾನಿಸಿದರು. ಶಿವದಾಸ ಸ್ವಾಮಿ, ಶಿವಕುಮಾರ ಸ್ವಾಮಿ, ನಾಗೇಶ ಸ್ವಾಮಿ ಅವರ ಗಾಯನ ಕರ‍್ಯಕ್ರಮಕ್ಕೆ ಮೆರುಗು ನೀಡಿತು.
📲Get App